ಸ್ಟ್ರೋಕ್ ನಾವು ತಿಳಿದುಕೊಳ್ಳಲೇಬೇಕಾದ ವಿಷಯಗಳು . . . . . .

ಸ್ಟ್ರೋಕ್ ಇದು ಮಿದುಳಿನ ಮೇಲೆ ದಾಳಿ ಎಂದರೆ ತಪ್ಪಿಲ್ಲ. ಫ್ಲೇಕ್ಸ್ ಅಥವಾ ಎಂಬೋಲಸ್‌ನಿಂದ ದೇಹದ ಯಾವುದೇ ಭಾಗದಿಂದ ಮಿದುಳಿಗೆ ಪೂರೈಕೆ ಮಾಡುವ ರಕ್ತನಾಳಗಳು ಬಂದ್ ಅಥವಾ ಬ್ಲಾಕ್ ಆದರೆ ಜೀವಕಣಗಳು ಸತ್ತು ಹೋಗುತ್ತವೆ ಮತ್ತು ಸ್ಟ್ರೋಕ್ ಬಡಿಯುತ್ತದೆ. ಇದರ ಪರಿಣಾಮ ಮಿದುಳಿನಿಂದ ಕಾರ್ಯ ನಿರ್ವಹಿಸುವ ಮಿದುಳಿನ ಜೀವಕೋಶಗಳಲ್ಲಿ ಏರಿಳಿತ ಉಂಟಾಗುತ್ತದೆ ಅಥವಾ ನಿಷ್ಕ್ರಿಯವಾಗುತ್ತವೆ.

1-h

ಈ ಸ್ಟ್ರೋಕ್ ಸಂಭವಿಸುವ ಸಂದರ್ಭದಲ್ಲಿ ಬಹುತೇಕ ಕುಟುಂಬಗಳ ಸದಸ್ಯರು ಈ ಲಕ್ಷಣಗಳನ್ನು ಪತ್ತೆ ಮಾಡುತ್ತಾರೆ:-

ಮುಖದ ಕಾಂತಿಯಲ್ಲಿ ಕಳೆಗುಂದಿದಂತೆ ಕಂಡುಬರುವುದು ತೊದಲುತ್ತಾ ಮಾತನಾಡುವುದು, ಬಡಬಡಾಯಿಸುವುದು ಅಥವಾ ಮಾತನಾಡಲು ಕಷ್ಟಪಡುವುದು ಬಾಯಿಯಿಂದ ಜೊಲ್ಲು ಹೊರಸೂಸುವುದು ಕೈ ಅಥವಾ ಕಾಲಿನಲ್ಲಿ ನಿಶ್ಯಕ್ತಿ ಉಂಟಾಗುವುದು (ಕೆಲವೊಮ್ಮೆ ದೇಹದ ಒಂದು ಭಾಗ), ಗಂಭೀರ ಸ್ವರೂಪದ ತಲೆನೋವು ಬರುವುದು ಇತ್ಯಾದಿ ದೇಹದ ನಿರ್ದಿಷ್ಟ ಭಾಗ ಮರಗಟ್ಟುವುದು ಅಥವಾ ಚುಚ್ಚಿದರೂ ಸ್ಪರ್ಶ ಜ್ಞಾನವನ್ನು ಕಳೆದುಕೊಳ್ಳುವುದು ಸರಿಯಾಗಿ ನಡೆಯಲು ಬಾರದಿರುವುದು (ತೊಂದರೆಗೆ ಸಿಲುಕಿದಂತೆ ಅಡ್ಡಾದಿಡ್ಡಿ ನಡೆಯುವುದು) ಅಥವಾ ನಡೆಯುವಾಗ ಸಮತೋಲನೆಯನ್ನು ಕಳೆದುಕೊಳ್ಳುವುದು

ದೃಷ್ಟಿಯಲ್ಲಿ ಬದಲಾವಣೆ, ಮಂಜು ಮಂಜಾಗಿ ಕಾಣಿಸುವುದು ಅಥವಾ ಒಂದು ಕಣ್ಣು ಅಥವಾ ಎರಡೂ ಕಣ್ಣುಗಳು ಕಾಣಿಸದಂತಾಗುವುದು ತಲೆತಿರುಗುವಿಕೆ ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ನಿರಂತರವಾಗಿ ತಲೆನೋವು ಕಾಣಿಸಿಕೊಳ್ಳುವುದು ಗೊಂದಲಕ್ಕೀಡಾಗುವುದು ದೇಹದ ಯಾವುದೇ ಭಾಗ ಸ್ಪರ್ಶ ಜ್ಞಾನವನ್ನು ಕಳೆದುಕೊಳ್ಳುವುದು ನೆನಪಿನ ಶಕ್ತಿ ಇಲ್ಲದಂತಾಗುವುದು ವರ್ತನೆಯಲ್ಲಿ ಬದಲಾವಣೆ ಕಂಡು ಬರುವುದು ಮಾಂಸಖಂಡಗಳು ಬಿಗಿಗೊಳ್ಳುವುದು ಆಹಾರ ಪದಾರ್ಥ ಅಥವಾ ನೀರನ್ನು ನುಂಗುವಾಗ ತೊಂದರೆ ಅನುಭವಿಸುವುದು ಕಣ್ಣಿನ ಚಲನೆಯಲ್ಲಿ ವ್ಯತ್ಯಾಸ ಕಂಡುಬರುವುದು

