ಸ್ವೀಡನ್ ವಿರುದ್ಧ ಇಂಗ್ಲೆಂಡ್‌ಗೆ ಗೆಲುವು

ರಷ್ಯಾ ಸಮರಾ ಅರೆನಾ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ  ಜಯಬೇರಿ ಬಾರಸಿದ ಇಂಗ್ಲೆಂಡ್ ತಂಡದ ಆಟಗಾರರ ಸಂಭ್ರಮ.

ಮಾಸ್ಕೋ, ಜು. ೮-  ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಸೆಣಸಾಟದಲ್ಲಿ ಇಂಗ್ಲೆಂಡ್ ತಂಡ ಸ್ವೀಡನ್ ತಂಡವನ್ನು ೨-೦ ಅಂತರದಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ.

ರಷ್ಯಾದ ಸಮರಾ ಅರೆನಾದಲ್ಲಿ ನಡೆದ ಪಂದ್ಯದ ಪ್ರಥಮಾರ್ಧದಲ್ಲಿ ಮತ್ತು ದ್ವಿತೀಯಾರ್ಧದಲ್ಲಿ ಬಾರಿಸಿದ ಗೋಲ್ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾಯಿತು.

ಹ್ಯಾರಿ ಮೇಗುರ್ ಅವರು ೩೦ನೇ ನಿಮಿಷಲದಲ್ಲಿ ಇಂಗ್ಲೆಂಡ್ ಪರ ಮೊದಲ ಗೋಲ್ ಬಾರಿಸಿದರು. ಅನಂತರ ೫೮ನೇ ನಿಮಿಷದಲ್ಲಿ ಡೇಲ್ ಅಲ್ಲಿ ಅವರು ಸಿಡಿಸಿದ ಎರಡನೇ ಗೋಲ್ ಇಂಗ್ಲೆಂಡ್ ಗೆಲುವನ್ನು ಬರೆಯಿತು. ೪೭ನೇ ನಿಮಿಷದಲ್ಲಿ ಸ್ವೀಡನ್‌ನ ಮರ್ಕ್ಯೂಸ್ ಬರ್ಗ್ ಅವರು ಗೋಲ್ ಸಿಡಿಸುವ ಪ್ರಯತ್ನ ಮಾಡಿದ್ದರಾದರೂ ಅದನ್ನು ಇಂಗ್ಲೆಂಡ್ ನ ಜೋರ್ಡನ್ ಅವರು ತಪ್ಪಿಸಿದರು.

ಪಂದ್ಯದ ಪ್ರಥಮಾರ್ಧದಲ್ಲಿ ೧, ದ್ವಿತೀಯಾರ್ಧದಲ್ಲಿ ೫ ಹೆಚ್ಚುವರಿ ನಿಮಿಷಗಳನ್ನು ಸೇರಿಸಲಾಯಿತಾದರೂ ಸ್ವೀಡನ್ ಗೋಲ್ ದಾಖಲಿಸುವಲ್ಲಿ ವಿಫಲವಾಯಿತು. ಈ ಸೋಲಿನೊಂದಿಗೆ ಸ್ವೀಡನ್‌ನ ಈ ಬಾರಿಯ ಫೀಫಾ ವಿಶ್ವಕಪ್ ಕನಸು ಭಗ್ನಗೊಂಡಂತಾಗಿದೆ. ಪಂದ್ಯದ ವೇಳೆ ಇಂಗ್ಲೆಂಡ್‌ನ ಹ್ಯಾರಿ ಮೇಗುರ್, ಸ್ವೀಡನ್ ನ ಜಾನ್ ಗುಡೆಟ್ಟಿ, ಸೆಬಾಸ್ಟಿಯನ್ ಲಾರ್ಸನ್ ವಿರುದ್ಧ ಯೆಲ್ಲೋ ಕಾರ್ಡ್ ಪ್ರದರ್ಶಿಸಲ್ಪಟ್ಟಿತು. ಇಂಗ್ಲೆಂಡ್ ಮೂರುಬಾರಿ, ಸ್ವೀಡನ್ ಮೂರುಬಾರಿ ಗಾಯಾಳು ಆಟಗಾರರನ್ನು ಬದಲಿಸಿಕೊಂಡಿತು.

Leave a Comment