ಸ್ಯಾಂಡಲ್‌ವುಡ್‌ನ ತ್ರಿಕೋನ ಪ್ರೇಮ ಕಥೆಗೆ ತಿರುವು ಕಾರುಣ್ಯ ರಾಮ್- ಸಚಿನ್ ಹಾಗೂ ಅನಿಕಾ

ಬೆಂಗಳೂರು, ಜ ೯- ಕಳೆದ ತಿಂಗಳು ಕಿರುತೆರೆ ನಟಿ ಅನಿಕಾ ಮತ್ತು ಉದ್ಯಮಿ ಸಚಿನ್, ನಟಿ ಕಾರುಣ್ಯ ರಾಮ್ ನಡುವಿನ ತ್ರಿಕೋನ ಪ್ರೇಮಕಥೆಗೆ ಹೊಸ ತಿರುವು ಸಿಕ್ಕಿದೆ.

ಆದರೆ ಇದೀಗ ಅದಕ್ಕೂ ಮೊದಲೇ ಸಚಿನ್ ಮತ್ತು ಕಾರುಣ್ಯಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಅದು ಮುರಿದುಬಿದ್ದಿದೆ ಎನ್ನಲಾಗಿದೆ. ಅಲ್ಲದೇ ಸಚಿನ್ ಮತ್ತು ಕಾರುಣ್ಯಾಗೆ ಈ ಹಿಂದೆ ಮದುವೆಯಾಗಿದೆ ಎಂದು ಸುದ್ದಿಯಾಗುತ್ತಿದೆ. ಜೊತೆಗೆ ಈ ಕುರಿತಾದ ಸಾಕ್ಷಿ ಕಾರುಣ್ಯ ಬಳಿ ಇದ್ದು, ಅನಿಕಾ ಮನೆಯವರಿಗೆ ಸಾಕ್ಷಿ ಸಮೇತ ತೋರಿಸಿದ್ದಾರೆ. ಹೀಗಾಗಿ ಅನಿಕಾ ಮತ್ತು ಸಚಿನ್ ಮದುವೆ ಮುರಿದಿದೆ ಎಂದು ಸುದ್ದಿಯಾಗುತ್ತಿದೆ.

ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅನಿಕಾ ಮತ್ತು ಸಚಿನ್ ನಿಶ್ಚಿತಾರ್ಥವಾಗಿ ವಿಡಿಯೋವೊಂದು ಬಿಡುಗಡೆಯಾಗಿತ್ತು.  ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ನಟಿ ಕಾರುಣ್ಯ, ಸಚಿನ್ ಹಾಗೂ ಅವರ ತಾಯಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಈಗ ಎಂಗೇಜ್ಮೆಂಟ್ ಆದ ಮೇಲೆ ನನ್ನ ಜೊತೆ ಮಾತನಾಡದಂತೆ ಕಾರುಣ್ಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಕುರಿತು ಕಾರುಣ್ಯ ಪ್ರತಿಕ್ರಿಯಿಸಿ, ನನಗೂ ಈ ವಿಷಯಕ್ಕೂ ಸಂಬಂಧವೇ ಇಲ್ಲ. ನಾನು, ಸಚಿನ್ ಒಳ್ಳೆಯ ಸ್ನೇಹಿತರಾಗಿದ್ದು, ಇಲ್ಲಿಗೆ ವಿಷಯ ಬಿಟ್ಟುಬಿಡೋದಾಗಿ ಹೇಳಿದ್ದರು. ಯಾವುದೋ ಒಂದು ರೆಸ್ಟೊರೆಂಟ್ ಗೆ ಹೋದಾಗ ಅವನು ಪರಿಚಯವಾಗಿದ್ದ. ಅವನೊಂದಿಗೆ ಒಂದೇ ಒಂದು ಸಾರಿ ಮಾತನಾಡಿದ್ದೇನೆ. ಇಷ್ಟಕ್ಕೂ ಅವನು ವಯಸ್ಸಲ್ಲಿ ನನಗಿಂತ ದೊಡ್ಡವನು. ನನಗೆ ಈ ಅನಿಕಾ ಯಾರೆಂಬುದೇ ಗೊತ್ತಿಲ್ಲ. ಆಕೆ ಕಿರುತೆರೆಯ ನಟಿ ಅನ್ನೋದರ ಬಗ್ಗೆಯೂ ಮಾಹಿತಿ ಇಲ್ಲ. ನಾನು ಯಾರಿಗೂ ಫೋನ್ ಮಾಡಿಲ್ಲ, ಬೆದರಿಕೆಯೂ ಹಾಕಿಲ್ಲ. ನಾನೇನಾದ್ರೂ ಬೆದರಿಕೆ ಹಾಕಿದ್ದರೆ ಅವರ ಕುಟುಂಬದವರು ದೂರು ನೀಡಲಿ ಎಂದಿದ್ದರು.

Leave a Comment