ಸ್ನೇಹಿತರ ಆಯ್ಕೆ ಮೇಲೆ ನಿಮ್ಮ ಭವಿಷ್ಯ ನಿಂತಿದೆ. ಬಿ.ಆರ್. ಪ್ರಸಾದ್

ಮೈಸೂರು. ಜೂ. 18. ವಿದ್ಯಾಭ್ಯಾಸದಲ್ಲಿನ ಪಿ.ಯು.ಸಿ. ಹಂತವು ವಿದ್ಯಾರ್ಥಿಗಳ ಬದುಕಿನಲ್ಲಿ ಒಂದು ರೀತಿಯ ತಿರುವು ಇದ್ದಂತೆ. ಈ ತಿರುವಿನಲ್ಲಿ ಎಚ್ಚರಿಕೆಯಿಂದ ಹೆಚ್ಚೆಹಾಕಿದಲ್ಲಿ ಯಶಸ್ಸು ಶತಃ ಸಿದ್ಧ ಎಂದು ವಿದ್ಯಾವರ್ಧಕ ತಾಂತ್ರಿಕ ಕಾಲೇಜಿನ ಇ+ಇ ವಿಭಾಗದ ಸಹಾಯಕ ಪ್ರೊಫೆಸರ ಬಾಬುರಾಜೇಂದ್ರ ಪ್ರಸಾದ್ ಹೇಳಿದರು.
ಅವರು ಇಂದು ಬೆಳಿಗ್ಗೆ ನಗರದ ಶೇಷಾದ್ರಿ ಅಯ್ಯರ್ ರಸ್ತೆಯಲ್ಲಿರುವ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪಿ.ಎಂ. ಚಿಕ್ಕಬೋರಯ್ಯ ಸಭಾಂಗಣದಲ್ಲಿ ಕಾಲೇಜು ವತಿಯಿಂದ ಆಯೋಜಿಸಿದ್ದ 2019-20ನೇ ಸಾಲಿನ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ 2018-19ರ ಸಾಲಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ವಿದ್ಯಾರ್ಥಿಗಳು ಮೊದಲು ಸಮಯ ಪರಿಪಾಲನೆಯನ್ನು ಮಾಡುವುದು, ಉಪನ್ಯಾಸಕರೊಂದಿಗೆ ಉತ್ತಮ ಭಾಂಧ್ಯಾವ ಹೊಂದುವುದು ಸ್ನೇಹಿತರ ಆಯ್ಕೆ, ಎಲ್ಲಕ್ಕಿಂತ ಹೆಚ್ಚಾಗಿ ಮೊಬೈಲ್ ನಿಂದ ದೂರವಿರುವುದು-ಇತ್ಯಾದಿಗಳನ್ನು ಕಾಲೇಜಿನ ಸೇರಿದ ದಿನದಿಂದಲೇ ರೂಢಿಸಿಕೊಳ್ಳುವುದು ಉತ್ತಮ ಎಂದರು.
ವಿದ್ಯಾರ್ಥಿಗಳು ಡಿ.ಎ.ಡಿ. ಎಂಬ ಈ ಮೂರು ಅಕ್ಷರಗಳನ್ನು ಸದಾ ನೆನಪಿ ನಲ್ಲಿಟ್ಟು ಕೊಳ್ಳಬೇಕು. ಮೊದಲ ‘ಡಿ’ ಎಂಬ ಅಕ್ಷರ ಡೈಲಿ, ‘ಎ’ ಎಂಬ ಅಕ್ಷರ ಆಕ್ಟಿವಿಟಿ ಹಾಗೂ ಕೊನೆಯ ‘ಡಿ’ ಎಂಬ ಅಕ್ಷರ ಡೈರಿ ಎಂದು ಅಥ್ರ್ಯಸಿಕೊಂಡು ಇದನ್ನು ಪ್ರತಿದಿನವೂ ಕಡ್ಡಾಯವಾಗಿ ಅನುಸರಿಸುವತ್ತ ವಿದ್ಯಾರ್ಥಿಗಳು ಹೆಚ್ಚು ಒತ್ತು ನೀಡುವಂತೆ ಪ್ರಸಾದ್ ಹೇಳಿದರು
ಕಾಲೇಜಿಗೆ ಸೇರ್ಪಡೆಗೊಂಡ ಕೂಡಲೇ ಯಾರಿಗೂ ಯಾರೂ ಪರಿಚಯ ಇರುವುದಿಲ್ಲ. ಹಾಗಾಗಿ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ದಿಸೆಯಲ್ಲಿ ಎಚ್ಚರ ವಹಿಸುವುದು ಸೂಕ್ತ. ನೀವು ಆಯ್ಕೆ ಮಾಡಿಕೊಳ್ಳುವ ಸ್ನೇಹಿತರು ಸಿಹಿ, ನೀರು, ಹುಳಿ ಹಾಗೂ ಉಪ್ಪುಗಳಂತಿದ್ದು