ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೇಸ್ ಮೇಲುಗೈ: ಜಮೀರ್

ಪುತ್ತೂರು, ಸೆ.೩- ರಾಜ್ಯದ ಜನತೆಯಲ್ಲಿ ಕಾಂಗ್ರೇಸ್ ಪರವಾದ ಚಿಂತನೆ ಇದೆ. ಪ್ರಸ್ತುತ ನಡೆದಿರುವ ನಗರಸಭೆ ಮತ್ತು ಪುರಸಭೆಗಳ ಚುನಾವಣೆಯಲ್ಲಿ ಕಾಂಗ್ರೇಸ್ ಸ್ಪಷ್ಟವಾದ ಮೇಲುಗೈ ಪಡೆಯಲಿದೆ. ಇದು ಮುಂದಿನ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ವಕ್ಪ್ ಮತ್ತು ಆಹಾರ, ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್ ಅಹ್ಮದ್ ಹೇಳಿದರು.
ನಿನ್ನೆ ಪುತ್ತೂರಿಗೆ ಖಾಸಗಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಆಗಮಿಸಿದ ಅವರು, ಪುತ್ತೂರು ಸಾಲ್ಮರ ಯತೀಂ ಖಾನಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರ ಜತೆ ಮಾತನಾಡಿದರು.
ರಾಜ್ಯ ೧೨ ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಇದರಲ್ಲಿ ಕರಾವಳಿಯೂ ಸೇರಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿ ತೀರ್ಪು ನೀಡುವ ಚಿಂತನೆ ನಡೆಸಿದ್ದಾರೆ. ಹಾಗಾಗಿ ಕಾಂಗ್ರೇಸ್ ಉತ್ತಮವಾದ ಸ್ಥಾನಗಳನ್ನು ಪಡೆಯುವುದು ಖಚಿತ ಎಂದವರು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಬಿಪಿಎಲ್ ಕಾರ್ಡ್‌ದಾರರಿಗೆ ೭ ಕೆಜಿ ಅಕ್ಕಿ ನೀಡಿದ್ದರು. ಆದರೆ ಇದನ್ನು ೫ ಕೆಜಿಗೆ ಇಳಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಅಕ್ಕಿ ನೀಡುವುದನ್ನು ಇಳಿಕೆ ಮಾಡದಂತೆ ಅವರಿಗೆ ಮನವಿ ಮಾಡಿದ್ದೆ. ಜನಸಾಮಾನ್ಯರಿಗೆ ಇತರ ದವಸ ಧಾನ್ಯ ನೀಡಲು ಅಡ್ಡಿ ಎಲ್ಲ ಎಂದು ತಿಳಿಸಿದ್ದೆ. ಇದಕ್ಕೆ ಸಂಪೂರ್ಣ ಸ್ಪಂದಿಸಿದ ಕುಮಾರಸ್ವಾಮಿ ಹಿಂದಿನಂತೆ ೭ ಕೆ.ಜಿ ಅಕ್ಕಿ ಪೂರೈಕೆ ಮಾಡಲು ಒಪ್ಪಿಗೆ ನೀಡಿದ್ದಾರೆ ಎಂದರು.
ರಾಜ್ಯ ವಕ್ ಸದಸ್ಯ ಸಂಶುದ್ದೀನ್ ಸುಳ್ಯ, ಜಿಲ್ಲಾ ವಕ್ ಸದಸ್ಯರಾದ ಮುಸ್ತಾಫ ಸುಳ್ಯ, ನೂರುದ್ದೀನ್ ಸಾಲ್ಮರ, ಜಿಲ್ಲಾ ವಕ್ಪ್ ಅಧ್ಯಕ್ಷ ಕನಚ್ಚೂರು ಮೋನು, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಯು. ಅಬ್ದುಲ್ಲ ಹಾಜಿ, ಪ್ರ. ಕಾರ್ಯದರ್ಶಿ ಎಲ್.ಟಿ. ಅಬ್ದುಲ್ ರಜಾಕ್ ಹಾಜಿ, ಉಪಾಧ್ಯಕ್ಷ ಯಾಕೂಬ್ ಹಾಜಿ ದರ್ಬೆ, ಅನ್ಸಾರುದ್ದೀನ್ ಯತೀಂ ಖಾನದ ಅಧ್ಯಕ್ಷ ಕೆ.ಪಿ. ಅಹ್ಮದ್ ಹಾಜಿ, ಪುತ್ತೂರು ನಾಗರಿಕ ಅಭಿವೃದ್ಧಿ ಸಮಿತಿ ಅಧ್ಯಕ್ಷ ಗೋಳಿಕಟ್ಟೆ ಇಬ್ರಾಹಿಂ, ಪಿ.ಎಂ. ಇಬ್ರಾಹಿಂ ಪರ್ಪುಂಜ, ಹಂಝ ಕಬಕ ಮೊದಲಾದವರು ಉಪಸ್ಥಿತರಿದ್ದರು.

Leave a Comment