ಸ್ವ-ಸಹಾಯ ಗುಂಪು: ಮಹಿಳೆಯರಿಗೆ ತರಬೇತಿ ಕಾರ್ಯಾಗಾರ

ರಾಯಚೂರು.ನ.19- ನಮ್ಮ ದೇಶವು ಅತಿ ಹೆಚ್ಚು ಹಣ್ಣು, ತರಕಾರಿ ಬೆಳೆಯುವಲ್ಲಿ ಮೊದಲನೆ ಸ್ಥಾನ ಬರಲು ಸ್ಪರ್ಧಿಸುತ್ತಿದೆ ಎಂದು ಕೈಗಾರಿಕ ಜಂಟಿ ಉಪ ನಿರ್ದೇಶಕರಾದ ಮಹಮದ್ ಇರ್ಫಾನ್ ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಮಸಾಲ ಪದಾರ್ಥಗಳ ತಯಾರಿಕಾ ಕುರಿತಾಗಿ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು ದೇಶದಲ್ಲಿ ಶೇ.30ರಷ್ಟು ಹಣ್ಣು ಉತ್ಪಾದನೆ ವ್ಯರ್ಥವಾಗುತ್ತಿದ್ದು ಆಹಾರ ಉತ್ಪಾದನೆಗಳಿಗೆ ನಮ್ಮ ದೇಶದಲ್ಲಿ ಯಾವಾಗಲೂ ಬೇಡಿಕೆ ಹೆಚ್ಚಿನ ರೀತಿಯಲ್ಲಿರುತ್ತಿದ್ದು ಆದರೆ ಯುವಕ-ಯುವತಿಯರು ಉದ್ದಿಮೆಯಲ್ಲಿ ತೊಡಗಿದರೆ ನಿರುದ್ಯೋಗ ಸಮಸ್ಯೆ ತೊಲಗುತ್ತದೆ. ಮಹಿಳೆಯರು ಈ ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಿ ಎಂದರು ಹೇಳಿದರು.
ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಗಿರಿಯಪ್ಪರವರು ಆಹಾರ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಸಲು ಕಳೆದ 70 ವರ್ಷಗಳಿಂದ ಸಂಜೀವಿನಿ ಸಂಸ್ಥೆಯು ಪರಿಶ್ರಮ ಪಡುತ್ತಿದೆ. ಅಮೂಲ್ ಪೌಡರ್ ಉತ್ಪಾದನೆಯನ್ನು ಪ್ರಥಮವಾಗಿ ಸಿಎಫ್‌ಟಿಆರ್ ತಂತ್ರಜ್ಞಾನದ ಮೂಲಕ ಈ ಗುಡಿ ಕೈಗಾರಿಕೆಯನ್ನು ಪ್ರಾರಂಭಿಸಲಾಯಿತು. ನಂತರ ಎಲೆಗಳಿಂದ ಪ್ಲೆಟ್‌ಗಳನ್ನು ಮಾಡುವುದು ಇನ್ನು ಹಲವಾರು ಮನೆಯಲ್ಲಿಯೇ ಕುಳಿತು ವಸ್ತುಗಳನ್ನು ತಯಾರಿಸಿ ಮಾರುಕಟ್ಟೆಗೆ ತರಲಾಗುತ್ತದೆ.
ಗ್ರಾಮೀಣದಿಂದ ಬರುವ ಮಹಿಳೆಯರಿಗೆ ತಂತ್ರಜ್ಞಾನ ಹೆಚ್ಚಿಸಲು ತರಬೇತಿಗಳನ್ನು ನೀಡಲಾಗುತ್ತದೆ. ಇವರಿಗೆ ಗುಂಪುಗಳಾಗಿ ವಿಂಗಡಿಸಿ ಊಟ, ವಸತಿ ಸೌಲಭ್ಯ ನೀಡಿ ತರಬೇತಿ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಉಪ ನಿರ್ದೇಶಕರಾದ ವೀರನಗೌಡ, ಡಾ.ವಿಜಯಲಕ್ಷ್ಮಿ, ಬಸವರಾಜ ಪಂಡಿತ, ಮಾಧವರೆಡ್ಡಿ, ರಾಜೇಶ್ವರಿ, ಬಿ.ಎಂ.ದೊಡ್ಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment