ಸ್ಪೀಕರ್ ವಿರುದ್ಧ ಬಿಜೆಪಿ ಸದಸ್ಯರು ಗರಂ

ಬೆಂಗಳೂರು, ಜುಲೈ18: ಮೈತ್ರಿ ಸರ್ಕಾರ ಪತನದ ತುದಿಗೆ ಬಂದು ತಲುಪಿದೆ. ಇಂದು ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡಲಿದ್ದು, ಸರ್ಕಾರ ಉಳಿಯುತ್ತದೆಯೋ? ಉರುಳುತ್ತದೆಯೋ? ನಿರ್ಧಾರವಾಗಲಿದೆ.
ಕಾಂಗ್ರೆಸ್-ಜೆಡಿಎಸ್‌ ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ನೀಡಿದ್ದಾರೆ, ಇಬ್ಬರು ಪಕ್ಷೇತರರು ಬೆಂಬಲ ವಾಪಸ್ ಪಡೆದಿದ್ದಾರೆ. ಹೀಗಾಗಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ನಾಯಕರು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
ಮೇಲ್ನೋಟಕ್ಕೆ ಬಿಜೆಪಿಯು ಕೆಲವು ಶಾಸಕರ ಬೆಂಬಲವನ್ನು ಹೆಚ್ಚಿಗೆ ಹೊಂದಿದ್ದು, ಬಹುಮತವನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ನಿನ್ನೆ ರಾತ್ರಿಯಷ್ಟೆ ರಾಮಲಿಂಗಾ ರೆಡ್ಡಿ ಅವರ ಅತೃಪ್ತತೆ ನಿವಾರಿಸಿ ಪಕ್ಷಕ್ಕೆ ವಾಪಸ್ ಕರೆದುಕೊಳ್ಳುವಂತೆ ಮಾಡಿರುವ ಮೈತ್ರಿ ನಾಯಕರು ತಾವು ಸುಲಭದಲ್ಲಿ ಸೋಲೊಪ್ಪಿಕೊಳ್ಳುವುದಿಲ್ಲವೆಂದು ಸೂಚ್ಯಗೊಳಿಸಿದ್ದಾರೆ.

Leave a Comment