ಸ್ಮಾರ್ಟ್ ಸಿಟಿ ಅಭಿವೃದ್ದಿಗೆ 800 ಕೋಟಿ ಬಿಡುಗಡೆ

ದಾವಣಗೆರೆ, ಆ. 13; ದಾವಣಗೆರೆ ಸ್ಮಾರ್ಟ್ ಸಿಟಿಯೋಜನೆಯಡಿ ಅನುಷ್ಟಾನಗೊಳ್ಳುತ್ತಿರುವ ನಗರದ ದೊಡ್ಡಮಳೆನೀರು, ಚರಂಡಿ ಅಭಿವೃದ್ದಿ ಯೋಜನೆಯ 18.78 ಕೋಟಿ ರೂಗಳ ಕಾಮಗಾರಿಗೆ ಇಂದು ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಸ್.ರವೀಂದ್ರನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಸಂಸದ ಜಿ.ಎಂ ಸಿದ್ದೇಶ್ವರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 4 ದೊಡ್ಡ ಮಳೆ ನೀರು ಚರಂಡಿಗಳಿವೆ. ಈ ಕೆಲವು ಭಾಗಗಳಲ್ಲಿ ಚರಂಡಿಯನ್ನು ನಿರ್ಮಿಸಲಾಗಿದೆ. ಬಹಳಷ್ಟು ಕಡೆ ಚರಂಡಿಗಳು ನಿರ್ಮಾಣವಾಗಿಲ್ಲ, ಅತೀಯಾದ ನಾಗರೀಕರಣವಾಗಿರುವುದರಿಂದ ಎಲ್ಲಾ ಭಾಗಗಳಲ್ಲೂ ವಸತಿ ಗೃಹಗಳಿವೆ. ಕೆಲ ವಸತಿಗೃಹಗಳಲ್ಲಿ ಒತ್ತುವರಿ ಮಾಡಿ ಕಟ್ಟಲಾಗಿದೆ. ಆದ್ದರಿಂದ ಮಳೆ ಬಂದಾಗ ಕೆಲವು ಮನೆಗಳಲ್ಲಿ ನೀರು ನುಗ್ಗುವುದು, ಮಣ್ಣು ಕೊರೆದು ಗುಂಡಿಗಳಾಗುವುದು. ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುವ ಸಂಭವಿರುತ್ತದೆ. ನಾಲ್ಕು ಚಂರಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗಲು ವೈಜ್ಞಾನಿಕವಾಗಿ ಮಳೆ ನೀರು ಚರಂಡಿಗಳನ್ನು ನಿರ್ಮಿಸಿ ಮಳೆ ನೀರಿನಿಂದಾಗುವ ಹಾನಿಯನ್ನು ಕಡಿಮೆ ಮಾಡಲಾಗುವುದು ಎಂದರು.
ವಿಮಾನಮಟ್ಟಿ, ಕೆಇಬಿ ವಸತಿ ನಿಲಯದಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದವರೆಗೆ ಚರಂಡಿ ನಿರ್ಮಾಣ ಮಾಡಲಾಗುವುದು. ಮಳೆ ನೀರು ವಿಮಾನಮಟ್ಟಿ, ಕೆಇಬಿ ವಸತಿ ನಿಲಯ, ಚಿಕ್ಕಮಣ್ಣಿ ಸರ್ಕಲ್, ಸರಸ್ವತಿ ನಗರ, ದುರ್ಗಾಂಬಿಕ ಶಾಲೆ, ಭಗೀರಥ ಸರ್ಕಲ್ ಮೂಲಕ ಕೆಎಸ್‍ಆರ್ ಟಿಸಿ ಹತ್ತಿರವಿರುವ ದೊಡ್ಡಚರಂಡಿಗೆ ಸೇರುತ್ತದೆ. ಚರಂಡಿಯ ಒಟ್ಟು ಉದ್ದ 3.2 ಕಿಲೋ ಮೀಟರ್ ಇದ್ದು ಹಗಲು 1 ಮೀಟರ್ ನಿಂದ ಪ್ರಾರಂಭವಾಗಿ ಆಯಾ ಸ್ಥಳಗಳಿಗೆ ತಕ್ಕ ಹಾಗೆ ಅಗಲವಾಗಿ ಕೊನೆಯಲ್ಲಿ 3.7 ಮೀಟರ್ ಆಗುತ್ತದೆ. 3.2 ಕಿಲೋ ಮೀಟರ್ ಉದ್ದಕ್ಕೆ ಆರ್ ಸಿಸಿ ಡ್ರೈನೇಜ್ ನಿರ್ಮಾಣವಾಗಿದೆ. 