ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳ ಉಚಿತ ತರಬೇತಿ

ತುಮಕೂರು, ಆ. ೩- ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಇಂಡಿಯನ್ ಐಎಎಸ್ ಮತ್ತು ಕೆಎಎಸ್ ಕೋಚಿಂಗ್ ಅಕಾಡೆಮಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 3 ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಸಂಯೋಜಕ ಭಾಸ್ಕರ್ ರೆಟ್ಟಿ ತಿಳಿಸಿದರು.
ನಗರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಐಎಎಸ್, ಪಿಎಸ್‍ಐ, ಎಫ್‍ಡಿಎ, ಪಿಡಿಓ, ಆರ್‍ಆರ್‍ಬಿ ಹಾಗೂ ಬ್ಯಾಂಕಿಂಗ್ ಸೇರಿದಂತೆ ಇತರೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳು ಈ ತರಬೇತಿಯ ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು.
ಆಗಸ್ಟ್ 6 ರಿಂದ ನೂತನ ಬ್ಯಾಚ್‍ಗಳು ಆರಂಭವಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಇಂದಿನಿಂದಲೇ ನೇರವಾಗಿ ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಅಕಾಡೆಮಿಗೆ ಭೇಟಿ ನೀಡಿ ಪ್ರವೇಶ ಪಡೆಯಬಹುದಾಗಿದೆ. ಸುಮಾರು 100 ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ಅಕಾಡೆಮಿಯ ನಿರ್ದೇಶಕಿ ಕೆ.ಆರ್.ಕಲಾ ತಿಳಿಸಿದರು.
ಅಕಾಡೆಮಿಯಲ್ಲಿ ನುರಿತ ಬೋಧಕರಿಂದ ವಿಷಯವಾರು ತರಗತಿಗಳನ್ನು ನಡೆಸುವುದರ ಜತೆಗೆ ವಿದ್ಯಾರ್ಥಿಗಳಿಗೆ ಪ್ರತಿ ವಾರ ಟೆಸ್ಟ್ ಸಿರೀಸ್‍ಗಳನ್ನು ನಡೆಸುವುದರ ಮೂಲಕ ಪರೀಕ್ಷೆಗಳನ್ನು ಎದುರಿಸುವ ಭಯವನ್ನು ದೂರ ಮಾಡಿ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು ಪ್ರೇರಣೆ ನೀಡಲಾಗುವುದು. ಇನ್ನು ಅಕಾಡೆಮಿಯು ಉತ್ತಮ ಗ್ರಂಥಾಲಯ ಸೌಲಭ್ಯ ಹಾಗೂ ವೈಫೈ ಸೌಲಭ್ಯವನ್ನು ಹೊಂದಿದ್ದು, ತರಗತಿಗಳು ಮುಗಿದ ಬಳಿಕ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕುಳಿತು ಓದಿಕೊಳ್ಳಬಹುದು ಎಂದರು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊ: 9108440145, 9108440146 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.

Leave a Comment