ಹತ್ತಿ ಮಾರುಕಟ್ಟೆ : ಖರೀದಿ ಕೇಂದ್ರ ಉದ್ಘಾಟನೆ

ರಾಯಚೂರು.ನ.13- ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಭಾರೀ ಹತ್ತಿ ಬೆಳೆಯಲಾಗಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಸಿಸಿಐ ಬೆಂಬಲಿತ ಬೆಲೆಯಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಆರಂಭಿಸಿದೆ.
ಸಂಸದ ರಾಜಾ ಅಮರೇಶ್ವರ ನಾಯಕ ಅವರು, ಇಂದು ಕಾಟನ್ ಮಾರುಕಟ್ಟೆಯಲ್ಲಿ ಹತ್ತಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು. ಹತ್ತಿಗೆ ಕನಿಷ್ಟ ಬೆಂಬಲ ಬೆಲೆ ದೊರೆಯಬೇಕೆಂದು ಕೇಂದ್ರ ಸರ್ಕಾರ ನಿರ್ದಿಷ್ಟ ಬೆಲೆ ನಿಗದಿಗೊಳಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಹತ್ತಿ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದ್ದರಿಂದ ರೈತರಿಗೆ ಪ್ರಮಾಣದಲ್ಲಿ ನಷ್ಟವಾಗುತ್ತಿತ್ತು. ಇದನ್ನು ಗಮನಿಸಿದ ಸಂಸದರು ಹತ್ತಿ ಖರೀದಿ ಕೇಂದ್ರ ಆರಂಭಕ್ಕೆ ಆಸಕ್ತಿ ವಹಿಸಿದ ಪರಿಣಾಮ ಇಂದಿನಿಂದ ಸಿಸಿಐ ಖರೀದಿ ಆರಂಭಗೊಂಡಿದೆ.
ಸಂಸದರು ಈ ಖರೀದಿ ಕೇಂದ್ರವನ್ನು ಉದ್ಘಾಟಿಸಿದರು. ರೈತರು ಹತ್ತಿ ಖರೀದಿ ಕೇಂದ್ರದ ಲಾಭ ಪಡೆಯಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಎಪಿಎಂಸಿ ಕಾರ್ಯದರ್ಶಿಗಳಾದ ಸತೀಶ್, ಪಕ್ಷದ ಮುಖಂಡರಾದ ಶರಣಪ್ಪ ಜಾಡಲದಿನ್ನಿ, ತ್ರಿವಿಕ್ರಮ ಜೋಷಿ, ಕಡಗೋಳ ಆಂಜಿನೇಯ್ಯ, ಸಣ್ಣ ನರಸಿಂಹ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Comment