ಹಂಪಿ ವೀಕ್ಷಣೆ ಮಾಡಿದ ಬ್ರಿಟಿಷ್‌ ಹೈ ಕಮೀಷನರ್ ದಂಪತಿಗಳು

ಬಳ್ಳಾರಿ:ಆ,10-ಬ್ರಿಟೀಷ್ ಹೈ ಕಮಿಷನರ್ ಹೆಚ್.‌ಇ.ಡೊಮಿನಿಕ್ ಹ್ಯಾಸ್ಕ್ಯೂತ್ ದಂಪತಿಗಳು ಇಂದು ವಿಶ್ವ ವಿಖ್ಯಾತ ಹಂಪಿ ಸ್ಮಾರಕಗಳ ವೀಕ್ಷಣೆ ಮಾಡಿದರು.

ವಿರುಪಾಕ್ಷೇಶ್ವರ ದೇವಸ್ಥಾನದ ಪಟ್ಟದಾನೆ ಲಕ್ಷ್ಮಿಯಿಂದ ಬ್ರಿಟೀಷ್ ಅಧಿಕಾರಿಗೆ ಸ್ವಾಗತ ಮಾಡಲಾಯಿತು.

ವಿರುಪಾಕ್ಷೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ. ನಂತರ ದೇವಸ್ಥಾನದ ವಾಸ್ತುಶಿಲ್ಪ ವೀಕ್ಷಣೆ ಮಾಡಿದರು. ಇನ್ನೆರೆಡು ದಿನಗಳ ಕಾಲ ಇಲ್ಲಿದ್ದು. ಬಹುತೇಕ ಸ್ಮಾರಕಗಳ ವೀಕ್ಷಣೆ ಮಾಡಲಿದ್ದಾರೆ.

ಇಲ್ಲಿನ ಸ್ಮಾರಕಗಳ ಸೌಂದರ್ಯ ದ ಬಗ್ಗೆ ಅವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Comment