ಸ್ಮಶಾನದಲ್ಲಿ ಮೌಢ್ಯವಿರೋಧಿ ಸಂಕಲ್ಪದಿನ 6 ರಂದು

 

ಕಲಬುರಗಿ ಡಿ2: ಡಾ.ಬಿ.ಆರ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಿಸೆಂಬರ್ 6 ರಂದು ವಿದ್ಯಾರ್ಥಿ ಬಂಧುತ್ವ ವೇದಿಕೆಯು ಇಲ್ಲಿನ ಸಿದ್ಧಾರ್ಥ ನಗರ ಸ್ಮಶಾನಭೂಮಿಯಲ್ಲಿ  ಮೌಢ್ಯವಿರೋಧಿ ಸಂಕಲ್ಪದಿನ ಆಯೋಜಿಸಿದೆ. ಅಂದು ಬೆಳಿಗ್ಗೆ 11 ಗಂಟೆಗೆ  ಪಾಲಿಕೆ ಆಯುಕ್ತ ರಾಹುಲ ತುಕಾರಾಮ ಪಾಂಡ್ವೆ ಸಂಕಲ್ಪದಿನ ಉದ್ಘಾಟಿಸಲಿದ್ದು,24 ಗಂಟೆವರೆಗೆ ವಿಚಾರಗೋಷ್ಠಿ,ಕ್ರಾಂತಿಗೀತೆ, ಸಂಗೀತ,ಭಜನೆ ಮೊದಲಾದ ಕಾರ್ಯಕ್ರಮ ನಡೆಯಲಿವೆ ಎಂದು ವೇದಿಕೆಯ ವಿಭಾಗೀಯ ಸಂಚಾಲಕ ದಿನೇಶ ದೊಡ್ಡಮನಿ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಂತೆ ಸಂಘಾನಂದ,ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು, ಅಕ್ಕ ಅನ್ನಪೂರ್ಣ ತಾಯಿ.ಕೋರಣೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು. ಹಿರಿಯಮುಖಂಡರಾದ ಡಾ ವಿಠ್ಠಲ ದೊಡ್ಡಮನಿ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಜಿಪಂ ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ,ಸಮಾಜಕಲ್ಯಾಣ ಇಲಾಖೆ ವ್ಯವಸ್ಥಾಪಕ ಜಗದೀಶ ಚೌರ್,ಬಸವಸೇವಾ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಯಂಕಂಚಿ,ಮುಖಂಡರಾದ ರಮೇಶ ಪಟ್ಟೇದಾರ,ಶ್ಯಾಮ ನಾಟೀಕರ್,ಸಾಂಸ್ಕøತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ.ಅಶೋಕನಗರ ಠಾಣೆ ಸಿಪಿಐ ಪಂಡಿತ ಸಗರ ಮುಖ್ಯ ಅತಿಥಿಗಳಾಗಿ ಆಗಮಿಸುವರು.ಸಿದ್ದಾರ್ಥ ಚಿಮ್ಮಾಇದ್ಲಾಯಿ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಹನುಮಂತ ಇಟಗಿ,ಸಂತೋಷ ಮೇಲ್ಮನಿ,ರಾಣು ಮುದ್ದನಕರ್,ನಾಗೇಂದ್ರ ಜವಳಿ ಉಪಸ್ಥಿತರಿದ್ದರು..

Leave a Comment