ಹದಗೆಟ್ಟ ರಸ್ತೆ-ಜನರ ಆಕ್ರೋಶ

ಮುಂಡಗೋಡ ಅ.22 ;- ತಾಲೂಕಿನ ನಂದಿಕಟ್ಟಿ ಗ್ರಾಮದ ನವನಗರ ಓಣಿಗಳ ರಸ್ತೆಗಳು ಇದೀಗ ಅಕ್ಷರಶಃ ಕೆಸರುಗುಂಡಿಗಳಾಗಿ ಸಂಪೂರ್ಣವಾಗಿ ಹದಗೆಟ್ಟಿದ್ದು. ಭತ್ತ ನಾಟಿ ಮಾಡುವ ಜಮೀನಿನಲ್ಲಿ ಅಲ್ಲಿ ವಾಸಿಸುವ ಜನರು ಓಡಾಡುವಂತಹ ಸ್ಥೀತಿ ನಿರ್ಮಾಣವಾಗಿದೆ.
ನಿತ್ಯ ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಮತ್ತು ಸಾರ್ವಜನಿಕರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿದ್ದು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಹಿಡಿಶಾಪ್ ಹಾಕುತ್ತಾ ಓಡಾಡುವಂತಹ ಪರಿಸ್ಥೀತಿ ಇಲ್ಲಿ ನಿರ್ಮಾಣವಾಗಿದೆ.
ಕಳೆದ 18 ವರ್ಷದ ಹಿಂದೆ ಈ ನವನಗರ ಪ್ಲಾಟ್ ನಿರ್ಮಾಣವಾಗಿದ್ದು, ಅಲ್ಲಿಂದ ಇಲ್ಲಿಯ ವರೆಗೂ ಈ ರಸ್ತೆಗಳ ಸ್ಥೀತಿ ಇದೆ ರೀತಿ ಇದ್ದು, ಮಳೆಗಾಲ ಆರಂಭ ಆದರೆ ಸಾಕು, ಈ  ಓಣಿಗಳ ರಸ್ತೆಗಳು ಕೆಸರುಗುಂಡಿಗಳಂತೆ ನಿರ್ಮಾಣಗುತ್ತವೆ. ಈ ಸಂಧರ್ಭದಲ್ಲಿ ಇಲ್ಲಿ ವಾಸಿಸುವ ಜನರು ಹರಸಾಹಸ ಪಡುತ್ತಾ ಓಡಾಡುವಂತಹÀ ಸ್ಥೀತಿ ಉಂಟಾಗುತ್ತದೆ, ಈ ಬಗ್ಗೆ ಹಲವು ಭಾರಿ ಸಂಬಂಧ ಪಟ್ಟ ಗ್ರಾಮ ಪಂಚಾಯತಿಯವರಿಗೆ ಮತ್ತು ಈ ಭಾಗದ ಜನಪ್ರತಿನಿಧಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಲಿನ ಸಾರ್ವಜನಿಕರು ತಮ್ಮ ಅಳಲನ್ನು ಲೋಕದ್ವನಿಗೆ ತೋಡಿಕೊಂಡಿದ್ದಾರೆ.
ಇಷ್ಟೋಂದು ಪ್ರಮಾಣದಲ್ಲಿ ರಸ್ತೆಗಳು ಹಾಳಾಗಿ ಕೆಸರುಗುಂಡಿಗಳಂತೆ ನಿರ್ಮಾಣವಾಗಿ ಸಾರ್ವಜನಿಕರು ಓಡಾಡಲು ತೊಂದರೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳು  ಹಾಗೂ ಅಧಿಕಾರಿಗಳಾಗಳು ಇತ್ತ ಕಡೆ ಗಮನಹರಿಸದಿರುವುದು ಬೆಸರದ ಸಂಗತಿಯಾಗಿದ್ದು, ಇದೆ ಗ್ರಾಮದಲ್ಲಿ ಗ್ರಾಮ ಪಂಚಾಯತ ಕಾರ್ಯಾಲಯವು ಸಹ ಇದ್ದು ಈ ಅವ್ಯವಸ್ಥೆ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

Leave a Comment