ಸ್ಪೋಟಕ ಸತ್ಯ ಬಿಚ್ಚಿಟ್ಟ ಮಲ್ಲಿಕಾ

ಬಾಲಿವುಡ್ ನಟಿ ಮಲ್ಲಿಕಾ ಶರಾವತ್ 17 ವರ್ಷಗಳ ನಂತ್ರ ತುಷಾರ್ ಕಪೂರ್ ಜೊತೆ ಚಿತ್ರದಲ್ಲಿ ಕಾಣಿಸಿಕೊಳ್ತಿದ್ದಾಳೆ. ಏಕ್ತಾ ಕಪೂರ್ ವೆಬ್ ಸರಣಿಯಲ್ಲಿ ಮಲ್ಲಿಕಾ, ತುಷಾರ್ ಜೊತೆ ನಟಿಸುತ್ತಿದ್ದಾರೆ. ಡಿಜಿಟಲ್ ಡೆಬ್ಯೂ ಮಲ್ಲಿಕಾಗೆ ವಿಶೇಷವಾಗಿರಲಿದೆ. ಈ ಮಧ್ಯೆ ಬಾಂಬ್ ಒಂದನ್ನು ಸಿಡಿಸಿದ್ದಾರೆ. ಇಷ್ಟು ದಿನ ಯಾಕೆ ಸಿನಿಮಾದಿಂದ ದೂರವಿದ್ದೆ ಎಂಬ ಸಂಗತಿಯನ್ನು ಮಲ್ಲಿಕಾ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಮಲ್ಲಿಕಾ, ಸಿನಿಮಾ ನಟರ ಜೊತೆ ಡೇಟಿಂಗ್ ಗೆ ಹೋಗ್ಲಿಲ್ಲ ಎನ್ನುವ ಕಾರಣಕ್ಕೆ ಸಿನಿಮಾದಲ್ಲಿ ಚಾನ್ಸ್ ಸಿಗಲಿಲ್ಲವೆಂದು ಹೇಳಿದ್ದಾರೆ. ಉದ್ಯಮದಲ್ಲಿ ಬಹುತೇಕ ನಟರು, ನಿರ್ಮಾಪಕರು, ನಿರ್ದೇಶಕರು ತಮ್ಮ ತಮ್ಮ ಗರ್ಲ್ ಫ್ರೆಂಡ್ಸ್ ಜೊತೆ ಕೆಲಸ ಮಾಡಲು ಬಯಸುತ್ತಾರೆ. ಹಾಗಾಗಿಯೇ ಅನೇಕ ಚಿತ್ರಗಳಲ್ಲಿ ನಟಿಸುವ ಅವಕಾಶ ನನಗೆ ಸಿಗಲಿಲ್ಲ ಎಂದಿದ್ದಾರೆ.

ಮೀಟೂ ಅಭಿಯಾನದ ಬಗ್ಗೆ ಮಾತನಾಡಿದ ಮಲ್ಲಿಕಾ, ಯಾರೂ ಸೆಕ್ಸ್ ಗೆ ಡಿಮ್ಯಾಂಡ್ ಇಟ್ಟಿಲ್ಲ. ನಂದು ಬೋಲ್ಡ್ ವ್ಯಕ್ತಿತ್ವ. ಹಾಗಾಗಿ ಹೆದರುತ್ತಿದ್ದರು ಎಂದು ಹೇಳಿದ್ದಾರೆ. ಮಿಟೂ ಅಭಿಯಾನ ಬಹಳ ಸಕಾರಾತ್ಮಕ ಹೆಜ್ಜೆ. ಉದ್ಯಮದ ವಾತಾವರಣವನ್ನು ಮತ್ತಷ್ಟು ಸುರಕ್ಷಿತಗೊಳಿಸಿದೆ ಎಂದು ಮಲ್ಲಿಕಾ ಹೇಳಿದ್ದಾರೆ.

Leave a Comment