ಸ್ಪೇಸ್ ಎಕ್ಸ್ ಬಾಹ್ಯಾಕಾಶ ನೌಕೆ ಡ್ರಾಗನ್ ಯಶಸ್ವಿ ಉಡಾವಣೆ

  • ಉತ್ತನೂರು ವೆಂಕಟೇಶ್

ಅಮೆರಿಕಾದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸ್ಪೇಸ್ ಎಕ್ಸ್, ಅಂತರ್ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಗಗನಯಾನಿಗಳನ್ನು ಕಳುಹಿಸಬಹುದಾದ ಡ್ರಾಗನ್ ಹೆಸರಿನ ಬಾಹ್ಯಾಕಾಶ ನೌಕೆಯನ್ನು ನಿನ್ನೆ ಯಶಸ್ವಿಯಾಗಿ ಉಡಾವಣೆ ಮಾಡಿದೆ.

  • ಅಮೆರಿಕಾದ ಸ್ಪೇಸ್ ಎಕ್ಸ್‌ನ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತ ಪಾಲ್ಕನ್ ರಾಕೇಟ್ ನಿನ್ನೆ ಯಶಸ್ವಿಯಾಗಿ ಉಡಾವಣೆಗೊಂಡಿದೆ.

    ಮಾನವ ಗಗನ ಯಾನಿಗಳ ಯಾನದ ಉದ್ದೇಶದಿಂದ ಈ ನೌಕೆಯನ್ನು ನಿರ್ಮಾಣ ಮಾಡಿ ಉಡಾವಣೆ ಮಾಡಲಾಗಿದೆ.

  • ಮಾನವರ ಬಾಹ್ಯಾಕಾಶ ಯಾನಕ್ಕೆ ಪೂರಕ ಪ್ರಯೋಗಾರ್ತ ಉಡಾವಣೆ ಇದಾಗಿದ್ದು, ಈ ನೌಕೆಯಲ್ಲಿ ಮಾನವ ಗಗನಯಾನಿಗಳು ಇರಲಿಲ್ಲ.

  • ಸ್ಪೇಸ್ ಸೂಟ್ ಧರಿಸಿದ್ದ ರೋಬೋ ಅನ್ನು ಕಳುಹಿಸಲಾಗಿದೆ.

  • ಪ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆಗೊಂಡಿರುವ ಈ ನೌಕೆ ಬಾಹ್ಯಾಕಾಶ ನಿಲ್ದಾಣಕ್ಕೆ ಜೋಡಣೆಯಾಗುತ್ತಿದೆ.

  • ಮಾರ್ಚ್ 8ರವರೆಗೂ ಜೋಡಣೆಯಾಗಿರುವ ಈ ನೌಕೆ ನಂತರ ನೌಕೆಯಿಂದ ಕಳಚಿಕೊಂಡು ಭೂಮಿಗೆ ರವಾನೆಯಾಗಲಿದೆ ಎಂದು ನಾಸಾ ಮೂಲಗಳು ತಿಳಿಸಿವೆ.

ನಾಸಾದ ವಾಣಿಜ್ಯ ಗಗನ ಯಾನ ಯೋಜನೆಯ ಅಂಗವಾಗಿ ಸ್ಪೇಸ್ ಎಕ್ಸ್‌ನ ಪಾಲ್ಕನ್ ರಾಕೆಟ್ ಮೂಲಕ ಡ್ರಾಗನ್ ಬಾಹ್ಯಾಕಾಶ ನೌಕೆಯನ್ನು ಪ್ಲಾರಿಡಾದ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಮಾರ್ಚ್ ೨ ಶನಿವಾರದಂದು ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಮುಂದೆ ಗಗನ ಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪರೀಕ್ಷಾರ್ಥ ಉಡಾವಣೆ ಇದಾಗಿದ್ದು ಈ ನೌಕೆಯಲ್ಲಿ ಮಾನವ ಗಗನ ಯಾನಿಗಳು ಇರಲಿಲ್ಲ.