ನೀವು ಇವುಗಳಲ್ಲಿ ಯಾವುದನ್ನು ಆಯ್ಕೆ ಮಾಡಿ ಕೊಳ್ಳುವಿರೋ ಅದರ ಮೇಲೆ ನಿಮ್ಮ ಭವಿಷ್ಯ ಅಡಗಿದೆ ಹಾಗಾಗಿ ನಿಮ್ಮ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಈ ನಾಲ್ಕೂ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ ಎಂದು ನೂತನ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು
ಕಾಲೇಜು ಆರಂಭಗೊಂಡ ದಿನದಿಂದಲೇ ಉಪನ್ಯಾಸಕರುಗಳೊಂದಿಗೆ ಉತ್ತಮ ಭಾಂಧವ್ಯ ರೊಡಿಸಿ ಕೊಳ್ಳುವುದನ್ನು ನೀವು ಅರಿತುಕೊಳ್ಳಬೇಕು ಇದಕ್ಕಾಗಿ ನೀವು ಪಠ್ಯ ವಿಷಯಿಗಳ ಬಗ್ಗೆ ಪ್ರತಿದಿನವೂ ತಮಗೆ ಅರ್ಧವಾಗಿರುವ ಹಾಗೂ ಅರ್ಥವಾಗದಿರುವ ವಿಷಯಗಳನ್ನು ಕುರಿತು ಪ್ರಶ್ನೆಗಳನ್ನು ಕೇಳಿದಲ್ಲಿ ಉಪನ್ಯಾಸಕರು ನಾಳೆ ಯಾವ ಪ್ರಶ್ನೆಯನ್ನು ಕೇಳಲು ವಿದ್ಯಾರ್ಥಿಗಳು ಬಯಸಬಹುದು ಎಂಬುದರ ಬಗ್ಗೆ ಅವರೂ ಸಹಾ ಉಪನ್ಯಾಸ ನೀಡಲು ಸಿದ್ಧರಾಗಲು ಸಾಧ್ಯವಾಗುತ್ತದೆ ಎಂದರು.
ಪರೀಕ್ಷೆಯ ವಿಷಯವಾಗಿ ಹೆಚ್ಚು ತಲೆ ಕೆಡಿಸಿಕೊಳ್ಳುವುದು ಸರಿಯಲ್ಲ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವ ಪ್ರಶ್ನೆಗಳನ್ನು ಚೆನ್ನಾಗಿ ಅರ್ಥೈಸಿಕೊಂಡ ನಂತರ ವಿವರವಾಗಿ ಉತ್ತರ ಬರೆಯಿದಿದ್ದರೂ ಸಂಕ್ಷಿಪ್ತವಾಗಿ ಉತ್ತರಿಸಿದಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದು ಹೇಳಿದ ಪ್ರಸಾದ್ ಇಂದಿನ ವಿದ್ಯಾರ್ಥಿಗಳು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಮೂಲಕ ದೇಶದ ಭವಿಷ್ಯದ ಸತ್ಪಜ್ರೆಗಳಾಗಿ ಎಂದು ಶುಭ ಹಾರೈಸಿದರು.
ಇದೇ ಸಂಧರ್ಭದಲ್ಲಿ 2018-19ನೇ ಸಾಲಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಗೌರವ ಕಾರ್ಯದರ್ಶಿ ಪಿ. ವಿಶ್ವನಾಥ್. ಗೌರವ ಖಜಾಂಚಿ ಶ್ರೀಶೈಲ ರಾಮಣ್ಣ ನವರ ಎ.ಕೆ. ಪಾಪಣ್ಣ, ಕಾಲೇಜು ಪ್ರಾಂಶುಪಾಲ ಸಿದ್ದಯ್ಯ ಸೇರಿದಂತೆ ಹೊಸದಾಗಿ ಕಾಲೇಜಿಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಉಪಸ್ಧಿತರಿದ್ದರು.

Leave a Comment