1-h1

ಸ್ಟ್ರೋಕ್‌ಗೆ ತುತ್ತಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳು ಏನು?

ಸ್ಟ್ರೋಕ್‌ಗೆ ತುತ್ತಾದಾಗ ಆ ವ್ಯಕ್ತಿ ಸುತ್ತಮುತ್ತಲಿನ ಪ್ರದೇಶ ಸುರಕ್ಷಿತವೇ ಎಂಬುದನ್ನು ಮೊದಲು ಸರಿಪಡಿಸಿಕೊಳ್ಳಬೇಕು. ಉದಾಹರಣೆಗೆ ವಾಹನಗಳ ಸಂಚಾರ ಅಥವಾ ಪ್ರಾಣಿಗಳು ಓಡಾಡುವ ಪ್ರದೇಶವಾಗಿದ್ದರೆ ಅವರನ್ನು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ಕೊಂಡೊಯ್ಯಬೇಕು.

ಆ ವ್ಯಕ್ತಿಯ ಜತೆ ಮಾತನಾಡಬೇಕು. ಅವರ ಹೆಸರನ್ನು ಕೇಳುತ್ತಾ ಇನ್ನಿತರೆ ವಿಚಾರಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಕು.ಒಂದು ವೇಳೆ ಆ ವ್ಯಕ್ತಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗದಿದ್ದರೆ ಕೂಡಲೇ ಅವರಿಗೆ ನಿಮ್ಮ ಕೈಯನ್ನು ಬಿಗಿಯಾಗಿ ಹಿಡಿದುಕೊಳ್ಳುವಂತೆ ಸೂಚಿಸಿ ಪ್ರಶ್ನೆಗೆ ಉತ್ತರ ಪಡೆಯಲು ಪ್ರಯತ್ನಿಸಬೇಕು. ಒಂದು ವೇಳೆ ಸರಿಯಾಗಿ ಪ್ರತಿಕ್ರಿಯೆ ಬರದಿದ್ದರೆ ಆ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ ಎಂದು ಭಾವಿಸಬೇಕು.

ಆ ವ್ಯಕ್ತಿಯನ್ನು ಆರಾಮದಾಯಕ ಸ್ಥಿತಿಗೆ ತರಬೇಕು. ನಿಧಾನವಾಗಿ ಅವರ ತಲೆಯನ್ನು ಮತ್ತು ಭುಜಗಳನ್ನು ಎತ್ತಿತಲೆ ದಿಂಬು ಅಥವಾ ಮೆದುವಾದ ಬಟ್ಟೆಯ ಮೇಲಿಡಬೇಕು.ಇದಾದ ಬಳಿಕ ಒದ್ದಾಡದಂತೆ ನೋಡಿಕೊಳ್ಳಬೇಕು. ಬಿಗಿಯಾದ ಬಟ್ಟೆಗಳನ್ನು ಧರಿಸಿದ್ದರೆ ಅವುಗಳನ್ನು ತೆಗೆಯಬೇಕು. ಅಂಗಿಯ ಗುಂಡಿಗಳನ್ನು ಬಿಚ್ಚಬೇಕು, ಕಾಲರ್ ಅನ್ನು ಮೇಲಕ್ಕೆತ್ತಬೇಕು. ಒಂದು ವೇಳೆ ಅವರಿಗೆ ಚಳಿ ಕಾಣಿಸಿಕೊಂಡರೆ ಬ್ಲಾಂಕೆಟ್ ಅಥವಾ ಕೋಟ್ ಹಾಕಿ ದೇಹಕ್ಕೆಶಾಖ ಆಗುವಂತೆ ಮಾಡಬೇಕು.

