ಹಂಸ ಮೆಚ್ಚಿಗೆ ಗೀತೆಗೆ ತಾರೆಯರು ಫಿಧಾ

  • ಚಿಕ್ಕನೆಟಕುಂಟೆ ಜಿ.ರಮೇಶ್

ಕನ್ನಡದಲ್ಲಿ ಇತ್ತೀಚಿಗೆ ಹೊಸ ಆಲೋಚನೆ ಮತ್ತು ಹೊಸತನದ ಚಿತ್ರಗಳು ತೆರೆಗೆ ಬರುತ್ತಿವೆ.ಹೊಸ ಪ್ರಯತ್ನಕ್ಕೆ ಪ್ರೇಕ್ಷಕ ಕೈ ಹಿಡಿದ ಉದಾಹರಣೆಗಳೂ ಹೆಚ್ಚಿವೆ.ಚಿತ್ರಮಂದಿರಕ್ಕೆ ಜನರು ಕರೆ ತರುವಲ್ಲಿ ಚಿತ್ರದ ಹಾಡುಗಳು ಪ್ರಮುಖ ಪಾತ್ರ ವಹಿಸಲಿದೆ.

ಹೊಸ ಪ್ರಯತ್ನ

ಹೊಸಬರು ಸೇರಿಕೊಂಡು ನಿರ್ಮಿಸಿ ನಿರ್ದೇಶಿಸಿರುವ ರತ್ನಮಂಜರಿ ಚಿತ್ರದ ಹಾಡುಗಳು ಒಂದಕ್ಕಿಂತ ಒಂದು ಲಕ್ಷಾಂತರ ಹಿಟ್‌ಪಡೆದಿದ್ದು ಚಿತ್ರ ತಂಡದ ಮುಖದಲ್ಲಿ ನಗುವಿನ ಮಂದಹಾಸ ಮೂಡಿಸಿದೆ. ಹೊಸಬರ ತಂಡದ ಪ್ರಯತ್ನಕ್ಕೆ ಶಿವರಾಜ್ ಕುಮಾರ್, ಪುನೀತ್ ರಾಜ್, ಶ್ರೀ ಮುರುಳಿ ,ಹಂಸಲೇಖ ಮತ್ತಿತರು ಮೆಚ್ಚಿಕೊಂಡಿರುವುದು ಖುಷಿ ಇಮ್ಮಡಿಸಿದೆ.

ಅದರಲ್ಲಿಯೂ ಹೊಸಬರು ಸೇರಿಕೊಂಡು ನಿರ್ಮಿಸಿರುವ ರತ್ನಮಂಜರಿಚಿತ್ರದ ಹಾಡಿಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಹರ್ಷವರ್ಧನದ ರಾಜ್ ಸಂಗೀತದಲ್ಲಿ ಮೂಡಿ ಬಂದಿರುವ ಹಾಡು ಒಂದಕ್ಕಿಂತ ಒಂದು ಜನರಿಗೆ ಒಷ್ಟವಾಗಿರುವುದು ಚಿತ್ರ ತಂಡದ ಮುಖದಲ್ಲಿ ಮಂದಹಾಸ ಮೂಡಿಸಿದೆ.

lahari-lahari-photo-nataraja-halebeedu-040-05-19

ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಗರಡಿಯಲ್ಲಿ ಪಳಗಿದಯುವ ಸಾಹಿತಿ ಪ್ರಸನ್ನ ಬೋಜೆಶೆಟ್ಟಿ ಬರೆದಿರುವ ಬಾರೆ ಸುಂದರಿ ಗೀತೆಗೆ ವಿಜಯ್ ಪ್ರಕಾಶ್ ಧ್ವನಿಯಾಗಿದ್ದು ಒಂದು ಮಿಲಿಯನ್‌ಗೂ ಹಿಟ್ ಸಿಕ್ಕದ್ದು  ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಹಾಡಿಗೆ ಫಿದಾ ಆಗಿರುವುದು ಚಿತ್ರತಂಡದ ಹುಮ್ಮಸ್ಸು ಹಿಮ್ಮಡಿಗೊಳಿಸಿದೆ.

