ಹಂಪಿ ಉತ್ಸವ ನಡೆಸಲು ಆಗ್ರಹಿಸಿ ಹೊಸಪೇಟೆಯಿಂದ ಹಂಪಿಗೆ ಕಲಾವಿದರಿಂದ ಜ.13 ಪಾದಯಾತ್ರೆ

ಬಳ್ಳಾರಿ, ಜ.7: ಹಂಪಿ ಉತ್ಸವ ನಡೆಸುವಂತೆ ಆಗ್ರಹಿಸಿ ಜ.13 ರಂದು ಹೊಸಪೇಟೆಯ ತಹಸಿಲ್ದಾರ್ ಕಚೇರಿಯಿಂದ ಹಂಪಿವರೆಗೆ ಕರ್ನಾಟಕ ಜನ ಕಲ್ಯಾಣ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಕಲಾವಿದರು, ಸಾಹಿತಿಗಳು ಪಾದಯಾತ್ರೆ ನಡೆಸಲಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಜನ ಕಲ್ಯಾಣ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜೆ.ಎಂ.ಬಸವರಾಜ್ ಸ್ವಾಮಿ ಅವರು ಪ್ರತಿ ವರ್ಷದಂತೆ ಈ ವರ್ಷ ನವೆಂಬರ್ 3 ರಿಂದ ಹಂಪಿ ಉತ್ಸವ ನಡೆಸಲು ಎಲ್ಲಾ ಸಿದ್ದತೆಯನ್ನು ಜಿಲ್ಲಾಡಳಿತ ನಡರಸಿತ್ತು. ಈ ಕುರಿತು ಅನೇಕ ಪೂರ್ವಭಾವಿ ಸಭೆಗಳನ್ನು ನಡೆಸಿತ್ತು. ಕಲಾವಿದರಿಂದ ಅರ್ಜಿಗಳನ್ನು ಪಡೆದಿತ್ತು. ಆದರೆ ಲೋಕಸಭೆಯ ಉಪ ಚುನಾವಣೆ ಘೋಷಣೆ ಮಾಡಿದ್ದರಿಂದ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಂದೂಡಲಾಯಿತು.ಆದರೆ ಚುನಾವಣೆ ಮುಗಿದ ಮೇಲೆ ಉತ್ಸವ ನಡೆಸಲು ‌ಮುಂದಾಗದೆ, ಜಿಲ್ಲೆಯ ಜನರ, ಕಲಾವಿದರ ಅಭಿಪ್ರಾಯ ಪಡೆಯದೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವ ಕುಮಾರ್ ಅವರು ಉತ್ಸವವನ್ನು ಈ ವರ್ಷ ಬರಗಾಲದ ಹಿನ್ನಲೆಯಲ್ಲಿ ನಡೆಸದೇ ಇರುವ ಬಗ್ಗೆ ಪ್ರಕಟಿಸಿದರು. ಆಗ ಕಲಾವಿದರು, ಸಾಹಿತಿಗಳು, ವಿವಿಧ ಸಂಘಟನೆಗಳ ಮುಖಂಡರು, ಪ್ರತಿ‌ಪಕ್ಷಗಳ ನಾಯಕರು ಈ ಬಗ್ಗೆ ವಿರೋಧ ವ್ಯಕ್ತ ಪಡಿಸಿದ ಮೇಲೆ. ಹಂಪಿ ಉತ್ಸವ ರದ್ದು ಮಾಡಿಲ್ ಜನವರಿ ತಿಂಗಳ 12 ಮತ್ತು 13 ರಂದು ಸರಳವಾಗಿ ಆಚರಿಸುವ ಬಗ್ಗೆ ಸರಕಾರ ಸದನದಲ್ಲಿ ಪ್ರಕಟಿಸಿತ್ತು.

ಪ್ರಕಟಣೆ ಪ್ರಕಟಣೆಯಾಗಿದೆ ಹೊರೆತು ಯಾವುದೇ ಸಿದ್ದತೆ ಗಳು ನಡೆದಿಲ್ಲ. ಈ ಬಗ್ಗೆ ಜಿಲ್ಲಾಡಳಿತವೂ ಸ್ಪಷ್ಟ ಹೇಳಿಕೆ ನೀಡದೆ ಈ ಬಗ್ಗೆ ಸರಕಾರ ಯಾವುದೇ ನಿರ್ದೇಶನ ನೀಡಿಲ್ಲ ಎಂದಿದ್ದಾರೆ.

ಅದಕ್ಕಾಗಿ ಉತ್ಸವ ನಡೆಸಬೇಕೆಂದು ಕಲಾವಿದರ ಸಹಕಾರದೊಂದಿಗೆ ಒತ್ತಾಯಿಸಲು ಈ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು

ಸುದ್ದಿ ಗೋಷ್ಟಿಯಲ್ಲಿ ಕಲಾವಿದರಾದ ಸುಭದ್ರಮ್ಮ ಮನ್ಸೂರು, ಬೆಳಗಲ್ಲು ವೀರಣ್ಣ, ಕೆ.ಜಗದೀಶ್ ಅವರು ರಾಜ್ಯದ ಬೇರೆ ಯಾವ ಉತ್ಸವಗಳನ್ನು ರದ್ದು ಮಾಡದ ಸರಕಾರ ಈ ಉತ್ಸವವನ್ನು ನಡೆಸದೇ ಇರಲು ನಿರ್ಲಕ್ಷ ವಹಿಸಿದ್ದೇಕೆ. ಈ ತಿಂಗಳಾಂತ್ಯದಲ್ಲಿ ಉತ್ಸವವನ್ನು ನಡೆಸಬೇಕು ಎಂದು ಆಗ್ರಹಿಸಿದರು.

ರಜನೀಶ್ ಕುಲಕರ್ಣಿ, ಹೆಚ್.ಕೆ.ಗೌರಿಶಂಕರ್, ಹೊನ್ನೂರ್ ಸ್ವಾಮಿ, ಬಿ.ಎಂ.ಮಲ್ಲಿಕಾರ್ಜುನಗೌಡ, ದಮ್ಮೂರು ರವಿ‌ಕುಮಾರ್, ಹೆಚ್.ಎಂ.ಚಂದ್ರಶೇಖರ್, ಜಾನೆಕುಂಟೆ ದೊಡ್ಡಬಸಪ್ಪ ಮೊದಲಾದವರು ಇದ್ದರು.

Leave a Comment