ಬದಲಿಗೆ ಸ್ಪೇಸ್ ಸೂಟ್ ಧರಿಸಿದ್ದ ಮನ್ನೇ ಕ್ವಿನ್ ರೋಬೊವನ್ನು ಕಳುಹಿಸಲಾಗಿದೆ. ಮಾನವ ಗಗನಯಾನ ಉದ್ದೇಶಕ್ಕೆ ಮೊದಲ ಬಾರಿಗೆ ಸ್ಪೇಸ್ ಎಕ್ಸ್ ತಯಾರು ಮಾಡಿದ ಡ್ರಾಗನ್ ನೌಕೆಯನ್ನು ತನ್ನ ವಾಣಿಜ್ಯ ಉದ್ದೇಶದ ಪಾಲ್ಕನ್ ರಾಕೆಟ್ ಮೂಲಕ ಅಂತರ ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾವಣೆ ಮಾಡಲಾಗಿದ್ದು. ಉಡಾವಣೆಗೊಂಡಿರುವ ಈ ಡ್ರಾಗನ್ ನೌಕೆ  ಬಾಹ್ಯಾಕಾಶ ನಿಲ್ದಾಣಕ್ಕೆ  ಜೋಡಣೆಯಾಗಲಿದೆ. ಮಾರ್ಚ್ ೮ ರವರೆಗೆ ಅಲ್ಲೆ ಇದ್ದು ನಂತರದಲ್ಲಿ ನಿಲ್ದಾಣದಿಂದ ಕಳಚಿಕೊಂಡು ಪುನಃ ಭೂಮಿಗೆ ಮರಳುತ್ತದೆ ಎಂದು ಸ್ಪೇಸ್ ಎಕ್ಸ್ ಸಂಸ್ಥೆ ಹೇಳಿದೆ.

ನಾಸಾ ಈ ವರ್ಷಾಂತ್ಯದಲ್ಲಿ ಡ್ರಾಗನ್‌ ನೌಕೆಯ ಮೂಲಕ ಗಗನ ಯಾನಿಗಳನ್ನು ಕಳುಹಿಸಲಿದ್ದು, ಅದಕ್ಕಾಗಿ ಬಾಬ್ ಬೆನ್ಹ್ಕೆನ್ ಮತ್ತು ಡ್ವ್‌ಗ್ ಹಿರ್‍ಲೆ ಅವರನ್ನು ಈಗಾಗಲೇ ಆಯ್ಕೆ ಮಾಡಿದೆ.

ಸ್ಪೇಸ್ ಎಕ್ಸ್‌ನ ಶನಿವಾರದ ಉಡಾವಣೆಯನ್ನು “ಬಾಹ್ಯಾಕಾಶ ಶೋಧನೆಯ ಹೊಸ ಯುಗ ಆರಂಭ” ಎಂದು ನಾಸಾ ಹೇಳಿದೆ. ಮಂಗಳ ಗ್ರಹಕ್ಕೆ ಮಾನವ ಯಾನಿಗಳನ್ನು ಕಳುಹಿಸುವ ಮಹತ್ವಾಕಾಂಕ್ಷಿ ಯೋಜನೆಯ ಸಿದ್ದತೆಯಲ್ಲಿರುವ ನಾಸಾಗೆ, ಶನಿವಾರದ ಉಡಾವಣೆ ಪ್ರಾಯೋಗಿಕ ದೃಷ್ಠಿಯಿಂದ ಮಹತ್ವದಾಗಿದೆ. ಹಾಗೂ ಇದರ ಯಶಸ್ಸು, ಕಾರ್ಯ ವಿಧಾನ, ಯಾನದಲ್ಲಿಯ ಲೋಪಗಳು ಇತ್ಯಾದಿಗಳು  ತನ್ನ ಮುಂದಿನ ಮಹತ್ವ ಮಾನವ ಗಗನ ಯಾನದ ಯಶಸ್ಸಿಗೆ ಸಹಕಾರಿಯಾಗಲಿದೆ ಎಂದು ನಾಸಾ ಮೂಲಗಳು ಹೇಳಿವೆ.

Leave a Comment