ಹಂಪಿಯ‌ ಪ್ರಾಣಿಗಳಿಗೆ ಆಹಾರ

ಬಳ್ಳಾರಿ ಏ 05; ಕೊರೋನ ಭೀತಿ ‌ಮಧ್ಯೆ ಪ್ರಾಣಿಗಳಿಗೆ ಐತಿಹಾಸಿಕ ಹಂಪಿಯ ಪ್ರಾಣಿಗಳಿಗೆ ಯುವ ಬ್ರಿಗೇಡ್ ಟೀಮ್ ಆಹಾರ ನೀಡುವ ಕಾರ್ಯ ಮಾಡಿದೆ.
ಪ್ರವಾಸಿಗರು ಕೊಡೋ ಆಹಾರವನ್ನು ನಂಬಿಕೊಂಡಿದ್ದ ಪ್ರಾಣಿಗಳು ಲಾಕ್ ಡೌನ್‌ನಿಂದ ಹಂಪಿಯಲ್ಲಿ ಕಂಗಾಲಾಗಿದ್ದವು.

ಚಕ್ರವರ್ತಿ ಸೂಲಿಬೇಲೆ ಕಟ್ಟಿದ ಹಂಪಿ ಯುವ ಬ್ರಿಗೇಡ್ ಕಾರ್ಯಕರ್ತರು. ಹಸು, ಕೋತಿ, ನಾಯಿ, ಸೇರಿದಂತೆ ಬಿಡಾಡಿ ದಿನಗಳಿಗೆ ನಿತ್ಯ ಆಹಾರವನ್ನು ‌ನೀಡುತ್ತಿದ್ದಾರೆ.
ಹಣ್ಣು, ಬಿಸ್ಕತ್ತು, ಹುಲ್ಲು ಸೇರಿದಂತೆ ವಿವಿಧ ಆಹಾರವನ್ನು ತಂದು ಹಾಕುತ್ತಿದ್ದಾರೆ.
ನಿತ್ಯ ಬೆಳಿಗ್ಗೆ ಸಂಜೆ ಪೊಲೀಸರ ಅನುಮತಿ ಪಡೆದು ‌ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದಾರೆ.

Leave a Comment