ಹಂಪಿಗೆ ಸ್ಪೇನ್ ದೇಶದ ರಾಯಬಾರಿ ಭೇಟಿ

ಹೊಸಪೇಟೆ.ಅ.1 ಹಂಪಿಗೆ ಶನಿವಾರ ಭೇಟಿ ನೀಡಿದ್ದ ಮುಂಬೈನ ರಾಯಬಾರಿ ಕಚೇರಿಯಲ್ಲಿರುವ ಸ್ಪೇನ್ ದೇಶದ ರಾಯಬಾರಿ ಆಂಡ್ರೆಸ್ ಮತ್ತು ಕೊಲಾಡೊ ದಂಪತಿಗಳು ವಿಶ್ವ ಪ್ರಸಿದ್ಧ ಸ್ಮಾರಕಗಳ ವೀಕ್ಷಣೆ ಮಾಡಿದರು.

ಮೊದಲಿಗೆ ಪ್ರಸಿದ್ಧ ವಿಜಯವಿಠಲ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಅಂಡ್ರೆಸ್ ಮತ್ತು ಕೊಲೊಡೊ ದಂಪತಿಗಳು, ಕಲ್ಲಿನ ರಥ ದೇವಾಲದ ಶಿಲ್ಪ ವೈಭವವನ್ನು ಕಂಡು ಬೆರಗಾಗಿ ಹಂಪಿಯೊಂದು ನಿಜಕ್ಕೂ ಪ್ರಪಂಚದ ಹಲವು ಅದ್ಭುತಗಳಲ್ಲಿ ಒಂದಾಗಿದೆ ಎಂದು ಪ್ರತಿಕ್ರಿಯಿಸಿದರು.

ನಂತರ ರಾಣಿಸ್ನಾನ ಗೃಹ, ಮಹಾನವಮಿ ದಿಬ್ಬ, ಕಮಲ ಮಹಲ್, ಉಗ್ರ ನರಸಿಂಹ, ಬಡವಿ ಲಿಂಗ, ಕೃಷ್ಣ ದೇವಸ್ಥಾನ, ಸಾಸವಿಕಾಳು ಗಣಪತಿ, ಕಡಲೆಕಾಳು ಗಣಪತಿ, ಹೇಮಕೂಟ ವೀಕ್ಷಣೆ ಮಾಡಿದರು. ನಂತರ ಐತಿಹಾಸಿಕ ವಿರೂಪಾಕೇಶ್ವರ ದೇವಸ್ಥಾನವನ್ನು ವೀಕ್ಷಣೆ ಮಾಡಿದರು.

ಇವರಿಗೆ ಪ್ರವಾಸಿ ಮಾರ್ಗದರ್ಶಕ ಬಸಪ್ಪ ಹಂಪಿಯ ಬಗ್ಗೆ ಮಾಹಿತಿ ನೀಡಿದರು.

Leave a Comment