ಸ್ತನ ಆಯ್ತು ಈಗ ತುಟಿಗೆ ಶಸ್ತ್ರಚಿಕಿತ್ಸೆ ಆಯಿಷಾ ಟಾಕಿಯಾ ಹೊಸ ಅವತಾರ

ಸಿನಿಮಾ ನಟಿಯರು ಮತ್ತು ಸೆಲೆಬ್ರಿಟಿಗಳು ಅಂದವಾಗಿ ಕಾಣಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ನಾನಾ ರೀತಿಯ ಅವತಾರಗಳನ್ನು ಎತ್ತುತ್ತಾರೆ.
ಅದರಲ್ಲಿಯೂ ಬಾಲಿವುಡ್‌ನ ನಟಿಯರು ಅಂದವಾಗಿ ಕಾಣಿಸಿಕೊಳ್ಳಲು ನಾನಾ ಅಂಗದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಮತ್ತಷ್ಟು ಸುಂದರವಾಗಿ ಕಾಣುತ್ತಾರೆ. ಇದೀಗ ಇಂತಹ ಸರದಿ ಮತ್ತೊಬ್ಬ ಬಾಲಿವುಡ್ ನಟಿ ಆಯಿಷಾ ಟಾಕಿಯಾ ಅವರದು.

ಈ ಹಿಂದೆ ಸ್ತನ ಕ್ಯಾನ್ಸರ್ ಮಾಡಿಕೊಂಡು ದೇಹದ ಸೌಂದರ್ಯ ಹಾಳು ಮಾಡಿಕೊಂಡಿದ್ದ ಬಾಲಿವುಡ್ ನಟಿ ಆಯಿಷಾ ಟಾಕಿಯಾ ಇದೀಗ ತುಟಿಯ ಶಸ್ತ್ರ ಚಿಕಿತ್ಸೆ ಮಾಡಿಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಅಭಿಮಾನಿಗಳಿಗೆ ಖುಷಿ ಪಡಿಸಲು ಇದೀಗ ವಿಭೀನ್ನ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಚಿತ್ರರಂಗದಲ್ಲಿ ಸದ್ದು ಮಾಡದ ಆಯಿಷಾ ಟಾಕಿಯಾ ಮತ್ತೆ ಸುದ್ದಿಯಲ್ಲಿದ್ದಾರೆ ಅದೇನೆಂದರೆ, ತುಟಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಈ ನಟಿ ಈಗ ಫೋಟೋ ಶೂಟ್ ಮೂಲಕ ಸದ್ದು ಮಾಡಿದ್ದಾರೆ. ಆಯಿಶಾ ಕೆಲ ದಿನಗಳ ಹಿಂದೆ ತನ್ನ ತುಟಿಗಳ ಸರ್ಜರಿ ಮಾಡಿಸಿಕೊಂಡಿದ್ದರು.
ಈ ಬಗ್ಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಕೆಲವರಂತೂ ಈ ರೀತಿಯ ಶಸ್ತ್ರ ಚಿಕಿತ್ಸೆಯಿಂದ ಆಯಿಶಾ ಸೌಂದರ್ಯ ಇದರಿಂದ ಹಾಳಾಗುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದಕ್ಕೆ ಕ್ಯಾರೆ ಅನ್ನದ ಈಗ ಫೋಟೋ ಶೂಟ್ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾಳೆ. ನಾನು ಮೊದಲಿನಂತೆ ಸುಂದರವಾಗಿದ್ದೇನೆಂಬುದನ್ನು ಅಭಿಮಾನಿಗಳಿಗೆ ಈ ಮೂಲಕ ಸಾರಿ ಹೇಳಿದ್ದಾರೆ.
ಈ ಹಿಂದೆ ಸ್ತನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಆಯಿಶಾ ದೇಹದ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಳು. ಹಾಗಾಗಿ ತುಟಿ ಸರ್ಜರಿ ಮಾಡಿಸಿಕೊಂಡು ಮತ್ತೊಂದು ಯಡವಟ್ಟು ಮಾಡಿಕೊಳ್ತಾಳೆ ಎಂಬ ಭಯದಲ್ಲಿದ್ದ ಅಭಿಮಾನಿಗಳು ಆಯಿಷಾ ಅವರ ಪೋಟೋ ಶೂಟ್‌ನೋಡಿ ಖುಷಿ ಪಟ್ಟಿದ್ದಾರೆ.

Leave a Comment