ಸ್ವಚ್ಚತಾ ಕಾರ್ಯಕ್ರಮಕ್ಕೆ ಶಿವಣ್ಣ ಬೆಂಬಲ

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಬಿಗ್‌ಎಫ್‌ಎಂ  ಉದ್ಯಾನನಗರಿಯ ೯ ಸ್ಥಳಗಳನ್ನು ಸ್ವಚ್ಛಗೊಳಿಸಲು ಮುಂದಾಗಿದೆ. ಈ ಬಾರಿಯ ಸ್ವಾತಂತ್ರ್ಯದಿನವನ್ನು ಸ್ವಚ್ಛ ತಂತ್ರ ದಿನವನ್ನಾಗಿ ಆಚರಿಸಲು ೯೨.೭ ಬಿಗ್‌ಎಫ್ ಎಂ ನಿರ್ಧರಿಸಿದ್ದು ಇದಕ್ಕಾಗಿ ಎಂಜೆ ಶೃತಿ ನೇತೃತ್ವದಲ್ಲಿ ಬೆಂಗಳೂರಿನ ೯ ನಗರಗಳಲ್ಲಿ ೭೨ ಗಂಟೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರಿನಲ್ಲಿ ೭೨ ಗಂಟೆಗಳ ಕಾಲ ೯ ಸ್ಥಳಗಳನ್ನು ಆ೧೩ರಿಂದ ೧೫ರವರೆಗೆ ಸ್ವಚ್ಛಗೊಳಿಸಲಾಗುವುದು. ಬಿಗ್‌ಎಫ್‌ಎಂ ಎಂಜೆ ಶೃತಿ, ಶೋತೃಗಳು, ಕಾರ್ಪೋರೇಟರ್, ಎಂಎಲ್‌ಎ ಮತ್ತು ಜನಸಾಮಾನ್ಯರು ಇದರೊಂದಿಗೆ ಕೈಜೋಡಿಸಲಿದ್ದಾರೆ. ಈಗಾಗಲೇ ಆಯ್ದ ೯ ಸ್ಥಳಗಳಾದ ಶಿವಾಜಿ ನಗರ, ಮಹಾದೇವ ಪುರ,ಬಿಟಿಎಂ ಲೇಔಟ್,ಚಾಮರಾಜಪೇಟೆ,ಸುಂಕದಕಟ್ಟೆ, ವಿವಿಪುರಂ, ಮಲ್ಲೇಶ್ವರಂ, ಹೆಬ್ಬಾಳ, ಯಶವಂತಪುರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಗುವುದು.

shivanna

ಬಿಗ್‌ಎಫ್‌ಎಂನ ಈ ಮುಂದಾಳತ್ವಕ್ಕೆ ಶಾಸಕರಾದ ಸಿ.ಎನ್.ಅಶ್ವತ್ ನಾರಾಯಣ್, ಉದಯ್ ಗರುಡಾಚಾರ್, ರಾಮಲಿಂಗ ರೆಡ್ಡಿ, ಮುನಿರತ್ನ, ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್, ನಟ ದಿಗಂತ್ ಮೊದಲಾದವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನನ್ನ ಕಡೆಯಿಂದ ಸ್ವಚ್ಛ ತಂತ್ರದ ಈ ಹೊಸ ಪ್ರಯತ್ನಕ್ಕೆ ಶೇ.೧೦೦ರಷ್ಟು ಬೆಂಬಲವಿದೆ. ನಾವು ಸಮಾಜವನ್ನು ಸ್ವಚ್ಛಗೊಳಿಸುವುದು ಮಾತ್ರವಲ್ಲ, ಸುತ್ತಲಿನ ವಾತಾವರಣವನ್ನು ಮಾಲಿನ್ಯಗೊಳಿಸದೆ ಮನಸ್ಸನ್ನು ಬದಲಿಸಿಕೊಳ್ಳಬೇಕು. ರೆಡ್ ಎಫ್ ಎಂ ನ ಈ ಜವಾಬ್ದಾರಿಯುತ ನಡೆಯನ್ನು ಅಭಿನಂದಿಸಬೇಕು ಎಂದರು.

ಸ್ವಚ್ಛತಂತ್ರಕ್ಕೆ ಬೆಂಬಲ ಸೂಚಿಸಿದ ನಟ ದಿಗಂತ್, ಇದೊಂದು ಉತ್ತಮ ಹೆಜ್ಜೆ. ಸ್ವತಂತ್ರ ಬಂದು ೭೨ ವರ್ಷಗಳಾದರೂ ದೇಶ ಸ್ವಚ್ಛಗೊಂಡಿಲ್ಲ. ಈ ಮುಂದಾಳತ್ವದಿಂದಾಗಿ ದೇಶ ಸ್ವಚ್ಛಗೊಳ್ಳಲಿ. ಬುದ್ಧಿ ಬಂದ ಬಳಿಕ ನಾನು ಚಾಕಲೇಟ್ ಕಸವನ್ನೂ,ಪ್ಲಾಸ್ಟಿಕನ್ನು ಎಸೆದಿಲ್ಲ. ನೀವೂ ನನ್ನೊಂದಿಗೆ ಕೈಜೋಡಿಸಿ. ಈ ಸ್ವಚ್ಛತಂತ್ರದಲ್ಲಿ ಭಾಗಿಯಾಗಿ ಎಂದರು.

ಸ್ವಚ್ಛ ಭಾರತ ಅಭಿಯಾನ ಮಹಾತ್ಮ ಗಾಂಧಿಯವರ ಕಾಲದಲ್ಲೇ ಆರಂಭಗೊಂಡಿದ್ದರೂ ಅದು ಹೆಚ್ಚು ಪ್ರಚಲಿತಕ್ಕೆ ಬಂದಿದ್ದು ೨೦೧೫-೧೬ರ ಸಾಲಿನಲ್ಲಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜಘಾಟಿನ ರಸ್ತೆಯೊಂದನ್ನು ಸ್ವತಃ ಗುಡಿಸುವ ಮೂಲಕ ಸ್ವಚ್ಛ ಭಾರತ ಅಭಿಯಾನ ನಡೆಸಲು ಕರೆ ನೀಡಿದರು.

ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಕರೆ ನೀಡಿರುವ ಮೋದಿಯವರೊಂದಿಗೆ ಅಂಬಾನಿ, ಸಚಿನ್ ತೆಂಡೂಲ್ಕರ್ ನಂತಹ ಪ್ರಭಾವಿ ವ್ಯಕ್ತಿಗಳೂ ಕೈಜೋಡಿಸಿ ಅಭಿಯಾನ ಮತ್ತಷ್ಟು ವ್ಯಾಪಕವಾಗಿ ಹರಡಲು ಕಾರಣರಾದರು. ಇಂದು ಸರ್ಕಾರಹಾಗೂ ಸರ್ಕಾರೇತರ ಸಂಸ್ಥೆಗಳ ಬೆಂಬಲ, ಸಾರ್ವಜನಿಕರ ಸಹಭಾಗಿತ್ವ, ಜಾಲತಾಣ, ಮಾಧ್ಯಮಗಳ ಮೂಲಕ ಸ್ವಚ್ಛತೆಯ ಪ್ರಚಾರ ನಡೆಯುತ್ತಿದ್ದು ಆ ಕುರಿತಾದ ಅರಿವು ಮೂಡುತ್ತಿದೆ.

Leave a Comment