ಸ್ವಾಮೀಜಿಗಳು ಸಲಹೆ ಕೊಡೋದು ಬೆದರಿಕೆ ಹಾಕೋದು ಸರಿಯಲ್ಲ

ಕೋಲಾರ.ಜ.೧೬. ಸ್ವಾಮೀಜಿಗಳು ಸಲಹೆ ಕೊಡಲಿ, ಆದರೆ, ವೇದಿಕೆಯಲ್ಲೇ ಬೆದರಿಕೆ ಹಾಕುವುದು ಸರಿಯಲ್ಲ ಎಂದು ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನಡೆಯನ್ನು ಸಚಿವ ಎಚ್.ನಾಗೇಶ್ ಖಂಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಗಳು ಈ ರೀತಿ ಕೇಳುವುದು ಸಮಂಜಸವಲ್ಲ. ಸಲಹೆ ನೀಡುವುದು ಸೂಕ್ತ, ಬೆದರಿಕೆ ಹಾಕುವುದು ಸರಿಯಲ್ಲ ಎಂದರು. ಕೆಲಸಂದರ್ಭಗಳಲ್ಲಿ ಸ್ವಾಮೀಜಿಗಳು ಬಂದು ಸಲಹೆ ನೀಡಿದರೆ ಮುಖ್ಯಮಂತ್ರಿಗಳು ಅದನ್ನು ಪರಿಗಣಿಸುತ್ತಾರೆ. ಹೀಗಾಗಿ ಅನೇಕ ಆಶ್ರಮಗಳಿಗೂ ಸಹಾಯ ಮಾಡಿದ್ದಾರೆ. ಆದರೆ ಈ ರೀತಿ ವೇದಿಕೆಯಲ್ಲಿ ಮಾತಾಡಿದರೆ ಮುಖ್ಯಮಂತ್ರಿಗಳ ಘನತೆ ಏನಾಗಬೇಕು ಎಂದು ಪ್ರಶ್ನಿಸಿದರು

Leave a Comment