ಸ್ಮೃತಿ ಇರಾನಿ ಇನ್ ಸ್ಟಾಗ್ರಾಂ ಪೋಸ್ಟಿಗೆ ಭಾರೀ ಪ್ರತಿಕ್ರಿಯೆ

ನವದೆಹಲಿ, ಫೆ 12- ಭಾನುವಾರ ಆರಾಮವಾಗಿ ರಜೆ ಕಳೆದು ಸೋಮವಾರ ಶಾಲೆ ಕಡೆಗೆ, ಕಚೇರಿ ಕಡೆಗೆ ಹೆಜ್ಜೆ ಹಾಕುವುದೆಂದರೆ ಎಲ್ಲರಿಗೂ ತಲೆನೋವೇ. ಈ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಮಂಡೇಬ್ಲ್ಯೂಸ್ ಎಂಬ ಹೆಸರಲ್ಲಿ, ಒಂದಲ್ಲ, ಎರಡಲ್ಲ ಬರೊಬ್ಬರಿ ಮೂರು ಹಾಸ್ಯಮಯ ಪೋಸ್ಟ್ ಹಾಕಿದ್ದಾರೆ.

ನೀವು ಯಾವಾಗ ಅತಿಯಾಗಿ ಸಂತೋಷ ಪಡುತ್ತಿರುತ್ತೀರೋ ಆಗ ಸೋಮವಾರ ಬಂದಿರುತ್ತದೆ ಎಂದು ನಾಲ್ಕು ಅಸ್ಥಿಪಂಜರಗಳು ಕುಣಿಯುತ್ತಿರುವ ಆನಿಮೇಷನ್ ಹಾಕಿದ್ದಾರೆ. ಅದಕ್ಕೆ ‘ಮಂಡೇ ಕೀ ಜೈ ಹೋ ಡ್ಯಾನ್ಸ್’ ಎಂಬ ಒಕ್ಕಣೆ.

ಹಾಗೆಯೇ, ಸಿಕ್ಕಸಿಕ್ಕವರಿಂದ ಹೊಡೆಸಿಕೊಳ್ಳುವ ವಿಡಿಯೋ ಕ್ಲಿಪ್ಪಿಂಗ್ ಒಂದನ್ನು ಅಪ್ ಲೋಡ್ ಮಾಡಿ ಮಂಡೇ ವರ್ಸಸ್ ಪೀಪಲ್ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಮೂರನೇ ಪೋಸ್ಟ್ ನಲ್ಲಿ ಸ್ವತಃ ತಮ್ಮದೇ ಚಿತ್ರ ಹಾಕಿದ್ದು, ನೀವು ಸೋಮವಾರ ಮುಗ್ಗರಿಸಿದಾಗ ಎಂದು `ಮಂಡೇ’ಬಿಸಿಯ ಬಗ್ಗೆ ಬರೆದಿದ್ದಾರೆ.

ಈ ಮೂರೂ ಪೋಸ್ಟ್ ಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ನೀವು ವಾಸ್ತವಕ್ಕೆ ಹತ್ತಿರವಾದುದಕ್ಕೇ ಕನ್ನಡಿ ಹಿಡಿದಿದ್ದೀರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment