ಹಣ ಇಲ್ಲ ಎಂದು ಸಂತ್ರಸ್ತರಿಗೆ ಚೆಕ್ ವಾಪಸ್ ನೀಡಿದ ಬ್ಯಾಂಕ್

ವಿಜಯಪುರ,ಸೆ.3:ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ವಿತರಿಸಲಾದ ಚೆಕ್ ಅನ್ನು ಬ್ಯಾಂಕ್ ನವರು ವಾಪಸ್ ನೀಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಕೋಳೂರು ಗ್ರಾಮದಲ್ಲಿ ನಡೆದಿದೆ.

ನೆರೆ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಅಧಿಕಾರಿಗಳು ಮುದ್ದೇಬಿಹಾಳ ತಾಲ್ಲೂಕಿನ ದೇವೂರ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರವಾಗಿ 10 ಸಾವಿರ ಚೆಕ್ ಅನ್ನು ವಿತರಿಸಿದ್ದರು.

ಆದರೆ ಗ್ರಾಮದ ಹುಲಗೆಪ್ಪ ಎಮ್ಮೆಟ್ಟಿ ಹಾಗೂ ಗದ್ದೆಪ್ಪ ಝಳಕಿ ಸರ್ಕಾರ ನೀಡಿದ್ದ ಚೆಕ್ ಅನ್ನು ಸಿಂಡಿಕೇಟ್ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್ ಗೆ ನೀಡಲು ಹೋಗಿದ್ದಾರೆ. ಆಗ ಸಿಬ್ಬಂದಿ, ಬ್ಯಾಂಕ್ ನಲ್ಲಿ ಹಣ ಇಲ್ಲವೆಂದು ಅವರನ್ನು ವಾಪಸ್ ಕಳಿಸಿದ್ದಾರೆ. ಪರಿಹಾರದ ಹಣವೂ ಇಲ್ಲದೇ ಮುಂದೇನು ಮಾಡುವುದು ಎನ್ನುವುದೂ ತೋಚದೆ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ.

ಬ್ಯಾಂಕ್ ಹಾಗೂ ಸರ್ಕಾರದ ನಡೆಯನ್ನು ಖಂಡಿಸಿ ದೇವೂರು ಗ್ರಾಮಸ್ಥರು ಮುದ್ದೇಬಿಹಾಳ ತಾಲೂಕಿನ ತಹಶೀಲ್ದಾರ ಕಚೇರಿ ಎದುರು ಸಂತ್ರಸ್ಥರು ಪ್ರತಿಭಟನೆ ನಡೆಸಿದರು.

Leave a Comment