ಸ್ವಿಗ್ಗಿಯಲ್ಲಿ ಮಹಿಳೆಯರ ಯಶೋಗಾಥೆ!

ಈ ಬಾರಿಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿರುವ ದೇಶದ ಅತಿದೊಡ್ಡ ಆಹಾರ ವಿತರಣೆ ಸಂಸ್ಥೆಯಾಗಿರುವ ಸ್ವಿಗ್ಗಿ ಮಹಿಳೆಯರನ್ನೂ ತನ್ನ ವಿತರಕರನ್ನಾಗಿ ನೇಮಕ ಮಾಡಿಕೊಂಡಿದ್ದು, ಈ ಬಾರಿಯ ಮಹಿಳಾ ದಿನವನ್ನು ಅವರಿಗೆ ಅರ್ಪಣೆ ಮಾಡಿದೆ. #ಃಚಿಟಚಿಟಿಛಿeಈoಡಿಃeಣಣeಡಿ  ಎಂಬ ಥೀಮ್‌ನೊಂದಿಗೆ ಈ ಮಹಿಳಾ ದಿನವನ್ನು ವಿಭಿನ್ನಗೊಳಿಸಲಿದೆ.

  • ಪ್ರಯೋಜನಗಳು ಇಂತಿವೆ:-
  • ಅಪಘಾತ ಮತ್ತು ವೈದ್ಯಕೀಯ ವಿಮೆ
  • ಪ್ರತಿನಿಧಿಗಳಿಗೆ ಮತ್ತು ಕುಟುಂಬ ಸದಸ್ಯರ ಚಿಕಿತ್ಸೆಗೆ ವೈದ್ಯರನ್ನು ಕರೆಸುವುದು.
  • ಪ್ರತಿನಿಧಿಗಳಿಗೆ/ಅವರ ಮಕ್ಕಳಿಗೆ ಶೈಕ್ಷಣಿಕ ಸ್ಕಾಲರ್‍ಶಿಪ್ ಕಾರ್ಯಕ್ರಮಗಳು.
  • ವೈಯಕ್ತಿಕ ಸಾಲಕ್ಕೆ ಬ್ಯಾಂಕುಗಳೊಂದಿಗೆ ಒಪ್ಪಂದ.
  • ಸುರಕ್ಷತೆ ಮತ್ತು ಆರಾಮದಾಯಕತೆಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಪ್ರಯೋಜನಗಳು/ಉಪಕ್ರಮಗಳು.
  • ಉತ್ತಮ ಸಾಧನೆ ತೋರುವವರಿಗೆ ಮಾಸಿಕ ರಿವಾರ್ಡ್‌ಗಳು ಮತ್ತು ಭತ್ಯೆಗಳು.

ಸ್ವಿಗ್ಗಿಗೆ ವಿತರಕರೇ ಬೆನ್ನೆಲುಬಾಗಿದ್ದಾರೆ. ಇದರಿಂದ ದೇಶದ ಅತಿದೊಡ್ಡ ಆಹಾರ ವಿತರಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಸಾಧ್ಯವಾಗಿದೆ. ಕಳೆದ ಹಲವು ವರ್ಷಗಳಲ್ಲಿ ಸ್ವಿಗ್ಗಿ ಮಹಿಳಾ ವಿತರಕರನ್ನು ನೇಮಕ ಮಾಡಿಕೊಂಡು ಅವರಿಗೆ ಸೂಕ್ತ ತರಬೇತಿ ನೀಡುವತ್ತ ಗಮನಹರಿಸಿದೆ. ಪ್ರಸ್ತುತ ದೇಶದ ೨೦ ಕ್ಕೂ ಹೆಚ್ಚು ನಗರಗಳಲ್ಲಿ ಸ್ವಿಗ್ಗಿಯ ೨೦೦ ಕ್ಕೂ ಹೆಚ್ಚು ಮಹಿಳಾ ವಿತರಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಂಬೈ, ನವದೆಹಲಿ, ಹೈದ್ರಾಬಾದ್, ಬೆಂಗಳೂರು, ಪುಣೆ, ಚೆನ್ನೈ, ಕೊಚ್ಚಿ, ನಾಗ್ಪುರ, ಅಹ್ಮದಾಬಾದ್, ಕೋಲ್ಕತ್ತಾ ಸೇರಿದಂತೆ ಇನ್ನೂ ಹಲವು ನಗರಗಳಲ್ಲಿ ಮಹಿಳಾ ವಿತರಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸ್ವಿಗ್ಗಿಯು ‘ಸುರಕ್ಷತಾ ವಲಯವನ್ನು’ ಗುರುತಿಸುವ ಮೂಲಕ ಮಹಿಳಾ ವಿತರಕರಿಗೆ ಸುರಕ್ಷತೆ ಮತ್ತು ಸಮಗ್ರತಾ ಪರಿಸರವನ್ನು ಸೃಷ್ಟಿಸಿದೆ. ಈ ಸುರಕ್ಷತಾ ವಲಯದ ಮೂಲಕ ಮಹಿಳಾ ವಿತರಕರಿಗೆ ಸ್ವಿಗ್ಗಿಯು ನಮ್ಮ ನಗರಗಳಲ್ಲಿ ಸಂಜೆ ೬ ಗಂಟೆಯೊಳಗೆ ಆಹಾರ ವಿತರಣೆ ಚಟುವಟಿಕೆಯನ್ನು ಮುಗಿಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಮಹಿಳಾ ಪ್ರತಿನಿಧಿಗಳು ತಿoಡಿಞ-ಟiಜಿe bಚಿಟಚಿಟಿಛಿe  ಅಡಿಯಲ್ಲಿ ಆರಾಮವಾಗಿ ತಮ್ಮ ಕರ್ತವ್ಯ ನಿರ್ವಹಿಸಬಹುದಾಗಿದೆ. ಅದೇರೀತಿ, ಆಹಾರ ತಯಾರಿಕಾ ಸಂಸ್ಥೆಗಳಲ್ಲಿ ಈ ಮಹಿಳಾ ವಿತರಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಸೇರಿದಂತೆ ಮತ್ತಿತರೆ ಸೌಲಭ್ಯಗಳನ್ನು ಕಲ್ಪಿಸುತ್ತಿವೆ. ಇಷ್ಟೇ ಅಲ್ಲ. ಸ್ವಿಗ್ಗಿಯು ಬೆಳವಣಿಗೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳಾ ವ್ಯವಸ್ಥಾಪನಾ ಪಾತ್ರಗಳನ್ನೂ ನಿರ್ವಹಿಸುವಂತೆ ಮಾಡುತ್ತಿದೆ. ಅಂದರೆ, ವ್ಯವಸ್ಥಾಪನಾ ಹುದ್ದೆಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿದೆ.

