`ಸ್ಫೂರ್ತಿಧಾಮ’ದಲ್ಲಿ ಅನಾಥ ಹೆಣ್ಣುಮಕ್ಕಳ ಅತ್ಯಾಚಾರ ಕೇಶವ ಕೋಟೇಶ್ವರ ಅರೆಸ್ಟ್

ಕುಂದಾಪುರ, ಮಾ.೧೫- ಕೆದೂರಿನಲ್ಲಿರುವ `ಸ್ಫೂರ್ತಿ’ಧಾಮದ ಸ್ವಯಂಘೋಷಿತ ಕಾರ್ಯದರ್ಶಿ ಕೇಶವ ಕೋಟೇಶ್ವರ ಹಾಗೂ ಇನ್ನೊÃರ್ವ ಆರೋಪಿ ನೂಜಿ ನಿವಾಸಿ ಹನುಮಂತ ಎಂಬಾತನನ್ನು ಅನಾಥ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಪೆÇಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಳೆದ ಬುಧವಾರ ರಾತ್ರಿಯೇ ಪ್ರಮುಖ ಆರೋಪಿ ಕೇಶವ ಕೋಟೇಶ್ವರನನ್ನು ಕೋಟ ಪೆÇಲೀಸರು ವಶಕ್ಕೆ ಪಡೆದಿದ್ದು ಬಳಿಕ ಆತನ ಹೇಳಿಕೆಯಂತೆ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಹನುಮಂತನನ್ನು ಬಂಧಿಸಿದ್ದಾರೆ. ಸ್ಫೂರ್ತಿಧಾಮದಿಂದ ಯಾರಿಗೂ ಹೇಳದೇ ತನ್ನನ್ನು ದತ್ತು ಪಡೆದಿದ್ದ ಪೆÇÃಷಕರನ್ನು ಅರಸಿ ಹೊರಟ ೧೦ ವರ್ಷದ ಅಪ್ರಾಪ್ತ ಬಾಲಕಿ ಕೋಟ ಪೆÇಲೀಸರಿಗೆ ಸಿಕ್ಕಿದ್ದು, ಅಲ್ಲಿ ಸ್ಥಳೀಯರ ಸಮ್ಮುಖದಲ್ಲಿ ಆಕೆಯನ್ನು ವಿಚಾರಿಸಿದಾಗ ಕೇಶವನ ಲೈಂಗಿಕ ಹಗರಣ ಬೆಳಕಿಗೆ ಬಂದಿತ್ತು. ಅಲ್ಲದೇ ರಾತ್ರಿ ವೇಳೆ ಹೊರಗಿನಿಂದ ಕಾಮತೀಟೆ ತೀರಿಸಿಕೊಳ್ಳಲು ಬರುವ ಯುವಕರು ಲೈಂಗಿಕ ದೌರ್ಜನ್ಯ ಮಾಡುತ್ತಿರುವುದಾಗಿಯೂ, ಅಲ್ಲಿ ತನಗೆ ಇರಲು ಭಯವಾಗುತ್ತಿರುವುದಾಗಿ ಆಕೆ ಬಾಯ್ಬಿಟ್ಟಿದ್ದು ಇಬ್ಬರ ಬಂಧನಕ್ಕೆ ಕಾರಣವಾಗಿದೆ. ಪೆÇಲೀಸರ ಅತಿಥಿಯಾಗಿರುವ ಹನುಮಂತ ರಾತ್ರಿ ವೇಳೆ ಸ್ಫೂರ್ತಿಧಾಮದ ಒಳಗೆ ಬಂದು ಮೇಲಿನ ಮಹಡಿಯ ಕಿಟಕಿಗೆ ಹಗ್ಗ ಕಟ್ಟಿ ಅದರ ಸಹಾಯದಿಂದ ಮೇಲೆ ಬಂದು ತಾನು ತಂದಿದ್ದ ಬಿರಿಯಾನಿಯನ್ನು ಮಕ್ಕಳಿಗೆ ನೀಡಿ ಅವರನ್ನು ಪÅಸಲಾಯಿಸಿ ಅತ್ಯಾಚಾರ ನಡೆಸುತ್ತಿದ್ದ ಎನ್ನುವ ಆಘಾತಕಾರಿ ಅಂಶವನ್ನು ಬಾಲಕಿ ಹೊರಗೆಡಹಿದ್ದಾಳೆ. ಈ ಬಗ್ಗೆ ಸ್ಥಳಕ್ಕೆ ಆಗಮಿಸಿದ ಪೆÇಲೀಸರಿಗೂ ಸ್ಪಷವಾದ ಮಾಹಿತಿಯನ್ನು ಮಹಜರಿನ ವೇಳೆ ತಿಳಿಸಿದ್ದಾಳೆ. ಆದರೆ ಆಕೆ ಮಾತ್ರ ಹನುಮಂತನ ಹೆಸರು ಹೇಳಿದ್ದು ಕೇಶವನ ಹೆಸರು ಹೇಳಿರಲಿಲ್ಲ. ಇನ್ನುಳಿದ ಬಾಲಕಿಯರಲ್ಲಿ ವಿಚಾರಿಸಿದಾಗ ಮತ್ತೆ ಐವರು ಮಕ್ಕಳು ಅತ್ಯಾಚಾರ ನಡೆಸಿರುವುದನ್ನು ಹೇಳಿದ್ದಾರೆ ಎನ್ನಲಾಗಿದೆ. ಅದರಲ್ಲಿ ಒಬ್ಬಾಕೆ ಕೇಶವ ಕೋಟೇಶ್ವರ ಅತ್ಯಾಚಾರ ನಡೆಸಿರುವುದಾಗಿ ಹೇಳಿದ್ದು ಆರೋಪಿ ಕೇಶವನ ವಿರುದ್ಧ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಹಾಗೂ ಇತರ ಅತ್ಯಾಚಾರ ನಡೆಸಿದ ಆರೋಪಿಗಳಿಗೆ ಬೆಂಬಲ ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ನಿರ್ಲಕ್ಷ÷್ಯ ಆರೋಪದಡಿಯಲ್ಲಿ ಪೆÇÃಕ್ಸೊÃ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹತ್ತು ವರ್ಷ ಪ್ರಾಯದ ಬಾಲಕಿ ಮೂಲತಃ ಶಿವಮೊಗ್ಗದವಳು. ಪಾಲಕರಿಲ್ಲದ ಅನಾಥ ಮಗುವಿನ ರಕ್ಷಣೆಯ ಹೊಣೆಯನ್ನು ಸ್ಫೂರ್ತಿಧಾಮಕ್ಕೆ ನೀಡಲಾಗಿತ್ತು. ಅವಳನ್ನು ಜ.೧೪ರಂದು ಕುಪ್ಪೆಪದವು ಕೊಪ್ಪಲು ಎಂಬಲ್ಲಿಯ ಪೆÇÃಷಕರಿಗೆ ದತ್ತು ನಿಯಮದಂತೆ ನೀಡಲಾಗಿತ್ತು. ಆದರೆ ಅಲ್ಲಿ ಆಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಳು ಎನ್ನಲಾಗಿದೆ. ಆಕೆಗೆ ಇದ್ದಕ್ಕಿದ್ದಂತೆ ಒಂದು ದಿನ ರಕ್ತವಾಂತಿಯಾಗಿದ್ದು ಪೆÇÃಷಕರು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆಕೆ ಜಲ್ಲಿಕಲ್ಲನ್ನು ಪÅಡಿ ಮಾಡಿ ತಿಂದಿರುವುದು ಬೆಳಕಿಗೆ ಬಂದಿತ್ತು. ಇದರಿಂದ ಗಾಬರಿಗೊಂಡ ಪೆÇÃಷಕರು ಆಕೆಯನ್ನು ವಾಪಸ್ ಕರೆತಂದು ಬಿಡುವುದಾಗಿ ಮಾರ್ಚ್ ೧೨ರಂದು ಕರೆತಂದಿದ್ದರು. ದತ್ತು ಪ್ರಕ್ರಿಯೆ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಪÇರ್ಣಗೊಂಡಿಲ್ಲದ ಹಿನ್ನೆಲೆಯಲ್ಲಿ ಮಗುವನ್ನು ವಾಪಸ್ ಕರೆಯಿಸಿಕೊಳ್ಳಲು ದತ್ತು ಸಮಿತಿ ಒಪ್ಪಿಗೆ ಸೂಚಿಸಿತ್ತು. ಆದರೆ ಬಾಲಕಿ ಸ್ಫೂರ್ತಿಧಾಮದಲ್ಲಿ ಇರಲೊಪ್ಪದೇ ಅದೇ ದಿನ ಸಂಜೆ ನಾಲ್ಕು ಗಂಟೆ ಸುಮಾರಿಗೆ ಹೇಳದೇ ಹೊರಟಿದ್ದಳು. ಅನಾಥ ಮಕ್ಕಳ ದತ್ತು ನೀಡುವ ಹಕ್ಕನ್ನು ಸ್ಪೂರ್ತಿಧಾಮಕ್ಕೆ ನೀಡಲಾಗಿದ್ದು ಇದನ್ನೆÃ ವ್ಯವಹಾರ ಮಾಡಿಕೊಂಡ ಸ್ಪೂರ್ತಿಯ ಕೇಶವ ಸಾಕಷ್ಟು ಅವ್ಯವಹಾರ ನಡೆಸಿದ್ದಾನೆ ಎಂದು ಸ್ಥಳೀಯರು ದಶಕಗಳಿಂದೀಚೆಗೆ ಆರೋಪಿಸುತ್ತಲೇ ಬಂದಿದ್ದರು. ವೃದ್ಧಾಶ್ರಮದಲ್ಲಿ ದೌರ್ಜನ್ಯ ನಡೆಸಲಾಗುತ್ತಿದೆ ಎನ್ನುವ ಆರೋಪಗಳೂ ಕೇಳಿ ಬಂದಿದ್ದವು. ಕಳೆದ ಹಲವು