ಸ್ವಾಭಿಮಾನವಿರದ ವ್ಯಕ್ತಿ ಜೀವಂತ ಶವವಿದ್ದ ಹಾಗೆ

ಮೈಸೂರು. ಆ.23: ಸ್ವಾವಲಂಬನೆ, ಸ್ವಾಭಿಮಾನವಿರದ ವ್ಯಕ್ತಿ ಜೀವಂತ ಶವವಿದ್ದ ಹಾಗೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಅವರಿಂದು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿಶ್ವವಿದ್ಯಾನಿಲಯ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣ ಕೇಂದ್ರ, ಡಾ.ಬಿ.ಆರ್.ಅಂಬೇಡ್ಕರ್ ಪೀಠ ಮಾನಸಗಂಗೋತ್ರಿ ವತಿಯಿಂದ ‘ನೂರು ವರ್ಷಗಳ ಮೀಸಲಾತಿಯ ನಡಿಗೆ…ಒಂದು ಪರಿವೀಕ್ಷಣೆ’ ಕುರಿತ ಎರಡು ದಿನಗಳ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸ್ವಾಭಿಮಾನ ಮುಖ್ಯವೇ ಹೊರತು ಲಾಭವಲ್ಲ. ಸ್ವಾವಲಂಬನೆ ಸ್ವಾಭಿಮಾನವಿಲ್ಲದ ವ್ಯಕ್ತಿ ಜೀವಂತ ಶವವಿದ್ದ ಹಾಗೆ. ಕುಡಿಯೋದು, ಮಕ್ಕಳ ಮಾಡಿ ಬೀದಿಗೆ ಬಿಡೋದು ಇಷ್ಟೇ ಅಲ್ಲ. ಕುಡಿತ ಬಿಡಬೇಕು. ಫ್ಯಾಮಿಲಿ ಪ್ಲಾನಿಂಗ್ ಇರಬೇಕು. ಲಿಟ್ರಸಿ ಇರಬೇಕು ನಮ್ಮಲ್ಲಿ. ಚಿಂತನೆ ಮಾಡಬೇಕು ಎಂದರು. ಧ್ವನಿ ಇಲ್ಲದವರಿಗೆ ಧ್ವನಿ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಹೇಗೆ ರೂಪುರೇಷೆಗಳಿರಬೇಕು. ಹೇಗೆ ಆಡಳಿತ ನಡೆಸಬೇಕು. ನ್ಯಾಯಾಂಗ ಹೇಗಿರಬೇಕು ಎಂಬುದನ್ನು ಸಂವಿಧಾನದ ಮೂಲಕ ವಿವರಿಸಿದರು. ಸಂವಿಧಾನದಡಿಯಲ್ಲಿಯೇ ಎಲ್ಲವೂ ನಡೆಯುತ್ತೆ. 6ನೇ ಬಾರಿಗೆ ಸಂಸತ್ ಗೆ ಆಯ್ಕೆಯಾದವನು ನಾನು. ಸಂವಿಧಾನದಡಿಯಲ್ಲಿಯೇ ಎಲ್ಲವೂ ನಡೆಯುತ್ತದೆ. ಕಗ್ಗತ್ತಲಿನಲ್ಲಿದ್ದವರನ್ನು ಮನುಷ್ಯರನ್ನಾಗಿ ಮಾಡಿದ್ದಾರೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಯಾವುದೇ ಪಕ್ಷದಲ್ಲಿರಲಿ ಅವರು ಸಂವಿಧಾನದಡಿಯಲ್ಲಿಯೇ ಕೆಲಸ ಮಾಡಬೇಕು ಎಮದು ತಿಳಿಸಿದರು.
ಸಂವಿಧಾನ ಭಾರತದ ವಿಶೇಷ ಗ್ರಂಥ. ಸರ್ವೋತ್ಕೃಷ್ಟ ಗ್ರಂಥ ಎಂದು ಪ್ರಧಾನಿಗಳೇ ಹೇಳಿದ್ದಾರೆ. ಅದನ್ನು ಒಂದಲ್ಲ ಹತ್ತು ಬಾರಿ ಓದಿ. ಸಮಾನತೆಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಸಂವಿಧಾನವೆಷ್ಟು ನೆರವು ನೀಡತ್ತೆ ಎಂಬುದನ್ನು ತಿಳಿದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನದಾಸ್, ಮೈಸೂರು ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಬೆಂಗಳೂರು ಉತ್ತರ ವಿವಿ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜು, ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರ ಸಂಯೋಜನಾಧಿಕಾರಿ ಡಾ.ಎಸ್.ನರೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Comment