ಸ್ವಾರ್ಥಕೊಂದು ರಸ

ಪೆನ್ನು ಹಿಡಿಯಲು ಲಾಯಕ್ಕಲ್ಲ…. ಹೀಗಂತ ನಿರ್ದೇಶಕ ಅಶ್ವಿನ್ ಕೊಡಂಗೆ ಹೇಳಿಕೊಂಡರು. ಮಾತು ಕೇಳಿದ ಯಾರಿಗಾದರೂ ಕೋಡಂಗಿ ಥರ ಮಾತನಾಡುತ್ತಿದ್ದಾರೆ ಅನ್ನಿಸಿರಬಹುದು. ಆದರೆ ಅವರ ಮಾತಿನಲ್ಲಿ ಅವರಿಗೆ ಸ್ಪಷ್ಟತೆ ಇತ್ತು. ಹೀಗಾಗಿ ಮತ್ತೆ ಒತ್ತಿ ಹೇಳಿದರು. ಪೆನ್ನು ಹಿಡಿಯಲು ಲಾಯಕ್ಕಲ್ಲ ಎಂದು.
ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಕೋಡಂಗೆ, ಹಾಡು ಬರೆಯಲು ಹಿರಿಯ ಸಾಹಿತಿ, ಗೀತರಚನೆಕಾರ ಜಯಂತ್ ಕಾಯ್ಕಿಣಿ ಅವರು ಚಿತ್ರ ಮತ್ತು ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ಕೇಳಿದರು.
ಆಗ ಅರೆ ಇವರಿಗೆ ಮಾಹಿತಿ ನೀಡುವ ಬದಲು ನಾನೇ ಹಾಡು ಬರೆದುಕೊಡಲಾ ಅನ್ನಿಸಿತು ಎಂದರು.
ಜಯಂತ್ ಕಾಯ್ಕಿಣಿ ಅವರ ಬಳಿ ಹಾಡು ಬರೆಸಲು ಹಲವರು ಹಾತೊರೆಯುತ್ತಾರೆ. ಒಂದು ಹಾಡು ಬರೆದುಕೊಟ್ಟರೆ ಸಾಕು ಎಂದು ಮುಗಿ ಬೀಳುತ್ತಾರೆ ಅಂತಹುದರಲ್ಲಿ ನವ ನಿರ್ದೇಶಕರ ಹೇಳಿಕೆ ಒಂದಷ್ಟು ಮುಜುಗರ ಅನ್ನಿಸಿದ್ದರೂ ಆಶ್ಚರ್ಯವಿಲ್ಲ. ಪಕ್ಕದಲ್ಲಿಯೇ ನಿಂತಿದ್ದ ಜಯಂತ್ ಕಾಯ್ಕಿಣಿ ಅವರು, ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು.
ಮತ್ತೆ ಮಾತು ಮುಂದುವರಿಸಿದ ಅಶ್ವಿನ್, ಜಯಂತ್ ಸಾರ್ ಹಾಡು ಬರೆದ ಮೇಲೆ ನಾನು ಪೆನ್ನು ಹಿಡಿಯಲು ಲಾಯಕ್ಕಲ್ಲ ಎನ್ನುವುದು ಗೊತ್ತಾಯಿತು ಎಂದು ಹೇಳಿಕೊಂಡರು “ಸ್ವಾರ್ಥರತ್ನ” ಚಿತ್ರದ ಹಾಡಿನ ಸಿಡಿ ಬಿಡುಗಡೆಯಲ್ಲಿ ಸಮಾರಂಭದಲ್ಲಿ.
ಜಯಂತ್ ಕಾಯ್ಕಿಣಿ ಮಾತನಾಡಿ, ನಿರ್ದೇಶಕರ ತಂದೆ ಶಂಕರ್‌ನಾಗ್, ಅನಂತ್‌ನಾಗ್ ತಂಡದಲ್ಲಿದ್ದವರು. ಹೀಗಾಗಿ ಅವರ ಮೇಲಿನ ಅಭಿಮಾನದಿಂದ ಚಿತ್ರಕ್ಕೆ ಹಾಡು ಬರೆಯಲು ಒಪ್ಪಿಕೊಂಡೆ ಎಂದರು.
ನಟ,ನಿರ್ಮಾಪಕ ಆದರ್ಶ್,ಮೇಕಪ್ ಹಾಕಿಕೊಂಡು ಪಾತ್ರಕ್ಕಾಗಿ ಸಂಜೆಯವರೆಗೂ ಕಾದು ನಟಿಸಲು ಅವಕಾಶ ಸಿಗದೆ ವಾಪಸ್ಸಾದ ದಿನಗಳನ್ನೂ ಕಂಡಿದ್ದೇನೆ. ಮೊದಲ ಬಾರಿಗೆ ನಾಯಕನಾಗಿದ್ದು, ಚಿತ್ರದಲ್ಲಿ ನವರಸಗಳ ಜೊತೆಗೆ ಹೊಸದೊಂದು ಸ್ವಾರ್ಥರಸ ಪರಿಚಯಿಸಿದ್ದೇವೆ. ಮೊದ ಮೊದಲು ನಟಿಸಲು ಕಷ್ಟ ಆಯಿತು ಆ ಬಳಿಕ ಹೊಂದಿಕೊಂಡೆ.ಚಿತ್ರದಲ್ಲಿ ಜನರನ್ನು ನಗಿಸಲು ನಾನಾ ವೇಷ ಹಾಕಿದ್ದೇನೆ ಎಲ್ಲರಿಗೂ ಇಷ್ಟವಾಗಲಿದೆ ಎಂದು ವಿವರ ನೀಡಿದರು.
ನಾಯಕಿ ಇಶಿತಾ ವರ್ಷ,ಟಾಮ್‌ಬಾಯ್ ರೀತಿ ಪಾತ್ರ,ಸ್ವಾರ್ಥ ರಹಿತ ಹುಡುಗಿ ಸ್ವಾರ್ಥಿಯನ್ನು ಪ್ರೀತಿಸಿದ ನಂತರ ಏನೆಲ್ಲಾ ಆಗಲಿದೆ ಎನ್ನುವುದು ಚಿತ್ರದ ತಿರುಳು ಎಂದರೆ ಮತ್ತೊಬ್ಬ ನಾಯಕಿ ಸ್ನೇಹಾ ಸಿಂಗ್, ಉತ್ತಮ ಪಾತ್ರ ಸಿಕ್ಕಿದೆ ಎಂದರು.
ಹಿರಿಯ ಕಲಾವಿದ ಎಂ.ಎಸ್ ಉಮೇಶ್,ಕಮರ್ಷಿಯಲ್ ನಿರ್ದೇಶಕರು ತಮ್ಮನ್ನು ಮರೆತು ಬಿಟ್ಟಿದ್ದಾರೆ. ಅಂತಹ ಸಮಯದಲ್ಲಿ ಒಳ್ಳೆಯ ಪಾತ್ರ ಸಿಕ್ಕಿದೆ.ಚಿತ್ರ ಯಶಸ್ವಿಯಾಗಲಿ ಎಂದು ಹರಸಿದರು. ಬಿಜೆ ಭರತ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ.

Leave a Comment