ಸ್ವಾತಂತ್ರ್ಯ ಎಲ್ಲರ ಹಕ್ಕು-ಯರಗುಪ್ಪಿ

ಬಾದಾಮಿ, ಆ 16- ನಮ್ಮ ದೇಶದ ರಾಷ್ಟ್ರ ನಾಯಕರ ತ್ಯಾಗ, ಬಲಿದಾನ, ಹೋರಾಟದ ಫಲವಾಗಿ ದೊರೆತ ಈ ಸ್ವಾತಂತ್ರ್ಯವನ್ನು ನಾವೆಲ್ಲರೂ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಯುವಮುಖಂಡ ಮುತ್ತಣ್ಣ ಯರಗೊಪ್ಪ ಹೇಳಿದರು.

 

 
ತಾಲೂಕಿನ ನೆರೆ ಸಂತ್ರಸ್ಥರ ಗ್ರಾಮದ ಮುಮ್ಮರಡಿಕೊಪ್ಪ ಪುನರ್ವಸತಿ ಕೇಂದ್ರದ ಶಾಲೆಯಲ್ಲಿ  ಹಮ್ಮಿಕೊಂಡಿದ್ದ 73 ನೇ ಸ್ವಾತಂತ್ರ್ಯ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ದೇಶದಲ್ಲಿರುವ ಸಂಪತ್ತನ್ನು ನೋಡಿ ಬ್ರಿಟಿಷರು ಕೇವಲ ವ್ಯಾಪಾರಕ್ಕಾಗಿ ಬಂದು ಇಲ್ಲಿನ ವ್ಯವಸ್ಥೆಯಿಂದ ನಮ್ಮ ದೇಶವನ್ನು ಕುತಂತ್ರದ ಮೂಲಕ ಆಡಳಿತ ಚುಕ್ಕಾಗಿ ಹಿಡಿದರು. ಸುಮಾರು ಎರಡು ಶತಮಾನಗಳ ಕಾಲ ದೇಶವನ್ನು ಆಳಿದ ಬ್ರಿಟಿಷರು, ಭಾರತೀಯರನ್ನು ಗುಲಾಮರನ್ನಾಗಿಸಿದ್ದರು.

 

 

 

 

ಇದರಿಂದ ಬೇಸತ್ತ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಮಂಗಲ ಪಾಂಡ್ಯ, ಭಗತಸಿಂಗ್, ಕಿತ್ತೂರರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ದೇಶ ಭಕ್ತರು ಬ್ರಿಟಿಷರ ದಬ್ಬಾಳಿಕೆಯನ್ನು ಮೆಟ್ಟಿ ನಿಂತು ಸ್ವಾತಂತ್ರ್ಯ ದೊರಕಿಸಲು ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದರು. ರಾಷ್ಟ್ರೀಯ ನಾಯಕರಾದ ಮಹಾತ್ಮಾ ಗಾಂಧೀಜಿ, ಸುಭಾಸ ಚಂದ್ರ ಭೋಸ್, ಲಾಲಾ ಲಜಪತರಾಯ್, ದಾದಾಬಾಯಿ ನವರೋಜಿ ಹೀಗೆ ಇನ್ನೂ ಅನೇಕ ಮುಖಂಡರು ಸ್ವಾತಂತ್ರಕ್ಕಾಗಿ ಹೋರಾಡಿದ ಫಲವಾಗಿ 1947 ಅ.15 ರಂದು ಸ್ವಾತಂತ್ರ್ಯ ದೊರೆಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳು, ಶಿಕ್ಷಕರು, ಊರಿನ ಹಿರಿಯರು, ನಿರಾಶ್ರಿತರು ಹಾಜರಿದ್ದರು

Leave a Comment