ಹಡಗು ಕಟ್ಟೆಯಲ್ಲಿ ಬೆಂಕಿ ೮ ಮಂದಿ ಸಜೀವ ದಹನ

ವಾಷಿಂಗ್‌ಟನ್, ಜ. ೨೮- ಅಮೇರಿಕಾದ ಅಲಬಾಮ ಬಂದರು ಕಟ್ಟೆಯಲ್ಲಿ ಸಂಭವಿಸಿದ ಭಾರೀ ಬೆಂಕಿಅನಾಹುತದಲ್ಲಿ ಕನಿಷ್ಟ ೮ ಮಂದಿ ಸುಟ್ಟುಕರಕಲಾಗಿದ್ದಾರೆ.
ಅನೇಕರು ಕಾಣೆಯಾಗಿದ್ದಾರೆ. ನೀರಿಗೆ ಧುಮುಕಿದ್ದವರಲ್ಲಿ ೭ ಮಂದಿಯನ್ನು ರಕ್ಷಿಸಲಾಗಿದೆ.
ಅಲಬಾಮದ ಜಾಕ್ಸನ್ ಕೌಂಟಿ ಪಾರ್ಕ್ ಬಳಿಯ ಬಂದರು ಕಟ್ಟೆಯಲ್ಲಿ ದೋಣಿಯೊಂದಕ್ಕೆ ಹತ್ತಿಕೊಂಡ ಬೆಂಕಿ ಕ್ಷರ್ಣಾಧದಲ್ಲಿ ಅಕ್ಕಪಕ್ಕದ ೩೫ ದೋಣಿಗಳಿಗೆ ವ್ಯಾಪಿಸುವ ಮೂಲಕ ಅಷ್ಟು ದೋಣಿಗಳು ಸುಟ್ಟು ಹೋಗಿವೆ.
ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಜೀವ ಉಳಿಸಿಕೊಳ್ಳಲು ದೋಣಿಯಿಂದ ನೀರಿಗೆ ದುಮುಕ್ಕಿದ್ದ ೭ ಮಂದಿಯನ್ನು ರಕ್ಷಿಸಲಾಗಿದೆ. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಖಚಿತ ಸಾವಿನ ಸಂಖ್ಯೆ ಹಾಗು ಬೆಂಕಿ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿದೆ.

Leave a Comment