ಸ್ನಾಯು ಸೆಳೆತಕ್ಕೆ ಮದ್ದು

ಸ್ನಾಯು ಸೆಳೆತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ವ್ಯಕ್ತಿಗಳು ಸಾಕಷ್ಟು ನೋವು ಅನುಭವಿಸುವುದು ಸಹಜ. ಇದು ಕಡಿಮೆಯಾಗಲು ಹಲವು ಗಂಟೆಗಳೇ ಬೇಕಾಗುತ್ತವೆ. ಇದು ಮಕ್ಕಳು, ಹಿರಿಯರಲ್ಲಿ ಸ್ನಾಯು ಸೆಳೆತ ಹೆಚ್ಚಾಗಿ ಕಂಡು ಬರುತ್ತದೆ. ರಾತ್ರಿ ಸಮಯದಲ್ಲೂ ಸ್ನಾಯು ಸೆಳೆತ ಕಾಡುತ್ತದೆ. ಈ ವೇಳೆ ಕಾಲುಗಳನ್ನು ಉದ್ದವಾಗಿ ಇರಿಸಿದರೆ ನೋವು ಕಡಿಮೆಯಾಗುತ್ತದೆ. ಸೂಕ್ತ ರೀತಿಯ ಪೋಷಕಾಂಶಗಳಿರುವ ಆಹಾರ ಸೇವಿಸಿದರೆ ಇದನ್ನು ನಿಯಂತ್ರಿಸಬಹುದಾಗಿದೆ.

ಡಿ ಹೈಡ್ರೇಶನ್, ಗರ್ಭಾವಸ್ಥೆ, ಸ್ನಾಯುವಿನ ಅತಿಯಾದ ಬಳಕೆ, ಹೆಚ್ಚು ಕಾಲದವರೆಗೆ ಸ್ನಾಯುವನ್ನು ಒಂದೇ ಸ್ಥಳದಲ್ಲಿ ಹಿಡಿದಿಡುವುದರಿಂದ ಹಾಗೂ ವ್ಯಾಯಾಮ ಮಾಡುವಾಗ ಆ ಭಾಗದಲ್ಲಿ ರಕ್ತ ಸಂಚಲನ ಸರಿಯಾಗಿ ಪೂರೈಕೆಯಾಗದಿರುವುದು. ಹಾಗೂ ಸ್ಪೈನಲ್ ಸ್ನಾಯು, ಕಾಲ್ಸಿಯಂ, ಕೊರತೆಯಿಂದ ಸ್ನಾಯು ಸೆಳೆತ ಕಂಡು ಬರುತ್ತದೆ.

ಇದು ದೇಹದ ಯಾವುದೇ ಭಾಗದಲ್ಲಾದರೂ ಕಂಡು ಬರುವುದು ಸಹಜ. ವಿಶೇಷವಾಗಿ ಸ್ನಾಯುಗಳಲ್ಲಿ ನಿರ್ದಿಷ್ಟವಾಗಿ ಕರುವಿನಲ್ಲಿ ಬೆಳೆಯುತ್ತದೆ. ನಿಮ್ಮ ಚರ್ಮದ ಕೆಳಗಿರುವ ಅಂಗಾಂಗ ಗಟ್ಟಿಯಾದಾಗ ನೋವು ತೀವ್ರವಾಗಿ ಕಂಡು ಬರುತ್ತದೆ.

ಯಾವುದೇ ವ್ಯಕ್ತಿಗಾದರೂ ಸ್ನಾಯು ಸೆಳೆತಕ್ಕೆ ಒಳಗಾಗಬಹುದು. ಲಿಂಗ ಮತ್ತು ವಯಸ್ಸಿನ ಹೊರತಾಗಿಯೂ ಹೆಚ್ಚು ಜನರನ್ನು ಕಾಡುವ ರೋಗವಾಗಿದೆ. ಏಕೆಂದರೆ ವಯಸ್ಸಿನಲ್ಲಿ ನೀವು ಸ್ನಾಯು ದ್ರವ್ಯಕಾಶಿಯನ್ನು ಕಳೆದುಕೊಳ್ಳುತ್ತೀರಿ ಮತ್ತು ಉಳಿದ ಸ್ನಾಯು ಸುಲಭವಾಗಿ ತಗ್ಗಿಸಬಹುದು.

