ಸ್ತನ ಕ್ಯಾನ್ಸರ್ ತಡೆಗೆ ವ್ಯಾಯಾಮ ಇರಲಿ

ಜೀವನಶೈಲಿ ನಡವಳಿಕೆಗಳನ್ನು ಸ್ತನ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಉದಾಹರಣೆಗೆ, ಬೊಜ್ಜು, ಋತುಬಂಧನಕ್ಕೊಳಗಾದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಪ್ರಮಾಣವನ್ನು ಶೇ.೨೦ ರಿಂದ ೪೦ ರಷ್ಟು ಹೆಚ್ಚು ಅಪಾಯವನ್ನು ಉಂಟು ಮಾಡುತ್ತದೆ. ಬೊಜ್ಜು ಮತ್ತು ದೈಹಿಕವಾಗಿ ಚಟುವಟಿಕೆ ಇಲ್ಲದಿರುವುದು ಎಲ್ಲಾ ಸ್ತನ ಕ್ಯಾನ್ಸರ್‌ಗಳಿಗೆ ಶೇ.೨೫ ರಿಂದ ೩೩ ರಷ್ಟು ಕಾರಣವಾಗುತ್ತವೆ. ಸ್ತನ ಕ್ಯಾನ್ಸರ್‌ಗೆ ಸರಿಯಾದ ಪರಿಹಾರ ಎಂದರೆ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗುವುದು. ಇದು ದೈಹಿಕವಾಗಿ ಆರೋಗ್ಯವಂತರಾರುವಂತೆ ನೋಡಿಕೊಳ್ಳುತ್ತದೆ ಎಂದು ಬಿಜಿಎಸ್‌ನ ಡಾ.ಮೋನಿಕಾ ಪನ್‌ಸಾರಿ ತಿಳಿಸಿದ್ದಾರೆ.

bc1

ವ್ಯಾಯಾಮವುದ ಅಗತ್ಯ?
* ವ್ಯಾಯಾಮವು ದೇಹದಲ್ಲಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರವಾದ ತೂಕ ನಿರ್ವಹಣೆಗೆ ನೆರವಾಗುತ್ತದೆ: ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು ಮತ್ತು ಸ್ಲಿಮ್ ಫಿಗರ್ ನಿರ್ವಹಣೆ ಮಾಡಿಕೊಳ್ಳಲು ನೆರವಾಗುತ್ತದೆ ಎಂಬುದನ್ನು ನಾವು ತಿಳಿದಿದ್ದೇವೆ. ಏಕೆಂದರೆ, ದೇಹದಲ್ಲಿ ಈಸ್ಟ್ರೋಜನ್ ದೊಡ್ಡ ಮಟ್ಟದಲ್ಲಿ ಶೇಖರಣೆ ಆಗುವುದರಿಂದ ಕೊಬ್ಬಿನ ಜೀವಕೋಶಗಳು ಬೆಳೆಯುತ್ತವೆ. ಈ ಹಾರ್ಮೋನ್ ಸ್ತನ ಕ್ಯಾನ್ಸರ್‌ನ ಅಪಾಯಕ್ಕೆ ಕಾರಣವಾಗುತ್ತದೆ. ಅಧಿಕ ಕೊಬ್ಬಿನ ಅಂಶವಿರುವುದರಿಂದ ಅಪಾಯ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ.
* ವ್ಯಾಯಾಮವು ದೇಹದಲ್ಲಿನ ಈಸ್ಟ್ರೋಜನ್ ಮಟ್ಟವನ್ನು ಕಡಿಮೆ ಮಾಡುತ್ತದೆ: ವ್ಯಾಯಾಮವು ಮಹಿಳೆಯರಲ್ಲಿ ಋತುಚಕ್ರದ ಮಾದರಿಯನ್ನು ಮಾರ್ಪಾಡು ಮಾಡಿ ಈಸ್ಟ್ರೋಜ್ ಉತ್ಪತ್ತಿಯನ್ನು
* ಕಡಿಮೆ ಮಾಡುತ್ತದೆ. ಇದರ ಪರಿಣಾಮ ಸ್ತನ ಕ್ಯಾನ್ಸರ್‌ನ ಅಪಾಯವನ್ನು ಕಡಿಮೆ ಆಗುತ್ತದೆ.
*ವ್ಯಾಯಾಮವು ಪ್ರತಿರೋಧಕ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತದೆ: ಸ್ವತಂತ್ರವಾಗಿರುವ ರ್‍ಯಾಡಿಕಲ್‌ಗಳು ಹೆಚ್ಚು ಪ್ರತಿಕ್ರಿಯಾತ್ಮಕ, ಅಸ್ಥಿರ ಅಣುಗಳಾಗಿರುತ್ತವೆ. ಇವು ಕೋಶಗಳನ್ನು ಪರಿವರ್ತಿಸುತ್ತವೆಯಲ್ಲದೇ ಕ್ಯಾನ್ಸರ್‌ಗೆ ಕಾರಣವಾಗುತ್ತವೆ. ಈ ಸ್ವತಂತ್ರ ರ್‍ಯಾಡಿಕಲ್‌ಗಳು ದೇಹಕ್ಕೆ ಹಾನಿಯನ್ನುಂಟು ಮಾಡುತ್ತವೆ. ಆದರೆ, ಇದು ಉತ್ಕರ್ಷಣ ನಿರೋಧಕಗಳ ಉತ್ಪಾದನೆಯಿಂದ ಪ್ರತಿ-ಸಮತೋಲಿತವಾಗಿರುತ್ತದೆ.
* ವ್ಯಾಯಾಮವು ಮಾನಸಿಕ ಪ್ರಯೋಜನವನ್ನು ನೀಡುತ್ತದೆ ಮತ್ತು ಒತ್ತಡ ನಿವಾರಣೆ ಮಾಡುತ್ತದೆ: ವ್ಯಾಯಾಮವು ನಿಮ್ಮ ಮನಸ್ಧಿತಿ ಮತ್ತು ಭಾವನೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಬಗ್ಗೆ ಸಂಶೋಧನೆಗಳು, ತನಿಖೆಗಳು ನಡೆಯುತ್ತಿದ್ದಾಗ್ಯೂ ಮಾನಸಿಕ ಒತ್ತಡ ಮತ್ತು ಸ್ತನ ಕ್ಯಾನ್ಸರ್ ನಡುವೆ ಸಂಬಂಧ ಇದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ನಿರ್ದಿಷ್ಟವಾಗಿ, ಚಿಕಿತ್ಸೆ ಪಡೆಯುತ್ತಿರುವವರು ಅಥವಾ ಗುಣಮುಖವಾಗುತ್ತಿರುವ ಹಂತದಲ್ಲಿರುವವರಿಗೆ ವ್ಯಾಯಾಮವು ಅತಿದೊಡ್ಡ ಒತ್ತಡ ನಿವಾರಣಾ ಅಂಶವಾಗಿದೆ. ಇದು ರೋಗ ಬೇಗ ಗುಣಮುಖವಾಗಲು ಮತ್ತು ಚಿಕಿತ್ಸೆಗೆ ಸೂಕ್ತ ಸ್ಪಂದನೆಯನ್ನು ನೀಡುತ್ತದೆ.

