ಹಣದ ವಿಚಾರಕ್ಕಾಗಿ ಶಿಕ್ಷಕರ ಜಗಳ: ಅಮಾನತ್ತು

ಕುಣಿಗಲ್, ಸೆ. ೧೧- ಹಣದ ವಿಚಾರವಾಗಿ ಶಿಕ್ಷಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ಹುತ್ರಿದುರ್ಗ ಹೋಬಳಿಯ ಗಾಣಿಮೇಸ್ತ್ರಿಪಾಳ್ಯ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದಿದೆ.

ತಾಲ್ಲೂಕಿನ ಗಾಣಿಮೇಸ್ತ್ರಿಪಾಳ್ಯದ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಶಿಕ್ಷಕ ವೆಂಕಟಪ್ಪ ಎಂಬುವರೇ ಹಲ್ಲೆಗೆ ಒಳಗಾಗಿರುವ ಶಿಕ್ಷಕ. ಈತ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಹಾಲುಬಾಗಿಲು ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಹೆಚ್.ಕೆ. ನಾಗೇಶ್ ಸುಮಾರು 5 ಲಕ್ಷ ರೂ.ಗಳ ಲೇವಾದೇವಿ ಹಣದ ವಿಚಾರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ಶಿಕ್ಷಕ ವೆಂಕಟಪ್ಪನ ಕೈಗೆ ತುಂಬಾ ಪಟ್ಟು ಬಿದ್ದು ರಕ್ತಸ್ರಾವವಾಗಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಶಿಕ್ಷಕ ವೆಂಕಟಪ್ಪ ತನ್ನ ಹೆಂಡತಿ, ಮಗನೊಂದಿಗೆ ಪೊಲೀಸ್ ಠಾಣೆಗೆ ಧಾವಿಸಿ ಹಲ್ಲೆ ಮಾಡಿದ ನಾಗೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ನಂತರ ಶಿಕ್ಷಕ ನಾಗೇಶ್ ಅವರನ್ನು ಬಿಇಓ ಕರ್ತವ್ಯದಿಂದ ಅಮಾನತ್ತುಗೊಳಿಸಿದ್ದಾರೆ.

Leave a Comment