ಮಧುಮೇಹ, ನರ ಅಸ್ವಸ್ಥತೆ, ಪಿತ್ತ ಜನಕಾಂಗ ಅಥವಾ ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದರೆ ಸ್ನಾಯು ಸೆಳೆತಕ್ಕೆ ಒಳಗಾಗುತ್ತಾರೆ. ಕ್ರೀಡಾಪಟುಗಳು ಮತ್ತು ಅತಿಯಾದ ತೂಕ ಹೊಂದಿರುವ ವ್ಯಕ್ತಿಗಳು ಸ್ನಾಯು ಸೆಳೆತ ಅಪಾಯಕ್ಕೆ ಸಿಲುಕುತ್ತಾರೆ.

ಸ್ವ-ಆರೈಕೆಯ ಮೂಲಕವೇ ಮನೆಯಲ್ಲಿ ಸ್ನಾಯುಸೆಳೆತವನ್ನು ಗುಣಪಡಿಸಬಹುದಾಗಿದೆ. ನಿರ್ಜಲೀಕರಣ ಅಥವಾ ಪೋಷಕಾಂಶ ಮತ್ತು ಖನಿಜ ಕೊರತೆಗಳು ಕಾರಣವಾಗಿದ್ದರೆ, ಕೆಲವೊಂದು ಆಹಾರ ಬದಲಾವಣೆಗಳನ್ನು ಸೇರಿಸುವ ಮೂಲಕ ಸರಳವಾಗಿ ಪರಿಹಾರ ಕಂಡುಕೊಳ್ಳಬಹುದು.

ನಿರ್ಜಲೀಕರಣ ಮತ್ತು ಕಳಪೆ ಆಹಾರದಂತಹ ಅಂಶಗಳು ದೇಹದಲ್ಲಿ ನೈಸರ್ಗಿಕ ಖನಿಜ ಮತ್ತು ವಿದ್ಯುದ್ವಿಚ್ಛೇದ್ಯ ಸಮತೋಲನವು ತೊಂದರೆಗೊಳಗಾಗುತ್ತವೆ. ಇದರಿಂದಾಗಿ ಸ್ನಾಯು ಕುಗ್ಗುವಿಕೆಗೆ ಹೆಚ್ಚು ಒಳಗಾಗಬೇಕಾಗುತ್ತದೆ. ಇದಕ್ಕಾಗಿ ೧೪ ಆಹಾರಗಳಿವೆ.

ಬಾಳೆಹಣ್ಣು, ಸಿಹಿ ಗೆಣಸು, ಬೀನ್ಸ್ ಮತ್ತು ಮಸೂರಾ ಬಿನ್ಸ್, ಕಲ್ಲಂಗಡಿ, ಹಸಿರು ಸೊಪ್ಪು, ಒಣ ಹಣ್ಣುಗಳು, ಮೀನು, ಅವೊ ಕಾಡೊ, ಟೊಮೆಟೋ, ಸಿಲರಿ, ಅನಾನಸ್, ಪಪ್ಪಾಯಿ, ಮೊಟ್ಟೆ, ಹಾಲು ಸೇವನೆಯಿಂದ ಸ್ನಾಯು ಸೆಳೆತ ತಡೆಗಟ್ಟಬಹುದಾಗಿದೆ. ಇದರ ಜೊತೆಗೆ ಸಾಕಷ್ಟು ಪ್ರಮಾಣ ದಲ್ಲಿ ನೀರು ಸೇವಿಸಿ ಸ್ನಾಯು ಸೆಳೆತದಿಂದ ಪಾರಾಗಬಹುದಾಗಿದೆ.

Leave a Comment