ಅವರ ಸುತ್ತಲಿನಿಂದ ಸರಿಯಾಗಿ ಗಾಳಿ ಬರುವಂತೆ ಮಾಡಬೇಕು. ಒಂದು ವೇಳೆ ವಾಂತಿ ಬರುತ್ತಿದ್ದರೆ ಆ ವ್ಯಕ್ತಿಗೆ ಸರಿಯಾಗಿ ಉಸಿರಾಟಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಆರಾಮವಾಗಿ ಇರುವಂತೆ ನೋಡಿಕೊಳ್ಳಬೇಕು ಆ ವ್ಯಕ್ತಿಗೆ ನಿಮ್ಮ ನೆರವಿಗೆ ವೈದ್ಯರು ಬರುತ್ತಿದ್ದಾರೆಂದು ಹೇಳಬೇಕು. ಈ ಸಂದರ್ಭದಲ್ಲಿ ಯಾವುದೇ ಆಹಾರ ಪದಾರ್ಥ ಅಥವಾ ದ್ರಾವಣಗಳನ್ನು ನೀಡಬಾರದು.

ಆ ವ್ಯಕ್ತಿಯ ಮುಖಭಾವನೆಯಲ್ಲಿ ಬದಲಾವಣೆ ಆಗುತ್ತಿರುವ ಲಕ್ಷಣಗಳನ್ನು ಗಮನಿಸಬೇಕು. ಇದು ತುರ್ತುಚಿಕಿತ್ಸೆ ನೀಡಲು ಚಿಕಿತ್ಸಾ ಸಿಬ್ಬಂದಿಗೆ ಅತ್ಯಂತ ಮುಖ್ಯವಾಗಿ ಬೇಕಾಗಿರುವ ಅಂಶವಾಗಿರುತ್ತದೆ.

ಈ ಲಕ್ಷಣಗಳು ಕಾಣಿಸಿಕೊಂಡ ಸಮಯವನ್ನು ನೆನಪಿನಲ್ಲಿಡಿ, ಆ ಸಂದರ್ಭದಲ್ಲಿ ಸಮಯವನ್ನು ನೋಡಿಕೊಳ್ಳುವುದು ಸೂಕ್ತ. ಏಕೆಂದರೆ, ಇಂತಹ ಧಾವಂತದ ಸಂದರ್ಭದಲ್ಲಿ ಎಷ್ಟು ಸಮಯಕ್ಕೆ ಈ ಘಟನೆ ಆಯಿತು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟವಾಗುತ್ತದೆ.

ಈ ಸ್ಟ್ರೋಕ್‌ಗೆ ಯಾವುದಾದರೂ ಸೂಕ್ತ ಅಥವಾ ನಿರ್ದಿಷ್ಟ ಚಿಕಿತ್ಸೆ ಇದೆಯೇ?

ಈ ಪ್ರಶ್ನೆಗೆ ಉತ್ತರ ಹೌದು ಮತ್ತು ಇಲ್ಲ. ಈ ಸ್ಟ್ರೋಕ್ ಸಂಭವಿಸಿದ ನಂತರದ ನಿರ್ದಿಷ್ಟ ಸಮಯದಲ್ಲಿ ಥ್ರಂಬೋಲಿಟಿಕ್ ಥೆರಪಿ ಆರಂಭಿಸಿದರೆ ಚಿಕಿತ್ಸೆ ಇದೆ ಎಂದು ಹೇಳಬಹುದು. ಒಂದು ವೇಳೆ ತಡವಾದರೆ ಚಿಕಿತ್ಸೆ ಇಲ್ಲ ಎಂದು ಹೇಳಬಹುದು. ಸ್ಟ್ರೋಕ್ ಆಗಿದೆ ಎಂಬ ಅನುಮಾನಗಳು ಬಂದಾಗ ಮೊದಲು ನಿರ್ವಹಿಸಬೇಕಾದ ಕೆಲಸವೆಂದರೆ ‘ಸಮಯ’. ಈ ಸಮಯ ರೋಗಿಗೆ ಅತ್ಯಂತ ಅಮೂಲ್ಯವಾದುದು. ಸ್ಟ್ರೋಕ್ ಆದ ತಕ್ಷಣ ಥ್ರಂಬೋಲಿಸಿಸ್ ಥೆರಪಿ (ಔಷಧದ ಮೂಲಕ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿರ್ಮೂಲನೆ ಮಾಡುವ ಚಿಕಿತ್ಸೆ) ಯನ್ನು ೪-೫ ಗಂಟೆಯಲ್ಲಿ ಪಡೆಯುವುದು ಅತ್ಯಂತ ಸೂಕ್ತ ಎಂದು ಅಮೇರಿಕಾ ಸ್ಟ್ರೋಕ್ ಅಸೋಸಿಯೇಷನ್ ಶಿಫಾರಸು ಮಾಡಿದೆ.