ವರ್ಷಗಳಿಂದ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಇದಕ್ಕೆ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರನ ಕುಮ್ಮಕ್ಕಿದೆ ಎನ್ನುವ ಆರೋಪಗಳು ಕೇಳಿಬಂದಿದ್ದಲ್ಲದೇ ಸ್ವತಃ ಕೇಶವ ಕೋಟೇಶ್ವರನ ಪತ್ನಿ ಪ್ರಮೀಳಾ ವಾಜ್ ಕೂಡಾ ಈ ಹಿಂದೆ ಬಹಿರಂಗವಾಗಿ ಹೇಳಿದ್ದರೂ ಇಲಾಖೆಗಳು ನಿರ್ಲಕ್ಷ÷್ಯವಹಿಸಿದ್ದವು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೊನಾಲ್ಡ್ ಪÅತ್ರಾಡೋ ಈ ಬಗ್ಗೆ ಪ್ರತಿಕ್ರಿಯಿಸಿ ನಾನಿನ್ನೂ ಯಾವುದೇ ಮಾಹಿತಿ ಪಡೆದುಕೊಂಡಿಲ್ಲ. ಬೆಂಗಳೂರಿನಲ್ಲಿರುವುದರಿಂದ ಫೈಲ್ ನೋಡಲಾಗಿಲ್ಲ. ಪೆÇÃಕ್ಸೊÃ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪೆÇÃಕ್ಸೊÃ ಪ್ರಕರಣ ಸಿಡಬ್ಲೂ÷್ಯಸಿ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಸ್ಫೂರ್ತಿಧಾಮ ಸಂಸ್ಥೆಯ ಕಾರ್ಯದರ್ಶಿ ಕೇಶವ ಕೋಟೇಶ್ವರ ಕ್ರಿಮಿನಲ್ ಎಂದು ಸ್ಥಳೀಯ ಯುವಕ ಮಂಡಲದ ಸದಸ್ಯರು ಆರೋಪಿಸಿದ್ದಾರೆ. ಕೊರಗ ಮಕ್ಕಳ ಹೆಸರಿನಲ್ಲಿ ಆರಂಭಿಸಿದ್ದ ಸಂಸ್ಥೆಯನ್ನು ಕೊರಗ ಮಕ್ಕಳ ಅನುದಾನವನ್ನು ಸ್ವಾರ್ಥಕ್ಕೆ ಬಳಸಿಕೊಂಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ವೃದ್ಧಾಶ್ರಮದಲ್ಲಿರುವ ವೃದ್ಧರಿಗೆ ಅನ್ನಾಹಾರ ನೀಡದೇ ಹಿಂಸಿಸುತ್ತಿದ್ದ ಎನ್ನುವ ಆರೋಪಗಳೂ ಕೇಳಿಬಂದಿತ್ತು. ಸಂಸ್ಥೆಯ ಒಳಗೆ ದಲಿತ ಸಿಬ್ಬಂದಿಗೆ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡಿದ್ದ ಆರೋಪದಡಿಯಲ್ಲಿ ದಲಿತ ದೌರ್ಜನ್ಯ ಪ್ರಕರಣವೂ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಹಲವು ಮಕ್ಕಳಿಗೆ ಹಲ್ಲೆ ನಡೆಸಿದ್ದನ್ನು ಅಲ್ಲಿಂದ ತಪ್ಪಿಸಿಕೊಂಡು ಓಡಿಹೋದ ಮಕ್ಕಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಸಂಸ್ಥೆಯಲ್ಲಿದ್ದ ವಿದ್ಯಾರ್ಥಿನಿಯೊಂದಿಗೆ ಅನೈತಿಕ ಸಂಬಂಧ ಇರುವುದನ್ನು ಸ್ವತಃ ಆತನ ಪತ್ನಿಯೇ ಬಹಿರಂಗಗೊಳಿಸಿದ್ದರೂ ಪೊಲೀಸರು ಮೌನವಹಿಸಿದ್ದು ಅಮಾನುಷ ಕೃತ್ಯಕ್ಕೆ ಸಾಕ್ಷಿಯಾದಂತಾಗಿದೆ.

Leave a Comment