ಸ್ವಚ್ಚಮೇವ ಜಯತೆ ಜನರ ಸಹಭಾಗಿತ್ವ ಅತ್ಯವಶ್ಯ-ಬಳಿಗಾರ

ಲಕ್ಷ್ಮೇಶ್ವರ.ಜೂ12: ಪಟ್ಟಣ ಮತ್ತು ನಗರ ಪ್ರದೇಶಗಳಂತೆ ಗ್ರಾಮೀಣ ಪ್ರದೇಸಗಳ ಜನರಿಗೂ ಸ್ವಚ್ಚತೆ, ತ್ಯಾಜ್ಯ ವಿಲೇವಾರಿ ಮಾಡುವ ವಿಧಾನ, ಶೌಚಾಲಯ ಬಳಕೆ, ನೆಲ, ಜಲ, ಪರಿಸರ ಸಂರಕ್ಷಣೆಯ ಬಗ್ಗೆ ತಿಳುವಳಿಕೆ ನೀಡುವ ಉದ್ದೇಶದಿಂದ ಸರ್ಕಾರ “ಸ್ವಚ್ಚ ಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಸಮಪರ್ಕ ಅನುಷ್ಠಾನ, ಉದ್ದೇಶ ಸಾಫಲ್ಯಕ್ಕಾಗಿ ಜನತೆಯ ಸಹಕಾರ, ಸಹಭಾಗಿತ್ವ ಅವಶ್ಯವಾಗಿದ ಎಂದು ಜಿಪಂ ಅಧ್ಯಕ್ಷ ಎಸ್.ಪಿ. ಬಳಿಗಾರ ಹೇಳಿದರು.
ಅವರು ಮಂಗಳವಾರ ತಮ್ಮ ಸ್ವ ಗ್ರಾಮ ಶಿಗ್ಲಿಯಲ್ಲಿ ಗ್ರಾಪಂ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸಹಯೋಗದಲ್ಲಿ “ಸ್ವಚ್ಚ ಮೇವ ಜಯತೇ ಹಾಗೂ ಜಲಾಮೃತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯಡಿ ಗ್ರಾಮದಲ್ಲಿ ಸ್ವಚ್ಚತೆಗಾಗಿ 1 ತಿಂಗಳಕಾಲ ಶೌಚಾಲಯಗಳ ಬಳಕೆ, ಕಸ ವಿಂಗಡಣೆ ಮತ್ತು ವಿಲೇವಾರಿ ಸೇರಿ ಅನೇಕ ಪೂರಕ ಕಾರ್ಯಕ್ರಮಗಳನ್ನು ಮಾಡಲಾಗುವುದು.ಮಳೆ ನೀರಿನ ಸಂರಕ್ಷಣೆಗಾಗಿ ಸಸಿ ನೆಡುವ, ಬದು ನಿರ್ಮಾಣ, ಕೆರೆ ಅಭಿವೃದ್ಧಿ ಕಾರ್ಯ ಮತ್ತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಿಗ್ಲಿ ಗ್ರಾಮ 2 ಬಾರಿ ಗಾಂಧೀಜಿ ಗ್ರಾಮ ಪುರಸ್ಕಾರಕ್ಕೆ ಭಾಜೀನವಾಗಿದ್ದು ಸ್ವಚ್ಚ ಮೇವ ಜಯತೇ ಕಾರ್ಯಕ್ರಮದಡಿ ಇನ್ನೂ ಹೆಚ್ಚಿನ ಕಾರ್ಯಕ್ರಮಗಳ ಅನುಷ್ಠಾನ ಮಾಡಿ ಮಾದರಿ ಗ್ರಾಮ ಮಾಡಲು ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ರಾಧಕ್ಕಾ ಮುದಗಲ್, ಗ್ರಾಪಂ ಸರ್ವ ಸದಸ್ಯರು, ಮುಖಂಡರು, ಯವಕರು ಪಾಲ್ಗೊಂಡಿದ್ದರು. ಪಿಡಿಓ ಬಿ. ಓ. ಅಮ್ಮನವರ ಕಾರ್ಯಕ್ರಮದ ಧ್ಯೇಯೋದ್ದೇಶಗಳು, ಹಮ್ಮಿಕೊಳ್ಳಲಾದ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು.

Leave a Comment