ಸ್ವಾಮಿ ಅಗ್ನಿವೇಶ್ ಮೇಲೆ ಮತ್ತೊಮ್ಮೆ ಹಲ್ಲೆ

ನವದೆಹಲಿ, ಆ.೧೭- ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಮೇಲೆ ಕಿಡಿಗೇಡಿಗಳು ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ.
ವಾಜಪೇಯಿ ಅಂತಿಮ ದರ್ಶನ ಪಡೆಯುವುದು ಬೇಡ ಎಂದು ವಿರೋಧಿಸಿ ಹಲ್ಲೆ ನಡೆಸಿದ್ದರಿಂದ ಸಾಮಾಜಿಕ ಕಾರ್ಯಕರ್ತ ಅಗ್ನಿವೇಶ್ ಅಂತಿಮ ದರ್ಶನ ಪಡೆಯದೇ ವಾಪಸ್ಸಾದರು.
ಇತ್ತೀಚೆಗಷ್ಟೇ ಅಗ್ನಿವೇಶ್ ಅವರ ಮೇಲೆ ನಡು ರಸ್ತೆಯಲ್ಲೇ ದಾಳಿ ಹಾಗೂ ಹಲ್ಲೆ ನಡೆಸಲಾಯಿತು. ಇದೀಗ ಬಿಜೆಪಿ ಕಚೇರಿ ಬಳಿಯೇ ಹಲ್ಲೆ ನಡೆಸಲಾಗಿದೆ.

Leave a Comment