ಹಂಪಿ ಉತ್ಸವಕ್ಕೆ ದಾಸ ದರ್ಶನ್

ಬಳ್ಳಾರಿ:ಫೆ.24- ಈ ಬಾರಿಯ ಹಂಪಿ ಉತ್ಸವಕ್ಕೆ ಕನ್ನಡ ಚಲನ ಚಿತ್ರದ ಖ್ಯಾತ ನಟ ದರ್ಶನ್ ತೂಗುದೀಪ ಅವರು ಉದ್ಘಾಟನಾ ಸಮಾರಂಭಕ್ಕೆ ಆಗಮಿಸಲಿದ್ದಾರೆ.

ಹಂಪಿ ಉತ್ಸವ ಮಾರ್ಚ 2 ಮತ್ತು 3 ರಂದು ನಡೆಯಲಿದ್ದು 2 ರಂದು ಸಂಜೆ ಎದಿರು ಬಸವಣ್ಣ ಮಂಟಪದ ಮುಖ್ಯ ವೇದಿಕೆಯಲ್ಲಿ ಉತ್ಸವವನ್ನು ಮುಖ್ಯ ಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದು, ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಟ ದರ್ಶನ್ ಮತ್ತು ಸಿನಿಮಾ ನಿರ್ಮಾಪಕರುಗಳ ಸಂಘದ ಅಧ್ಯಕ್ಷ ಎ.ಮಿನಿರತ್ನ, ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್, ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, ಮುಜರಾಯಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ, ಪಿ.ಟಿ.ಪರಮೇಶ್ವರ ನಾಯ್ಕ, ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ, ಸಂಸದೀಯ ಕಾರ್ಯದರ್ಶಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂ.ಎ.ಗೋಪಾಲಸ್ವಾಮಿ ಆಗಮಿಸಲಿದ್ದಾರೆ.

ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷೆ ಸಿ. ಭಾರತೀ ತಿಮ್ಮಾರೆಡ್ಡಿ, ಕೊಪ್ಪಳ ಸಂಸದ ಕರಡಿ ಸಂಗಣ್ಣ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಅಲ್ಲಂ ವೀರಭದ್ರಪ್ಪ, ಎಂ.ಎಸ್.ಸೋಮಲಿಂಗಪ್ಪ, ಸಂಸದ ವಿ.ಎಸ್.ಉಗ್ರಪ್ಪ, ರಾಜ್ಯ ಸಭಾ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್, ಶಾಸಕರಾದ ಭೀಮಾನಾಯ್ಕ ಎಲ್.ಬಿ.ಪಿ., ಜಿ.ಕರುಣಾಕರರೆಡ್ಡಿ, ಜೆ.ಎನ್.ಗಣೇಶ್, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕರಾದ ಬಿ.ನಾಗೇಂದ್ರ, ಕೆ.ಸಿ.ಕೊಂಡಯ್ಯ , ಜಿ.ಸೋಮಶೇಖರರೆಡ್ಡಿ, ಶರಣಪ್ಪ ಮಟ್ಟೂರ, ಡಾ. ಚಂದ್ರಶೇಖರ ಬಿ. ಪಾಟೀಲ, ಹಂಪಿ ವಿವಿ ಕುಲಪತಿ ಡಾ. ಸ.ಚಿ.ರಮೇಶ್, ಜಿಪಂ ಸದಸ್ಯ ಪ್ರವೀಣ್ ಸಿಂಗ್, ಕಮಲಾಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಡಾ. ಬಿ.ಆರ್.ಮಳಲಿ, ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು, ಹೊಸಪೇಟೆ ತಾಪಂ ಅಧ್ಯಕ್ಷೆ ಜೋಗದ ನೀಲಮ್ಮ ಪಂಚಪ್ಪ, ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ,

ಶ್ರೀ ವಿರೂಪಾಕ್ಷೇಶ್ವರ ವಿದ್ಯಾರಣ್ಯ ಪೀಠದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷೆ ಹೆಚ್.ಭೀಮವ್ವ, ಹಂಪಿ ತಾಪಂ ಸದಸ್ಯ ಹಾಲಪ್ಪ, ಶ್ರೀ ಹೇಮಕೂಟ ಸಿಂಹಾಸನಾಧೀಶ್ವರ ಸಂಗನಬಸವ ಮಹಾಸ್ವಾಮಿಗಳು ಸೇರಿದಂತೆ ಮತ್ತಿತರರು ಆಗಮಿಸಲಿದ್ದಾರೆ.

 

1 Comment on this Post

  1. Vinoda karnam

    ಇದು ಹಂಪಿ ಉತ್ಸವ ಅನ್ನೋದಕ್ಕಿಂತ ಸಿನಿಮಾ ನಟನ ಉತ್ಸವ ಎನ್ನಬಹುದು. ಅನೇಕ ಬಡ ಕಲಾವಿದರಿಗೆ ಅವಕಾಶ ಕೊಟ್ಟರೆ
    ಅವರಿಗೂ ಸಹಾಯವಾಗುತ್ತಿತ್ತು

    Reply

Leave a Comment