ಹಂಪಿ ಮೃಗಾಲಯದ ಪ್ರಾಣಿ, ಪಕ್ಷಿಗಳ ಘಟಕಕ್ಕೆ ಸಚಿವ ಸಿ.ಸಿ.ಪಾಟೀಲ್ ಚಾಲನೆ

ಬಳ್ಳಾರಿ, ನ 2 – ಹೊಸಪೇಟೆ ಸಮೀಪದ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‍ನಲ್ಲಿ ಹಂಪಿ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳ ಘಟಕ ಇಂದು ಶುಭಾರಂಭಗೊಂಡಿತು.

ಅರಣ್ಯ ಸಚಿವ ಸಿ.ಸಿ.ಪಾಟೀಲ್ ಮೃಗಾಲಯದ ಆವರಣದಲ್ಲಿ ನೂತನ ಘಟಕಕ್ಕೆ ಚಾಲನೆ ನೀಡಿದರು. ಈ ವಿಶೇಷ ಪಾರ್ಕ್ 141.49 ಹೆಕ್ಟೆರ್ ವಿಸ್ತೀರ್ಣ ಒಳಗೊಂಡಿದ್ದು, ಮೃಗಾಲಯಕ್ಕಾಗಿ 11.8 ಹೆಕ್ಟೆರ್ ಸ್ಥಳವನ್ನು ಮೀಸಲಿರಿಸಲಾಗಿದೆ. ಒಟ್ಟು 10 ವಲಯಗಳಿದ್ದು, ಇದರಲ್ಲಿ ನಾಲ್ಕು ಸಸ್ತನಿಪ್ರಾಣಿಗಳು, 5 ಮಾಂಸಹಾರಿ ಪ್ರಾಣಿಗಳು ಮತ್ತು 1 ಸರಿಸೃಪಗಳ ಆವರಣ ಹೊಂದಿದೆ. ಚಿರತೆ, ಕರಡಿ, ಪಟ್ಟೆ, ಕತ್ತೆಕಿರುಬ, ಗುಳ್ಳೆ ನರಿ, ಬೂದುತೋಳ, ಮೊಸಳೆ, ಕೆಂಪುಮೂತಿ ಮಂಗ, ಹನುಮಾನ್‍ಮುಸುವ, ಕಪ್ಪುಹಂಸ, ಎಮೂ ಮತ್ತು ಇತರೆ ಪ್ರಾಣಿಪಕ್ಷಿಗಳಿವೆ.

ಈ 10 ಆವರಣಗಳನ್ನು ಅಂದಾಜು 3.67 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳ ಆವರಣವನ್ನು ಮತ್ತು ಕೊಠಡಿಗಳನ್ನು ಕೇಂದ್ರ ಮೃಗಾಲಯ ಪ್ರಾಧಿಕಾರದ ನಿರ್ದೇಶನದ ಪ್ರಕಾರ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ.

ಈ ಸಂದರ್ಭದಲ್ಲಿ  ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ್ ರೆಡ್ಡಿ, ಈ.ತುಕಾರಾಂ, ಜಿ.ಪಂ.ಉಪಾಧ್ಯಕ್ಷೆ ದೀನಾ ಮಂಜನಾಥ, ಜೂಲಾಜಿಕಲ್ ಪಾರ್ಕ್ ನ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷಿಣಿ, ಡಿಎಫ್ಒ ರಮೇಶಕುಮಾರ್ ಉಪಸ್ಥಿತರಿದ್ದರು.

 

Leave a Comment