lahari-photo-pallavi-raju-040-05-19ಕೆ.ಕಲ್ಯಾಣ್ ಬರೆದಿರುವ ಮಿಣಮಿಣ ಸೂರ್ಯ ಕಿರಣ ಹಾಡಿಗೆ ನಟ ಪುನೀತ್ ರಾಜ್ ಕುಮಾರ್ ಧ್ವನಿಯಾಗಿದ್ದಾರೆ. ಕೆ.ಕಲ್ಯಾಣ್ ಬರೆದಿರಿವ ಒಮ್ಮೆ ನನ್ನವಳು ಹಾಡಿಗೆ ಲಕ್ಷ ಲಕ್ಷ ಹಿಟ್ ಸಿಕ್ಕಿದೆ. ಫ್ಯಾಶನ್ ಹಾಡು ಬೀಸೋ ಗಾಳಿ ಹಾಡನ್ನು ಹಿರಿಯ ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ ಎಂದು ನಿರ್ದೇಶಕ ಪ್ರಸಿದ್ಧ್ ಹೇಳಿಕೊಂಡಿದ್ದಾರೆ.

ರಾಜ್ಯದ ಜೊತೆಗೆ ಅಮೇರಿಕಾ ಮತ್ತು ಯುರೋಪ್ ಸೇರಿದಂತೆ ವಿವಿಧೆಡೆ ಇದೇ ೧೭ರಂದು ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ.ಚಿತ್ರಕ್ಕೆ ಅನಿವಾಸಿ ಭಾರತೀಯರಾದ ಸಂದೀಪ್ ಕುಮಾರ್,ನಟರಾಜ್ ಹಳೆಬೀಡು ಮತ್ತು ನವೀನ್ ಕೃಷ್ಟ ಬಂಡವಾಳ ಹಾಕಿದ್ದಾರೆ. ಚಿತ್ರದಲ್ಲಿ ಅಮೇರಿಕಾದ ಹದಿನೈದು ಮಂದಿ ರಂಗಭೂಮಿ ಮತ್ತು ಉದ್ಯೋಗಸ್ಥರು ನಟಿಸಿರುವುದರಿಂದ ಅಲ್ಲಿ ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದೆ.ಚಿತ್ರದ ಟೀಸರ್ ಬಿಡುಗಡೆಯಾದ ಬಳಿಕ ಅನೇಕ ಮಂದಿ ತಾ ಮುಂದು ತಾ ಮುಂದು ಎಂದು ಚಿತ್ರ ಬಿಡುಗಡೆಗೆ ಮುಂದಾಗಿದ್ದರು ಅದರಲ್ಲಿ ಅಂತಿಮವಾಗಿ ದೀಪಕ್ ಗಂಗಾಧರ್ ಚಿತ್ರ ವಿತರಣೆ ಮಾಡಲು ಮುಂದಾಗಿದ್ದಾರೆ.

ಅಮೇರಿಕಾದಲ್ಲಿ ನಡೆದ ನೈಜ ಘಟನೆ ಆಧರಿಸಿ ಮರ್ಡರಿ ಮಿಸ್ಟ್ರಿ, ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಹಾರರ್ ಪ್ಲೇವರ್ ಇರುವ ಚಿತ್ರವನ್ನು ಅಮೇರಿಕಾದಲ್ಲಿ ೨೦ ದಿನ,ಕೊಡಗಿನಲ್ಲಿ ೩೦ ದಿನ ಹಾಗು ಮಲೇಶಿಯಾದಲ್ಲಿ ೪ ದಿನ ಚಿತ್ರಿಕರಣ ಮಾಡಲಾಗಿದೆ.ನಾಗತಿಹಳ್ಳಿ ಚಂದ್ರ ಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ತರಬೇತಿ ಪಡೆದ ರಾಜ್ ಚರಣ್ ಮತ್ತು ಅಖಿಲಾ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನುಳಿದಂತೆ ಪಲ್ಲವಿ ರಾಜ್ ಶ್ರದ್ದಾ ಸಾನಿಯಾ ಮತ್ತಿತರರ ತಾರಾ ಬಳಗ ಚಿತ್ರದಲ್ಲಿದೆ.

Leave a Comment