ಸ್ಟಾರ್ ಆಟಗಾರರ ವಿಶೇಷ ಸ್ನೇಹಿತರು

ಟೀಂ  ಇಂಡಿಯಾದ ಸ್ಟಾರ್ ಆಟಗಾರರು ಇತ್ತೀಚಿನ ದಿನಗಳಲ್ಲಿ ತಮ್ಮ ವಿಶೇಷ ಸ್ನೇಹಿತರ ಜೊತೆ ಸಮಯ ