ಸ್ವಾಮಿ ವಿವೇಕಾನಂದರ ೧೫೬ ನೇ ಜಯಂತಿ ಆಚರಣೆ

ಮೈಸೂರು, ಜ.12- ಇಂದು ನಗರದ ಚೆಲುಬಾಂಬ ಉದ್ಯಾನವನದ ಸ್ವಾಮಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿಶ್ವಹಿಂದೂ ಧರ್ಮಸಂರಕ್ಷಣಾ ವೇದಿಕೆ ಇಂದ ಸ್ವಾಮಿ ವಿವೇಕಾನಂದರ ೧೫೬ ನೇ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಶ್ರೀ ರಘುರಾಮಯ್ಯ ವಾಜಪೇಯ್ ಸಮಾಜ ಸೇವಕರು , ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ, ಡಾ|| ಚಂದ್ರಶೇಖರ್ ಆದಿತ್ಯ ಆಸ್ಪತ್ರೆ , ಜಿ.ಸಿ ಪುಟ್ಟಸ್ವಾಮಿ , ನಗರ ಪಾಲಿಕೆ ಸದಸ್ಯರುಗಳಾದ ಪೈ ಶ್ರೀನಿವಾಸ್ , ಕೆ.ವಿ.ಶ್ರೀಧರ್ , ನಮ್ರತಾ ರಮೇಶ್ , ಗುರುವಿನಾಯಕ , ರವರಿಗೆ ಸನ್ಮಾನ ಮಾಡಲಾಯಿತು
ಈ ಸಂಧರ್ಭದಲ್ಲಿ ರಘುರಾಮಯ್ಯ ವಾಜಪೇಯಿ ರವರು ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತಲ್ಲಿ ಧರ್ಮ ಜಾಗೃತಿ ಮೂಡಿಸಿ ಚಿಕಾಗೋಗೆ ಹೋಗುವ ಸಂಧರ್ಭದಲ್ಲಿ ೧೮೯೨ರಲ್ಲಿ ಮೈಸೂರು ಮಹಾರಾಜರ ಅಹ್ವಾನದ ಮೇಲೆ ಮೈಸೂರಿಗೆ ೧೭ ದಿನಗಳ ಕಾಲ ಬಂದು ಧರ್ಮ ಪ್ರಚಾರ ನೆಡೆಸಿದ್ದರು ಈ ಸಂಧರ್ಭದಲ್ಲಿ ಮೈಸೂರು ಜನತೆ ಇವರಿಗೆ ಹಣವನ್ನು ನೀಡುವ ಸಂಧರ್ಭದಲ್ಲಿ ಹಣವನ್ನು ತಿರಸ್ಕರಿಸಿ ನನಗೆ ನೀವು ಪ್ರೀತಿಯಿಂದ ಎರಡು ಕೋಟುಗಳನ್ನು ಕೊಡಿ ಎಂದು ಹೇಳಿದರು ಮೈಸೂರಿಗೆ ಬಂದು ಮೈಸೂರನ್ನು ಅವರ ಕಾಲಿನ ಸ್ಪರ್ಷದಿಂದ ಪವಿತ್ರಗೊಳಿಸಿ ಸ್ವಾಮಿ ವಿವೇಕಾನಂದರು ನಮಗೆ ಸ್ಪೂರ್ತಿ ಎಂದು ಹೇಳಿದರು ಈ ಸಂಧರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷರಾ್ ಬಿ‌.ಎನ್‌.ಸ್ವಾಮೀಗೌಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment