ಸ್ತ್ರೀರೋಗಕ್ಕೆ ಸಿಂಗಲ್ ಪೋರ್ಟ್ ಲ್ಯಾಪ್ರೋಸ್ಕೋಪಿ ಸ್ಕಾರ್‌ಲೆಸ್ ಸರ್ಜರಿ

ಸ್ತ್ರೀ ರೋಗ ಚಿಕಿತ್ಸೆಯಲ್ಲಿ ಲ್ಯಾಪ್ರೋಸ್ಕೋಪಿ ಮಹತ್ವದ ಪಾತ್ರ ವಹಿಸುತ್ತಿದೆ. ಓಪನ್ ಸರ್ಜರಿಗೆ ಹೋಲಿಸಿದರೆ ಇದರಲ್ಲಿ ಗಾಯ ಹಾಗೂ ಕಲೆಗಳು ಉಂಟಾಗುವ ಪ್ರಮಾಣ ತುಂಬಾ ಕಡಿಮೆ.
ಇತ್ತೀಚಿನ ವರ್ಷಗಳಲ್ಲಿ `ಸಿಂಗಲ್ ಪೋರ್ಟ್ ಲ್ಯಾಪ್ರೋಸ್ಕೋಪಿ (SPL)’ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಇದಕ್ಕೆ ಆರೋಗ್ಯದ ಬಗೆಗಿನ ಅತಿಯಾದ ಕಾಳಜಿ ಹಾಗೂ ಸೌಂದರ್ಯ ಪ್ರಜ್ಞೆ ಕಾರಣ ಎನ್ನಬಹುದು.
ಎಷ್ಟು ಮಹತ್ವ?
ಮಾಡೆಲ್‌ಗಳಿಗೆ, ಟಿವಿ, ಸಿನಿಮಾ ತಾರೆಯರಿಗೆ ಅಷ್ಟೇ ಅಲ್ಲ. ಇಂದಿನ ಆಧುನಿಕ ಅವಿವಾಹಿತ ಯುವತಿಯರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಾಗ ತಮ್ಮ ಹೊಟ್ಟೆ ಭಾಗದಲ್ಲಿ ಯಾವುದೇ ಕಲೆಗಳು ಗೋಚರಿಸಬಾರದು ಎನ್ನುವುದರಾಗಿರುತ್ತಾರೆ. ಹೊಟ್ಟೆಯ ಮೇಲೆ ಕಲೆಗಳು ಕಂಡು ಬಂದರೆ ಎಲ್ಲಿ ತಮ್ಮ ಮಗಳಿಗೆ ಮದುವೆಯಾಗುವುದಿಲ್ಲವೋ ಎನ್ನುವ ಆತಂಕವೂ ಪೋಷಕರನ್ನು ಕಾಡುತ್ತಿರುತ್ತದೆ.
ಪ್ರಕ್ರಿಯೆ ಹೇಗೆ?
ಸಾಮಾನ್ಯ ಲ್ಯಾಪ್ರೋಸ್ಕೋಪಿಯಲ್ಲಿ ಹೊಕ್ಕಳಿನ ಆಸುಪಾಸು 3 ಅಥವಾ 4 ರಂಧ್ರಗಳ ಮೂಲಕ ಉಪಕರಣಗಳನ್ನು ತೂರಿಸಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇದರಿಂದ ಹೊಟ್ಟೆಯ ಮೇಲ್ಭಾಗದಲ್ಲಿ ಪುಟ್ಟ-ಪುಟ್ಟ ಕಲೆಗಳು ಗೋಚರಿಸುತ್ತದೆ. ಆದರೆ ಸಿಂಗಲ್ ಪೋರ್ಟ್ ಸರ್ಜರಿ ವಿಧಾನದಲ್ಲಿ ಎರಡರಿಂದ ಎರಡೂವರೆ ಸೆಂ.ಮೀನಷ್ಟು ಅಗಲದ ಒಂದೇ ರಂಧ್ರ ಮಾಡಿ ಶಸ್ತ್ರ ಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಇದರಿಂದಾಗಿ ಹೊಟ್ಟೆಯ ಮೇಲೆ ಒಂದು ಕಲೆ ಕೂಡ ಕಂಡುಬರದು.
ಏನೇನು ಉಪಯೋಗ?
ಸಿಂಗಲ್ ಪೋರ್ಟ್ ಸರ್ಜರಿಯಿಂದ ನೋವಿನ ಪ್ರಮಾಣ ಅತ್ಯಂತ ಕಮ್ಮಿ. ಗುಣಮುಖರಾಗಲು ತೆಗೆದುಕೊಳ್ಳುವ ಅವಧಿ ಕೂಡ ಅತ್ಯಂತ ಕಡಿಮೆ. ಬೇರೆ ಭಾಗಗಳಿಗೆ ಹೋಲಿಸಿದರೆ ಹೊಕ್ಕಳಿನ ಭಾಗದಲ್ಲಿ ನರಗಳ ಹರಿವು ಕಡಿಮೆ ಇರುವುದರಿಂದ ನೋವಿನ ಅನುಭೂತಿ ಕಡಿಮೆ ಎನಿಸುತ್ತದೆ.
* ಮುಂಜಾನೆ ಆಪರೇಷನ್ ಮಾಡಿಸಿಕೊಂಡು ಸಂಜೆಯೇ ಮನೆಗೆ ಮರಳಬಹುದು.
