ಸ್ವಾಮಿ ವಿವೇಕಾನಂದ ಹೆಸರು ನಾಮಕರಣಕ್ಕೆ ಒತ್ತಾಯ

ರಾಯಚೂರು.ಜ.11- ರಾಯಚೂರು ಕೇಂದ್ರ ಬಸ್ ನಿಲ್ದಾಣಕ್ಕೆ `ಯೂತ್ ಐಕಾನ್` ಎಂದೇ ಪ್ರಸಿದ್ಧಿ ಹೊಂದಿರುವ ಸ್ವಾಮಿ ವಿವೇಕಾನಂದರ ಹೆಸರು ನಾಮಕರಣ ಮಾಡುವಂತೆ ರಿಪಬ್ಲಿಕನ್ ಸೇನೆ ನಗರಾಧ್ಯಕ್ಷ ಅಂಬಾಜಿ ಒತ್ತಾಯಿಸಿದರು.

ಅವರಿಂದು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಶಿಕ್ಷಣ ಏಕಾಗ್ರತೆ, ಧ್ಯಾನದಿಂದ ಸಿದ್ಧಿ, ಸ್ವದೇಶಿ ಮಂತ್ರದ ಮೂಲಕ ರಾಷ್ಟ್ರದ ಪ್ರಗತಿಯನ್ನೇ ಜೀವನವನ್ನನಾಗಿಸಿಕೊಂಡಿದ್ದ, ಸ್ವಾಮಿ ವಿವೇಕಾನಂದರು ದೇಶಕ್ಕೆ ನೀಡಿರುವ ಕೊಡುಗೆ ಅನನ್ಯವಾಗಿದೆ. ಇಂತಹ ಮಹಾನ್ ವ್ಯಕ್ತಿ ಹೆಸರನ್ನು ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದಿರುವ ರಾಯಚೂರು ಕೇಂದ್ರ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವುದು ಅತ್ಯವಶ್ಯವಾಗಿದೆ.

ಸ್ವಾಮಿ ವಿವೇಕಾನಂದರ ಹೆಸರು ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಜಿಲ್ಲಾಡಳಿತದ ಮೇಲೆ ತೀವ್ರ ಒತ್ತಡವೇರಿ ರಾಯಚೂರಿನ ಘನತೆ, ಗೌರವವನ್ನು ಎತ್ತಿ ಹಿಡಿಯಬೇಕು. ನಾಳೆ ನಡೆಯಲಿರುವ ಸ್ವಾಮಿ ವಿವೇಕಾನಂದರ 154 ನೇ ಜನ್ಮ ಶತಮಾನೋತ್ಸವ ಅತ್ಯಂತ ವೈಭವದಿಂದ ಆಚರಣೆ ಮಾಡಲು ನಿರ್ಧರಿಸಲಾಗಿದ್ದು, ಜಿಲ್ಲಾಡಳಿತ ಮೇಲ್ಕಂಡ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ರಾಯಚೂರು ಕೇಂದ್ರ ಬಸ್ ನಿಲ್ದಾಣಕ್ಕೆ ಸ್ವಾಮಿ ವಿವೇಕಾನಂದರ ಹೆಸರು ನಾಮಕರಣ ಮಾಡದಿದ್ದಲ್ಲಿ, ಉಗ್ರ ಹೋರಾಟಕ್ಕೆ ಅಣಿಯಾಗಲಾಗುವುದೆಂದು ಎಚ್ಚರಿಸಿದರು.  ಸೇನೆ ಸಂಚಾಲಕರಾದ ಧರ್ಮಣ್ಣ ನಾಯಕ, ನವೀನ್ ನಿಜಾಂಕರ್, ಮಸೂದ್ ಅಲಿ, ರವಿ ಕುಮಾರ, ಕಬ್ರದ್ ಹುಸೇನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Leave a Comment