ಹಣ್ಣು ತರಕಾರಿ, ಜ್ಯೂಸ್ ಕುಡಿಯಿರಿ ಕ್ಯಾನ್ಸರ್‌ನಿಂದ ಪಾರಾಗಿ

ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಆಧುನಿಕ ಜೀವನ ಶೈಲಿಯಿಂದ ಕ್ಯಾನ್ಸರ್ ರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಕ್ಯಾನ್ಸರ್ ರೋಗವನ್ನು ಆರಂಭದಲ್ಲೆ ಪತ್ತೆ ಮಾಡಿದರೆ ಚಿಕಿತ್ಸೆ ನೀಡಿ ಗುಣಪಡಿಸಬಹುದು. ಕ್ಯಾನ್ಸರ್‌ನ ಪತ್ತೆ ಅಷ್ಟು ಸುಲಭವಲ್ಲ. ಆಗಾಗ ತಪಾಸಣೆ ಮಾಡಿಸಿಕೊಳ್ಳುವುದರಿಂದ ಕ್ಯಾನ್ಸರ್ ಇರುವುದನ್ನು ಪರೀಕ್ಷಿಸಿಕೊಳ್ಳಬಹುದು.
ಕ್ಯಾನ್ಸರ್ ಲಕ್ಷಣಗಳು ಆರಂಭದಲ್ಲಿ ಸುಲಭವಾಗಿ ಗೋಚರಿಸುವುದಿಲ್ಲ. ಹಾಗಾಗಿ ನಿಯಮಿತ ತಪಾಸಣೆಯೇ ಕ್ಯಾನ್ಸರ್ ಪತ್ತೆಗೆ ಸಹಾಯ ಮಾಡುತ್ತದೆ. ಕ್ಯಾನ್ಸರ್ ರೋಗಕ್ಕೆ ಹಣ್ಣು ಹಾಗೂ ತರಕಾರಿಗಳ ಜ್ಯೂಸ್ ರಾಮಬಾಣದಂತೆ ಕೆಲಸ ಮಾಡುತ್ತದೆ. ಬೀಟ್ರೋಟ್, ಕ್ಯಾರೆಟ್ ಮತ್ತು ಸೇಬು ಹಣ್ಣಿನ ಜ್ಯೂಸ್‌ ಕುಡಿದರೆ ಕ್ಯಾನ್ಸರ್‌ನಿಂದ ಮುಕ್ತವಾಗಬಹುದು.
ಬೀಟ್ರೋಟ್, ಕ್ಯಾರೆಟ್ ಮತ್ತು ಸೇಬು ಹಣ್ಣಿನ ಮೇಲಿನ ಸಿಪ್ಪೆಗಳನ್ನು ತೆಗೆದು ಅದನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ನೀರು ಬೆರೆಸಿ ಮಿಕ್ಸರ್‌ನಲ್ಲಿ ಹಾಕಿ ಜ್ಯೂಸ್‌ನ್ನು ತಯಾರಿಸಿಕೊಳ್ಳಬಹುದು. ಬೇಕಾದರೆ ಈ ಜ್ಯೂಸ್‌ಗೆ ನಿಂಬೆಹಣ್ಣಿನ ರಸವನ್ನು ಸೇರಿಸಿಕೊಳ್ಳಬಹುದು. ಇಂತಹ ಜ್ಯೂಸ್‌ನ್ನು ದಿನವೂ ಕುಡಿಯುತ್ತಿದ್ದರೆ ಕ್ಯಾನ್ಸರ್‌ನಿಂದ ದೂರವಾಗಬಹುದು. ಜತೆಗೆ ಕರುಳು, ಹೃದಯ ಸಂಬಂಧಿ ರೋಗಗಳಿಂದಲೂ ದೂರವಾಗಬಹುದು.
ಈ ಜ್ಯೂಸ್‌ ಸೇವನೆಯಿಂದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಜತೆಗೆ ಕರುಳು, ಕಿಡ್ನಿ, ಫ್ಯಾಂಕ್ರಿಯಾಸ್, ಅಲ್ಸರ್‌ಗಳಿಗೆ ಸಂಬಂಧಿಸಿದ ರೋಗ ನಿರೋಧಕವಾಗಿಯೂ ಈ ಜ್ಯೂಸ್ ಕೆಲಸ ಮಾಡುತ್ತದೆ.
ಗಂಟಲು ನೋವು ಮತ್ತು ರಕ್ತದೊತ್ತಡವನ್ನು ತಡೆಯಲು ಈ ಜ್ಯೂಸ್‌ ನೆರವಾಗುತ್ತದೆ. ಮಾಂಸ ಖಂಡಗಳ ನೋವು ಹಾಗೂ ಸ್ನಾಯು ಎಳೆತವನ್ನು ಈ ಹಣ್ಣು, ತರಕಾರಿ ಜ್ಯೂಸ್ ದೂರ ಮಾಡುವುದಲ್ಲದೆ, ಮುಖದ ಚರ್ಮವನ್ನು ಕಾಂತಿಯುತಗೊಳಿಸುತ್ತದೆ.
ಮುಟ್ಟಿನ ತೊಂದರೆಯಿರುವ ಮಹಿಳೆಯರು ಈ ಜ್ಯೂಸ್‌ನ್ನು ಸೇವಿಸಿದರೆ ಆ ತೊಂದರೆ ನಿವಾರಣೆಯಾಗುತ್ತದೆ. ತೂಕ ಇಳಿಸಲು ಈ ಜ್ಯೂಸ್‌ ಸಹಾಯ ಮಾಡುತ್ತದೆ. ಇಷ್ಟೆಲ್ಲಾ ಪ್ರಯೋಜನವಿರುವ ಈ ಜ್ಯೂಸ್‌ನ್ನು ಯಾವಾಗ ಸೇವಿಸಬೇಕು ಎಂಬ ಉದ್ಬವಿಸಬಹುದು ಸಹಜ. ಬೆಳಿಗ್ಗೆ ಎದ್ದಾಗ ಖಾಲಿ ಹೊಟ್ಟೆಯಲ್ಲಿ ಜ್ಯೂಸ್‌ ಸೇವನೆ ಮಾಡಬೇಕು. ಜ್ಯೂಸ್‌ ಸೇವಿಸಿದ ಒಂದು ಗಂಟೆಯ ನಂತರ ಬೆಳಗಿನ ಉಪಹಾರ ಮಾಡಬೇಕು. ಸಂಜೆ 5 ಗಂಟೆಗೆ ಮತ್ತೊಂದು ಬಾರಿ ಒಂದು ಲೋಟ ಈ ಜ್ಯೂಸ್ ಕುಡಿಯುವುದು ಒಳ್ಳೆಯದು.
ದಿನಕ್ಕೆ 2 ಬಾರಿ ಈ ಜ್ಯೂಸ್‌ನ್ನು ಕುಡಿದರೆ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ದೂರವಿಡಬಹುದು.

Leave a Comment