ಸ್ಟ್ರೋಕ್ ಬಗ್ಗೆ ಅನುಮಾನ ಅಥವಾ ಸ್ಟ್ರೋಕ್ ಆಗಿದೆ ಎಂದು ತಿಳಿದ ತಕ್ಷಣ ಈ ಥ್ರಂಬೋಲಿಸಿಸ್ ಚಿಕಿತ್ಸೆಯನ್ನು ಯಾವ ಆಸ್ಪತ್ರೆಯಲ್ಲಿ ನೀಡಲಾಗುತ್ತದೆ ಎಂಬುದನ್ನು ಪತ್ತೆ ಮಾಡಿಕೊಳ್ಳಬೇಕು.ತೃತೀಯ ಮಟ್ಟದ ಬಹುತೇಕ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆ ನೀಡಲಾಗುತ್ತದೆ. ನರರೋಗ ತಜ್ಞರ ಮಾರ್ಗದರ್ಶನದಲ್ಲಿ ಈ ಚಿಕಿತ್ಸೆಯನ್ನು ನೀಡಲಾಗುತ್ತದೆ.

ಸ್ಟ್ರೋಕ್ ಆದತಕ್ಷಣ ನಾನು ಆಸ್ಪಿರಿನ್ ಮಾತ್ರೆಯನ್ನು ನೀಡಬಹುದೇ?

ವೈದ್ಯಕೀಯೇತರ ವ್ಯಕ್ತಿಗಳು ಈ ಆಸ್ಪಿರಿನ್ ಔಷಧಿಯನ್ನು ನಿರ್ವಹಣೆ ಅಥವಾ ಕೊಡುವಂತಿಲ್ಲ. ಇದರಿಂದ ಸ್ಟ್ರೋಕ್ ಜತೆ ಜತೆಯಲ್ಲೇ ರಕ್ತಸ್ರಾವ ಉಂಟಾಗುವ ಸಾಧ್ಯತೆಗಳಿರುತ್ತವೆ. ಆಂಟಿ ಪ್ಲೇಟ್ಲೇಟ್ ಔಷಧಿಗಳಾದ ಆಸ್ಪಿರಿನ್ ಅಥವಾ ಕ್ಲೋಪಿಡೋಗ್ರೆಲ್ ಅನ್ನು ನೀಡುವ ಬಗ್ಗೆ ವೈದ್ಯರೇ ನಿರ್ಧಾರ ಮಾಡಬೇಕು. ಇಂಟೆನ್ಸಿವಿಸ್ಟ್ ಎಂಆರ್‌ಐ ಅಥವಾ ಸಿಟಿಗೆ ಶಿಫಾರಸು ಮಾಡಬಹುದು.ಸ್ಟ್ರೋಕ್ ಯಾವ ಮಟ್ಟದ್ದು ಎಂಬುದರ ಆಧಾರದ ಮೇಲೆ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅಲ್ಲದೇ, ಸ್ಟ್ರೋಕ್ ಲಕ್ಷಣಗಳು ಕಂಡುಬಂದ ಸಮಯದ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಸ್ಟ್ರೋಕ್ ಬರುವ ಮುನ್ನೆಚ್ಚರಿಕೆಗಳಿವೆಯೇ?

ಕೆಲವೊಮ್ಮೆ, ನಿಶ್ಯಕ್ತಿ ಅಥವಾ ತಲೆ ಸುತ್ತಿಕಣ್ಣು ಮಂಜು ಆಗುವುದರ ಮೂಲಕ ಸ್ಟ್ರೋಕ್ ಆಗುತ್ತದೆ. ಈ ನಿಶ್ಯಕ್ತಿ ಕಾಣಿಸಿಕೊಂಡ  ಕೆಲವೇ ಕ್ಷಣಗಳಲ್ಲಿ ಅಥವಾ ಕೆಲವು ಗಂಟೆಗಳಲ್ಲಿ ಸ್ಟ್ರೋಕ್ ಹೊಡೆಯಬಹುದು.ಇದನ್ನು ಟ್ರಾನ್ಸಿಯೆಂಟ್ ಇಶೆಮಿಕ್ ಅಟ್ಯಾಕ್ ಎನ್ನುತ್ತೇವೆ. ಹಾನಿಗೊಳಗಾದ ಹೃದಯ ಅಥವಾ ಕುತ್ತಿಗೆಯ ರಕ್ತನಾಳಗಳಲ್ಲಿ ಹಾನಿ ಉಂಟಾಗಿದ್ದರೆ ರಕ್ತ ಹೆಪ್ಪು ಗಟ್ಟುತ್ತದೆ ಅಥವಾ ಬ್ಲಾಕ್ ಆಗುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಪಡೆದರೆ ಇದನ್ನು ತಡೆಯಬಹುದಾಗಿದೆ.

Leave a Comment