ಸ್ವಿಗ್ಗಿಯ ಈ ಲಿಂಗ ಸೇರ್ಪಡೆ ವಿತರಣಾ ಜಾಲದ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಇನ್ನೂ ಹೆಚ್ಚು ಮಹಿಳೆಯರನ್ನು ನೇಮಕ ಮಾಡಿಕೊಳ್ಳಲು ಇದು ಮಾರ್ಗಸೂಚಿಯಾದಂತಾಗಿದೆ.

ಈ ಮಹಿಳಾ ವಿತರಕರು ಪುರುಷ ವಿತರಣಾ ಪ್ರತಿನಿಧಿಗಳಿಗೆ ಸರಿ ಸಮಾನವಾಗಿ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಸ್ವಿಗ್ಗಿಯ ‘ಸ್ವಿಗ್ಗಿ ಸ್ಮೈಲ್ಸ್’, ಮೋಟಿವೇಷನ್ ಮತ್ತು ಬೆನಿಫಿಟ್ ಸ್ಕೀಂಗಳು ಪ್ರತಿನಿಧಿಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡಲಿವೆ.

ಈ ಬಾರಿಯ ಮಹಿಳಾ ದಿನಾಚರಣೆ ಅಂಗವಾಗಿ ನಾವು ಕೆಲವು ಮಹಿಳಾ ವಿತರಣಾ ಪ್ರತಿನಿಧಿಗಳ ಕಾರ್ಯಕ್ಷಮತೆ ಮತ್ತು ವೃತ್ತಿಪರ ಜೀವನಗಾಥೆಯ ಬಗ್ಗೆ ಇಲ್ಲಿ ಬೆಳಕು ಚೆಲ್ಲಿದ್ದೇವೆ. ಈ ಮಹಿಳಾ ಪ್ರತಿನಿಧಿಗಳೆಲ್ಲಾ ಅತ್ಯಂತ ಸಂತೋಷದಿಂದ ಸಾವಿರಾರು ಭಾರತೀಯರಿಗೆ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದಾರೆ.

ಪೂಜಾ ಬಿಕಾಂ ಪದವೀಧರೆ. ಈ ಹಿಂದೆ ಯುವ ಅಸೋಸಿಯೇಟ್ ಆಗಿ ಸೇವೆ ಸಲ್ಲಿಸಿದ್ದರು. ಇದೀಗ ಪೂಜಾ ಸ್ವಿಗ್ಗಿಯಲ್ಲಿ ವ್ಯವಸ್ಥಾಪನಾ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರು ವಿತರಣಾ ಪ್ರತಿನಿಧಿಯಾಗಿ ಕೆಲಸ ಆರಂಭಿಸಿದ್ದರು. ಆದರೆ, ಅವರಲ್ಲಿರುವ ವ್ಯವಸ್ಥಾಪನಾ ಸಾಮಥ್ರ್ಯ ಇದೆ ಎಂಬುದನ್ನು ಗಮನಿಸಿದ ಸ್ವಿಗ್ಗಿ ಆಡಳಿತ ಮಂಡಳಿ ಅವರಿಗೆ ಬಡ್ತಿ ನೀಡಿತು. ಪ್ರಸ್ತುತ ಪೂಜಾ ಅವರು ತಮ್ಮ ಹುದ್ದೆಯನ್ನು ಅತ್ಯಂತ ಸಂತಸದಿಂದ ನಿಭಾಯಿಸುತ್ತಿದ್ದಾರೆ.

ವಾರಾಂತ್ಯದ ದಿನಗಳಲ್ಲಿ ಅವರು ಸ್ನಾತಕೋತ್ತರ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಾರೆ. ಸ್ವಿಗ್ಗಿಯ ಭತ್ಯೆಗಳು ಸೇರಿದಂತೆ ಮತ್ತಿತರೆ ಸೌಲಭ್ಯಗಳಿಂದಾಗಿ ಪೂಜಾ ಅವರ ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಪೂಜಾ ಅವರು ಪೆಟ್ರೋಲ್, ಆನ್‌ಲೈನ್ ಶಾಪಿಂಗ್ ವೋಚರ್‌ಗಳು, ಶೈಕ್ಷಣಿಕ ಸಾಲಗಳು ಅಥವಾ ಆರೋಗ್ಯ ಆರೈಕೆಗೆ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ.

Leave a Comment