ಸ್ಪೀಕರ್ ನಡೆ ಬೇಸರ ತಂದಿದೆ

ದಾವಣಗೆರೆ, ಜು. 12 – ಸ್ಪೀಕರ್ ರಮೇಶ್ ಕುಮಾರ್ ಅವರು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡದೆ ನ್ಯಾಯಯುತವಾಗಿ ತೀರ್ಪು ನೀಡಬೇಕು ಎಂದು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಮನವಿ ಮಾಡಿದ್ದಾರೆ. ರಾಜ್ಯದ ರಾಜಕೀಯ ಸ್ಥಿತಿ ಗಮನಿಸಿದರೆ ಮೈತ್ರಿ ಸರ್ಕಾರ ಸ್ವಯಂ ರಾಜೀನಾಮೆ ನೀಡಿ ಹೊರಬರಬೇಕು. ಸ್ಪೀಕರ್ ರಮೇಶ್ ಕುಮಾರ್ ಅವರು ಕಾಂಗ್ರೆಸ್ ಪರವಾಗಿ ಉದ್ದೇಶ ಪೂರ್ವಕವಾಗಿ ಪಾತ್ರ ವಹಿಸುತ್ತಿದ್ದಾರೆ. ವಿನಾಕಾರಣ ಶಾಸಕರ ರಾಜೀನಾಮೆಯ ವಿಚಾರದಲ್ಲಿ ತೀರ್ಪು ನೀಡದೆ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಗೊಂದಲಗಳು ಉಂಟಾಗುತ್ತಿದೆ. ಆದ್ದರಿಂದ ಅವರು ಯಾವುದೇ ಪಕ್ಷದ ಪರವಾಗಿರಬಾರದು ಎಂದಿದ್ದಾರೆ.

Leave a Comment