‘ಸ್ಮಾರ್ಟ್ ಸಿಟಿ’ಗಳಲ್ಲಿ ಸೈಕಲ್ ಸವಾರಿಗೆ ಸವಲತ್ತುಗಳು ಬೇಕು

ದಾವಣಗೆರೆ.ಸೆ.22 ಕಾರು, ಬೈಕ್, ಬಳಕೆದಾರರು ವಾರದಲ್ಲೊಂದು ದಿನ ಸೈಕಲ್ ಬಳಕೆ ಮಾಡಿದರೂ ದೇಶದಲ್ಲಿ ವಾರ್ಷಿಕ 16 ಕೋಟಿ ಬ್ಯಾರಲ್‍ಗಳಷ್ಟು ಪೆಟ್ರೋಲಿಯಂ ಇಂಧನ ಉಳಿಸಬಹುದಾಗಿದ್ದು ಇದರಿಂದ ನಮ್ಮ ದೇಹಾರೋಗ್ಯ, ದೇಶದ ಆರ್ಥಿಕ, ಆರೋಗ್ಯ ಪ್ರಪಂಚದ ಪರಿಸರ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಕರೆಕೊಟ್ಟರು.
ಅವರಿಂದು ನಗರದ ಸ್ಪೂರ್ತಿ ಎಜುಕೇಷನಲ್ ಟ್ರಸ್ಟ್, ದವನ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಮೇನೇಜ್ಮೆಂಟ್ ಸ್ಟಡೀಸ್ ವತಿಯಿಂದ ” ಸೈಕಲ್ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ” ಮೂಡಿಸುವ ವಿದ್ಯಾರ್ಥಿಗಳ ಸೈಕಲ್ ಜಾಥಾ “ಸೈಕ್ಲಥಾನ್-2019″ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ನಗರದ ಜಯದೇವ ವೃತ್ತದಲ್ಲಿ ಮಾತನಾಡುತ್ತಾ ನಮ್ಮ ದೇಶದಲ್ಲಿ ಪೆಟ್ರೋಲಿಯಂ ವಾಹನಗಳು ಸುಮಾರು 16 ಕೋಟಿಯಷ್ಟಿದ್ದು ಇದರಲ್ಲಿ ಶೇಕಡಾ 72 ರಷ್ಟು ದ್ವಿಚಕ್ರ ವಾಹನಗಳೇ ಇವೆ, ವಾರ್ಷಿಕ ಪೆಟ್ರೋಲಿಯಂ ಬಳಕೆಯಲ್ಲಿ ಶೇಕಡಾ 62 ರಷ್ಟು ದ್ವಿಚಕ್ರ ವಾಹನಗಳೇ ಬಳಕೆಯಾಗುತ್ತಿದ್ದು ವಾರಕ್ಕೊಂದು ದಿನ ಸೈಕಲ್ ಬಳಸಿದರೂ ಸುಮಾರು 16 ಕೋಟಿ ಬ್ಯಾರಲ್‍ನಷ್ಟು ಪೆಟ್ರೋಲಿಯಂ ಉಳಿಸಬಹುದು. ತನ್ಮೂಲಕ ದೇಶದ ವಿದೇಶಿ ವಿನಿಮಯ ಹೊರೆಯೂ ಕಡಿಮೆಯಾಗುತ್ತಿದೆ, ಪರಿಸರವೂ ಉಳಿಯುತ್ತದೆ, ಜಾಗತಿಕ ತಾಪಮಾನ ಏರಿಕೆಯೂ ಕಡಿಮೆಯಾಗುತ್ತದೆ ಹಾಗೂ ಬರ ಅಥವಾ ಪ್ರವಾಹ ಎರಡೂ ಸಮಸ್ಯೆಗಳೂ ನಿಯತ್ರಣಕ್ಕೆ ಬರಬಲ್ಲವು ಎಂದರಲ್ಲದೇ ಸೈಕಲ್ ಬಳಸುವುದು ಸಂಕೋಚ ಪಡಬೇಕಾದ ವಿಷಯವಲ್ಲ, ಪೆಟ್ರೋಲ್ ಮತ್ತು ಪರಿಸರ ಉಳಿಸುತ್ತಿದ್ದೇವೆಂದು ಹೆಮ್ಮೆ ಪಡುವ ವಿಷಯ,” ಎದೆಯುಬ್ಬಿಸಿಕೊಂಡು ಗೌರವ ಮತ್ತು ಹೆಮ್ಮೆಯಿಂದ ರಸ್ತೆಯಲ್ಲಿ ಸೈಕಲ್ ತುಳಿಯಿರಿ” ಎಂದರು. ಇ ವೇಳೆ ದವನ್ ಕಾಲೇಜಿನ ಗೌರವ ಕಾರ್ಯದರ್ಶಿ ವೀರೇಶ್ ಪಟೇಲ್, ನೂತನ ಪಿ.ಯು. ಕಾಲೇಜಿನ ಪ್ರಾಚಾರ್ಯ ಪ್ರೊ.ಎಸ್.ಹಾಲಪ್ಪ, ಹರ್ಷರಾಜ್ ಗುಜ್ಜರ್, ಅಶ್ವಿನಿ ಹೆಚ್.ಸಿ. ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment