ಸ್ವಚ್ಛತೆಗೆ ವಾಹನಗಳು ಸಿದ್ಧ-ಮೇಯರ್

ಮೈಸೂರು ಏ.21- ಮುಂದಿನ ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗುವ ಹಿನ್ನಲೆಯಲ್ಲಿ ನಗರದಲ್ಲಿ ಮಳೆ ಬಿದ್ದ ಸಂಧರ್ಭದಲ್ಲಿ ಶೇಖರಗೊಂಡ ಮಳೆ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಸುಸೂತ್ರವಾಗಿ ನಡೆಯಲು ಅನುಕೂಲವಾಗುವಂತೆ ಪಾಲಿಕೆಯ ವತಿಯಿಂದ 8 ಆಟೋಗಳು ಹಾಗೂ 4 ಟ್ಯಾಂಕರ್ಗಳನ್ನು ಮೇಯರ್ ರವಿಕುಮಾರ್ ಇಂದು ಮಧ್ಯಾಹ್ನ ಪಾಲಿಕೆ ಆವರಣದಲ್ಲಿ ಅನಾವರಣಗೊಳಿಸಿದರು.
ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಮೇಯರ್ ರವಿ ಕುಮಾರ್ ನಗರದಲ್ಲಿ ಕಳೆದ ಒಂದು ವಾರದಿಂದ ದಿನಬಿಟ್ಟು ದಿನ ಮಳೆಯಾಗುತ್ತಿರುವುದು ಸಂತಸದ ಸಂಗತಿ. ಮುಂದಿನ ತಿಂಗಳು ಆರಂಭಗೊಳ್ಳಲಿರುವ ಮುಂಗಾರು ಮಳೆಯಲ್ಲಿ ರಾಜ್ಯಾದ್ಯಂತ ಹೆಚ್ಚಾಗಿ ಬೀಳಲೆಂದು ಅನುಗ್ರಹಿಸುವಂತೆ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸಿದರು.
ನಿನ್ನೆ ನಗರದಲ್ಲಿ ಬಿದ್ದ ಭಾರಿ ಮಳೆಯಿಂದಾಗಿ ನಗರದ ಹಲವೆಡೆ ಮಳೆಯ ನೀರು ಕೆಲವು ಬದಲಾವಣೆಗಳಲ್ಲಿನ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಹಾಗೂ ಕಟ್ಟಡಘಳಿಗೆ ಹರಿದ ಪರಿಣಾಮ ಅಲ್ಲಲಿನ ಜನತೆ ಬಹಳ ತೊಂದರೆ ಅನುಭವಿಸಿದರು ಎಂಬ ವಿಷಯ ಇಂದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಮುಂದಿನ ದಿನಗಳಲ್ಲಿ ಮಳೆ ನೀರು ಹಾಗೂ ಒಳಚರಂಡಿ ಕೊಳಚೆ ನೀರು ಸಂಗ್ರಹಗೊಂಡ ವಿಷಯವನ್ನು ಪಾಲಿಕೆಗೆ ತಿಳಿಸಿದ ಕೂಡಲೇ ಪಾಲಿಕೆಯ ಸಿಬ್ಬಂದಿಗಳು ಸ್ಥಳಕೆ ಆಗಮಿಸಿ ಸಂಗ್ರಹಗೊಂಡಿರುವ ನೀರನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಯತ್ತಾರೆ. ಈ ದಿಸೆಯಲ್ಲಿ ಅನುಕೂಲವಾಗುವಂತೆ ಪಾಲಿಕೆ ವತಿಯಿಂದ ಇಂದು 8 ಸ್ವಚ್ಛತಾ ಆಟೋಗಳು, ಹಾಗೂ 4 ನೀರು ಸಂಗ್ರಹಿಸುವ ಟ್ಯಾಂಕರ್‍ಗಳನ್ನು ನಗರದ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಪಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ನಗರದ ಸಾರ್ವಜನಿಕರಲ್ಲಿ ಮೇಯರ್ ರವಿಕುಮಾರ್ ಮನವಿ ಮಾಡಿದರು.
ಈ ಸಂಧರ್ಭದಲ್ಲಿ ಉಪಮೇಯರ್ ರತ್ನ ಲಕ್ಷ್ಮಣ್, ಮಾಜಿ ಮೇಯರ್ ಆರ್. ಲಿಂಗಪ್ಪ ಹಾಗೂ ಇನಿತ್ತರರು ಉಪಸ್ಥಿತರಿದ್ದರು.

Leave a Comment