ಸ್ತನಪಾನ ಜಾಗೃತಿ ಕಾರ್ಯಕ್ರಮ

ಬೆಂಗಳೂರು.ಆ.೧೦-ಮಹಿಳೆಯರಲ್ಲಿ ಸ್ತನಪಾನದ ಬಗ್ಗೆ ಜಾಗೃತಿ ಮೂಡಿಸುವ ಅಂಗವಾಗಿ, ನಗರದ ಸಪ್ತಗಿರಿ ಆಸ್ಪತ್ರೆ ವತಿಯಿಂದ ಮಹಿಳೆಯರಲ್ಲಿ ಸ್ತನಪಾನ ಅರಿವು ಮೂಡಿಸಲು ಆ.೮ ಮತ್ತು ೯ ರಂದು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಗರ್ಭಿಣಿ, ಬಾಣಂತಿಯರು, ಸುತ್ತಮುತ್ತಲ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಂದ ರ್‍ಯಾಲಿ, ಚಿತ್ರ ಬಿಡಿಸುವ, ರಂಗೋಲಿ ಬಿಡಿಸುವ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು ನಾನಾ ರೀತಿಯಲ್ಲಿ ಮಹಿಳೆಯರಿಗೆ ಅರಿವು ಮೂಡಿಸಿದ ಕಾಲೇಜು ವಿದ್ಯಾರ್ಥಿಗಳು, ಆಸ್ಪತ್ರೆಯಿಂದ ಮಲ್ಲಸಂದ್ರದವರೆಗೆ ಜಾಗೃತಿ ಜಾಥಾ ನಡೆಸಿದರು. ನಂತರ ಸ್ತನ್ಯಪಾನದಿಂದ ಆಗುವ ಪ್ರಯೋಜನಗಳು, ಕಡೆಗಣಿಸಿದರೆ ಆಗುವ ತೊಂದರೆಗಳ ಕುರಿತು ಕಿರುನಾಟಕ ಪ್ರದರ್ಶಿಸಲಾಯಿತು.
ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದ ಮೂವರು ಮಕ್ಕಳಿಗೆ ಪ್ರಶಸ್ತಿ ನೀಡಲಾಯಿತು. ಬಾಣಂತಿರಿಗೆ ಹೆಲ್ತ್ ಕಿಟ್ ವಿತರಣೆ ಮಾಡಲಾಯಿತು.ಕಾಲೇಜಿನ ಅಧ್ಯP ಜಿ.ದಯಾನಂದ್, ನಿರ್ದೇಶಕ ಮನೋಜ್, ಆಸ್ಪತ್ರೆಯ ವೈದ್ಯರಾದ ಡಾ.ಚಕ್ರವರ್ತಿ, ಡಾ.ನಾಗರಾಜ್, ಡಾ.ದಿಶಾ, ಡಾ.ಮೇಘನಾ ಸಲ್ವರಾಜ್, ಡಾ.ಸೋಮಶೇಖರ್, ಡಾ.ಸರವಣನ್, ಡಾ.ವಿನೋದ್, ಡಾ.ವಿಮಲಾ ಮತ್ತಿತರರು ಈ ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

Leave a Comment