ಹಡಗಿಲ್ ಗ್ರಾಮದಲ್ಲಿ ಗುಂಪು ಘರ್ಷಣೆ

ಕಲಬುರಗಿ,ಸೆ.12- ತಾಲೂಕಿನ ಹಡಗಿಲ್ ಹಾರುತಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ  5-6 ಜನರು ಗಾಯಗೊಂಡಿದ್ದಾರೆ.

ಶ್ರಾವಣ ಸೋಮವಾರದ ಪ್ರಯುಕ್ತ ಗ್ರಾಮದ ದೇವಸ್ಥಾನದಲ್ಲಿ ಏರ್ಪಡಿಸಲಾಗಿದ್ದ ಖಾಂಡ ಪ್ರಸಾದ ವಿತರಣೆಯಲ್ಲಿ ದಲಿತ ಸಮುದಾಯದ ಯುವಕರಿಬ್ಬರಿಗೆ ಉದ್ದೇಶಪೂರ್ವಕವಾಗಿ ಪ್ರಸಾದದಲ್ಲಿ ಖಾರ ಹೆಚ್ಚಿಗೆ ಹಾಕಿ ಬಡಿಸಲಾಗಿದೆ ಎಂದು ಆರೋಪಿಸಿ ಊಟ ಬಡಿಸುವವರ ಮೇಲೆ ಇದನ್ನು ಚಲ್ಲಿದ ವಿಷಯಕ್ಕೆ ಸಂಬಂಧಿಸಿದ ವಿಷಯಕ್ಕೆ ಮಂಗಳವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು 5-6 ಜನರು ಗಾಯಗೊಂಡಿದ್ದಾರೆ ಎಂದು ಹೆಳಲಾಗುತ್ತಿದೆ.

ಮಂಗಳವಾರ ಸಂಜೆ  ಉಭಯ ಗುಂಪುಗಳ ನಡುವೆ ಮಾತಿನ ಚಕಮಕಿ ವಿಕೋಪಕ್ಕೆ ಹೋಗಿದ್ದು, ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿಯುತ್ತಲೇ ಸ್ಥಳಕ್ಕೆ ದಾವಿಸಿದ ಪೊಲೀಸರ ಸಮ್ಮುಖದಲ್ಲಿ ತಳ್ಳಾಟ ನುಕಾಟ ನಡೆದು ಪೊಲೀಸರು ಸಣ್ಣಪುಟ್ಟ ಸಹ ಗಾಯಗಳಾಗಿವೆ ಎಂದು  ಹೇಳಲಾಗುತ್ತದೆ. ಡಿವೈಎಸ್‍ಪಿ ಎಸ್ ಎಸ್ ಹುಲ್ಲೂರ, ಎಂ.ಬಿ.ನಗರ ಠಾಣೆ ಸಿಪಿಐ ಶಾಂತಿನಾಥ, ಫರತಾಬಾದ ಪಿಎಸ್‍ಐ ವಾಹಿದ ಕೋತ್ವಾಲ, ಎಎಸ್‍ಐ ನಾಗಭೂಷಣ ಹಾಗೂ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಉಭಯ ಗುಂಪುಗಳ 12 ಜನರನ್ನು ವಶಕ್ಕೆ ಪಡೆದ ಪೊಲೀಸರು, ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಜಾರಿಯಲ್ಲಿದೆ…

Leave a Comment