* ಈ ರೀತಿಯ ಶಸ್ತ್ರ ಚಿಕಿತ್ಸೆಯಿಂದ ಸೋಂಕು ಉಂಟಾಗುವ ಸಾಧ್ಯತೆಯೂ ಕಡಿಮೆ.
* ಆಪರೇಷನ್ ನಂತರ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯ ಕೂಡ ಉಂಟಾಗದು.
ಕಂಬೈಂಡ್ ಸರ್ಜರಿ
ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚಿನ ಶಸ್ತ್ರಚಿಕಿತ್ಸೆಗಳನ್ನು ಮಾಡಬೇಕಾದ ಸಂದರ್ಭದಲ್ಲಿ ಸಿಂಗಲ್ ಪೋರ್ಟ್ ಸರ್ಜರಿಯೇ ಅತ್ಯಂತ ಉಪಯುಕ್ತ ಎನಿಸುತ್ತದೆ.
ಪ್ರಮುಖ ಕಂಬೈಂಡ್ ಸರ್ಜರಿಗಳು
* ಪಿತ್ತಕೋಶ ಮತ್ತು ಗರ್ಭಕೋಶ
* ಗರ್ಭಕೋಶ ಮತ್ತು ಅಪೆಂಡಿಕ್ಸ್
* ಪಿತ್ತಕೋಶ ಮತ್ತು ಅಂಡಾಶಯ ಸಿಸ್ಟ್
* ಕರುಳು ಮತ್ತು ಗರ್ಭಕೋಶಕ್ಕೆ ಸಂಬಂಧಪಟ್ಟ ಯಾವುದೇ ಶಸ್ತ್ರ ಚಿಕಿತ್ಸೆಗಳನ್ನು ಈ ವಿಧಾನದಲ್ಲಿ ಸಮರ್ಪಕವಾಗಿ ನೆರವೇರಿಸಬಹುದಾಗಿದೆ.
ಸಾಮಾನ್ಯ ಲ್ಯಾಪ್ರೋಸ್ಕೋಪಿಕ್ ಕಂಬೈಂಡ್ ಸರ್ಜರಿಯಲ್ಲಿ ಒಂದಕ್ಕಿಂತ ಹೆಚ್ಚು ಸರ್ಜರಿ ಮಾಡುವಾಗ 6 ರಿಂದ 8 ರಂಧ್ರಗಳನ್ನು ಮಾಡಬೇಕಾಗುತ್ತದೆ. ಸಿಂಗಲ್ ಪೋರ್ಟ್ ಸರ್ಜರಿಯಲ್ಲಿ ಏಕೈಕ ರಂಧ್ರ ಮಾಡುವುದರಿಂದ ಹೆಚ್ಚಿನ ಗಾಯ, ಹೊಲಿಗೆ, ನೋವು ಇರದೆ ಬಹುಬೇಗ ಗುಣಮುಖರಾಗಬಹುದು.
ಸೂಕ್ತ ಕಾಳಜಿ
ಸಿಂಗಲ್ ಪೋರ್ಟ್ ಶಸ್ತ್ರ ಚಿಕಿತ್ಸೆ ಮಾಡಿದ ಬಳಿಕ ಹೊಕ್ಕಳಿನ ಭಾಗದಲ್ಲಿ ಸರಿಯಾಗಿ ಹೊಲಿಗೆ ಹಾಕಬೇಕಾಗುತ್ತದೆ. ಇಲ್ಲದಿದ್ದರೆ ಹರ್ನಿಯಾ ಆಗುವ ಸಾಧ್ಯತೆ ಇರುತ್ತದೆ. ರೋಗಿಯು ಆದಷ್ಟು ಕಾಳಜಿ ವಹಿಸುವುದು ಒಳಿತು.
ಹೆಚ್ಚಿನ ಮಾಹಿತಿಗೆ:
ಡಾ. ಬಿ. ರಮೇಶ್
ಆಲ್ಟಿಯಸ್ ಹಾಸ್ಟಿಟಲ್, ನಂ. 6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್
ಎಂ.ಇ.ಐ ಪಾಲಿಟೆಕ್ನಿಕ್ ಎದುರು, ರಾಮಮಂದಿರದ ಹತ್ತಿರ
ಬೆಂಗಳೂರು
ದೂ: 080-23151873/9900031842
ರೋಗಿಯ ಅನುಭವ
ನನಗೆ 49 ವರ್ಷ, ಸಿಂಗಲ್ ಪೋರ್ಟ್ ಸರ್ಜರಿ ಮುಖಾಂತರ ಗರ್ಭಕೋಶ ನಿವಾರಣೆ ಮಾಡಿಸಿಕೊಂಡು ಅದೇ ದಿನ ಸಂಜೆ ಮನೆಗೆ ಬಂದೆ. ಎರಡೇ ದಿನದಲ್ಲಿ ಸಾಮಾನ್ಯ ಚಟುವಟಿಕೆಗಳಲ್ಲಿ ತೊಡಗಿದೆ. ನನಗೆ ಆಪರೇಷನ್ ಆಗಿ 2 ತಿಂಗಳು ಆಯಿತು. ಯಾವುದೇ ಕಲೆ ಇಲ್ಲ, ಯಾವುದೇ ತೊಂದರೆ ಕಾಣಿಸಿಲ್ಲ. ನಾನೀಗ ಖುಷಿಯಿಂದಿದ್ದೇನೆ.
-ಶಶಿಕಲಾ, ಬೆಂಗಳೂರು
endoram2006@yahoo.in

Leave a Comment