bc3

ಎಷ್ಟು ವ್ಯಾಯಾಮ ಸಾಕಾಗುತ್ತದೆ?
ಇತ್ತೀಚಿನ ಅಧ್ಯಯನದ ಪ್ರಕಾರ ಪ್ರತಿದಿನ ನೀವು ಕನಿಷ್ಠ ೩೦ ನಿಮಿಷಗಳ ಕಾಲ ಸಾಧಾರಣ ದೈಹಿಕ ವ್ಯಾಯಾಮ ಮಾಡಬೇಕು. ಇದರಿಂದ ಸ್ತನ ಕ್ಯಾನ್ಸರ್‌ನ ಅಪಾಯದ ಪ್ರಮಾಣ ಇಳಿಕೆಯಾಗುತ್ತದೆ.

* ಸ್ತನ ಕ್ಯಾನ್ಸರ್ ಅಪಾಯವನ್ನು ವ್ಯಾಯಾಮದ ಮೂಲಕ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು. ವಯಸ್ಕರು ವಾರಕ್ಕೆ ಕನಿಷ್ಠ ೧೫೦ ನಿಮಿಷಗಳ ಸಾಧಾರಣ ಅಥವಾ ೭೫ ನಿಮಿಷಗಳ ಕಾಲ ಕಠಿಣ ದೈಹಿಕ ಕಸರತ್ತು ಅಂದರೆ ವ್ಯಾಯಾಮಗಳನ್ನು ಮಾಡಬೇಕು.
* ಸ್ತನ ಕ್ಯಾನ್ಸರ್ ತಡೆಗೆ ಬಾಲ್ಯಾವಸ್ಥೆಯಿಂದಲೇ ಪ್ರತಿದಿನ ೧ ಗಂಟೆ ಕಾಲ ವ್ಯಾಯಾಮ ಮಾಡುವುದು ಸೂಕ್ತ. (ವಾರದಲ್ಲಿ ಕನಿಷ್ಠ ೩ ಗಂಟೆ ಕಾಲ ಕಠಿಣ ವ್ಯಾಯಾಮ ನಡೆಸಬೇಕಾಗುತ್ತದೆ).
* ಬ್ರಿಸ್ಕ್ ವಾಕಿಂಗ್, ಗಾರ್ಡನಿಂಗ್ ಅಥವಾ ಸೈಕ್ಲಿಂಗ್‌ನಂತಹ ಸಾಧಾರಣ-ತೀವ್ರವಾದ ದೈಹಿಕ ವ್ಯಾಯಾಮ ನಡೆಸಬೇಕು.
* ಆದರೆ, ಈ ಕಠಿಣ ವ್ಯಾಯಾಮದಲ್ಲಿ ರನ್ನಿಂಗ್, ವೇಗದ ಡ್ಯಾನ್ಸ್ ಕ್ಲಾಸ್‌ಗಳು, ಫುಟ್ಬಾಲ್ ಅಥವಾ ಇನ್ನಾವುದೇ ಹೃದಯ ಬಡಿತ ಹೆಚ್ಚಾಗುವಂತಹ ಅಥವಾ ಬೆವರು ಇಳಿಯುವಂತಹ ಚಟುವಟಿಕೆಗಳು ಇರಬಾರದು.
*ದೈಹಿಕ ಚಟುವಟಿಕೆ ಮಾಡುವುದರಿಂದ ಕೇವಲ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುವುದಷ್ಟೇ ಅಲ್ಲ, ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ರೋಗ ಮತ್ತೆ ಬರುವುದನ್ನು ತಪ್ಪಿಸುತ್ತದೆ.

Leave a Comment