ಹಗಲಿರುಳು ಎನ್ನದೇ ಶ್ರಮಿಸುತ್ತಿರುವ ಕೊಡುಗೈ ದಾನಿ ಮಂಜುನಾಥ್

ಹನೂರು.ಜ.28. ಕ್ಷೇತ್ರ ವ್ಯಾಪ್ತಿಯಲ್ಲಿ ತುಳಿತಕ್ಕೆ ಒಳಗಾಗಿರುವ ಹಾಗೂ ಬಡ ಜನತೆ ಬೇಕು ಬೇಡಗಳನ್ನು ಅರಿತು ಹಗಲು ಇರುಳು ಎನ್ನದೇ ಶ್ರಮಿಸುತ್ತಿರುವ ಕೊಡುಗೈ ದಾನಿ ಮಂಜುನಾಥ್ ಆಗಿದ್ದಾರೆ ಎಂದು ಮಾಜಿ ಜಿ.ಪಂ.ಉಪಾಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಶಿವಮೂರ್ತಿ ಬಣ್ಣಿಸಿದರು.
ಹನೂರು ತಾಲ್ಲೂಕಿನ ರಾಮಾಪುರ ಸಮೀಪದ ಗೆಜ್ಜಲನತ್ತ ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಶ್ರೀ ಮಧುರೈ ವೀರನ್, ಶ್ರೀ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮತ್ತು ಮಹಾ ಕುಂಭಾಭಿಷೇಕ ಕಾರ್ಯಕ್ರಮದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಡು ಬಡತನದ ಬೇಗೆಯಲ್ಲಿ ಬಳಲುತ್ತಿರುವ ಜನತೆ ಒಂದು ಸಣ್ಣ ಮನೆಯನ್ನು ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಿಲ್ಲದ ಈ ಪರಿಸ್ಥಿತಿಯಲ್ಲಿ ಸಮುದಾಯದ ಹಾಗೂ ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದು ಕಷ್ಟದ ಕೆಲಸ. ಇಂತಹ ಸಂಧಿಗ್ಧತೆಯನ್ನು ಅರಿತು ಜನತೆಯ ಧಾರ್ಮಿಕ ಭಾವನೆಗಳಿಗೆ ಬೆಲೆ ಕೊಟ್ಟು ಎಲೆಮರೆ ಕಾಯಿಯಂತೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ದೇವಾಲಯಗಳ ನಿರ್ಮಾಣಕ್ಕೆ ಮುಂದಾಗಿರುವ ಆರ್.ಮಂಜುನಾಥ್‍ರವರಿಗೆ ಕ್ಷೇತ್ರದ ಜನತೆ ಮತ್ತು ಆ, ಭಗವಂತ ಒಳಿತನ್ನು ಮಾಡಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಹನೂರು ಜೆಡಿಎಸ್ ಮುಖಂಡ ಆರ್.ಮಂಜುನಾಥ್‍ರವರು ದೇವಾಲಯ ನಿರ್ಮಾಣಕ್ಕೆ ಆರ್ಥಿಕ ನೆರವಿನ ಸಹಾಯ ಹಸ್ತವನ್ನು ಚಾಚಿರುವ ಹಿನ್ನಲೆಯಲ್ಲಿ ಅವರಿಗೆ ಬಾಬು ಜಗಜೀವನ ರಾಮ್ ಸಂಘ ಹಾಗೂ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಶಾಗ್ಯಬಾಬು, ಜೆಡಿಎಸ್ ಮುಖಂಡರಾದ ಮಂಜೇಶ್, ಜಿ.ಕೆ.ಹೊಸೂರು ಬಸವರಾಜು, ಹನೂರು ಮಹಾದೇವ್, ಎಸ್.ಆರ್.ಮಹದೇವ, ಪ.ಪಂ.ಮಾಜಿ ಅಧ್ಯಕ್ಷೆ ಮಮತ, ಅನಂತ, ಗ್ರಾಮದ ಮುಖಂಡರಾದ ಶಿವಣ್ಣ, ಮಾದೇಶ್, ಶಿವಣ್ಣ, ತಿಮ್ಮರಾಜು, ಮಣಿ, ರವಿ, ಗೋವಿಂದ, ನಾಗರಾಜು, ಭಕ್ತಾಧಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Comment