3.2 ಕಿಲೋ ಮೀಟರ್ ಉದ್ದಕ್ಕೆ ಆರ್ ಸಿಸಿ ಡ್ರೈನೇಜ್ ಕವಲ್ ಸ್ಲ್ಯಾಬ್ ಅಳವಡಿಸಲಾಗುವುದು. ವಿದ್ಯಾನಗರದಿಂದ ಕುಂದುವಾಡಕೆರೆಯವರೆಗೆ ಚರಂಡಿ ನಿರ್ಮಾಣ ಕಾಮಗಾರಿಯನ್ನು ಮಾಡಲಾಗುವುದು. ಮಳೆ ನೀರು ಚರಂಡಿಯೂ ವಿದ್ಯಾನಗರದ ಮಾಗನೂರು ಬಸಪ್ಪ ಶಾಲೆ, ವಿವೇಕಾನಂದ ಬಡಾವಣೆ, ಪುಷ್ಪ ಮಹಾಲಿಂಗಪ್ಪ ಶಾಲೆ, ಬಾಪೂಜಿ ಪಾಲಿಟೆಕ್ನಿಕ್, ಬಿಂದಾಸ್ ಬಾರ್ ಮೂಲಕ ಕುಂದುವಾಡ ಕೆರೆ ಪಕ್ಕದ ಚರಂಡಿಗೆ ಸೇರುತ್ತದೆ. ಹೆಚ್ ಕೆ ಆರ್ ಸರ್ಕಲ್ ನಿಂದ ಕೆಟಿಜೆ ನಗರ ಪೊಲೀಸ್ ಠಾಣೆಯವರೆಗೆ ಚರಂಡಿ ನಿರ್ಮಾಣ, ಮಳೆ ನೀರು ಚರಂಡಿಯೂ ಹೆಚ್ ಕೆ ಆರ್ ಸರ್ಕಲ್ ಮಾರ್ಗವಾಗಿ ಕೆಟಿಜೆ ನಗರ ಪೊಲೀಸ್ ಠಾಣೆ ಹತ್ತಿರವಿರುವ ದೊಡ್ಡ ಚರಂಡಿಗೆ ಸೇರುತ್ತದೆ. ಜಂಕ್ಷನ್ ಅಭಿವೃದ್ದಿ ಕಾಮಗಾರಿ 2ನೇ ಹಂತವು 54 ಲಕ್ಷ ಗುತ್ತಿಗೆ ಕಾಮಗಾರಿಗೆ ಪ್ರಾರಂಭವಾಗಿದೆ. ನಗರದ ಅತೀ ಮುಖ್ಯರಸ್ತೆಯಾಗಿದ್ದು, ದಾವಣಗೆರೆ, ಚನ್ನಗಿರಿ ರಾಜ್ಯಹೆದ್ದಾರಿವಾಗಿರುತ್ತದೆ. (ಈ ರಸ್ತೆಯೂನ್ಯಾಷನಲ್ ಹೈವೇ ಅಪ್ ಗ್ರೇಡ್ ಆಗಿದ್ದು ಕೇಂದ್ರ ಸರ್ಕಾರದ ಗೆಜೆಟ್ ನಲ್ಲಿ ಬರುವುದು ಬಾಕಿ ಇದೆ) ಈ ರಸ್ತೆಯಲ್ಲಿ ಜಂಕ್ಷನ್ ನ ಒಂದು ಕಡೆ ನಿಟುವಳ್ಳಿ ರಸ್ತೆಯಿದ್ದು, ವಾಹನ ಸಂಚಾರ ಅತೀಯಾಗಿದ್ದು, ವಾಹನಗಳ ಅಪಘಾತವಾಗುವ ಸಂಭವಿದೆ. ಆದ್ದರಿಂದ ಈ ಜಂಕ್ಷನ್ ಅಗಲ ಮಾಡಿದ್ದಲ್ಲಿ ಅಪಘಾತವಾಗುವುದನ್ನು ತಪ್ಪಿಸುವಂತಾಗುತ್ತದೆ ಎಂದರು.
ಸ್ಮಾರ್ಟ್ ಸಿಟಿ 1100 ಕೋಟಿ ಮಂಜೂರಾಗಿದೆ. ಅದರಲ್ಲಿ 400 ಕೋಟಿ ಬಿಡುಗಡೆಯಾಗಿದೆ. ಕಾಮಗಾರಿಯೂ 80 ರಷ್ಟು ನಡೆದಿದೆ ಆದರೆ ಅಧಿಕಾರಿಗಳ ವೈಪಲ್ಯದಿಂದ ಕಾಮಗಾರಿ ಮಂದಗತಿಯಲ್ಲಿಸಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಉತ್ತಮ ಮಳೆಯಾಗಿದೆ. ಭದ್ರಡ್ಯಾಂ ತುಂಬುತ್ತದೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದ ರೈತರಿಗೆ 10 ದಿನಗಳಲ್ಲಿ ಭದ್ರ ಡ್ಯಾಂ ತುಂಬಿರುವುದು ಸಂತಸದ ವಿಷಯ. ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ಥರಿಗೆ ಎಲ್ಲರು ಸೇರಿ ನೆರವಾಗಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಮುಕುಂದಪ್ಪ, ಕರಿಯಣ್ಣ, ಶಿವರಾಜ್ ಪಾಟೀಲ್, ಶಿವಕುಮಾರ್ ಸೇರಿದಂತೆ ಮತ್ತಿತರರಿದ್ದರು.

Leave a Comment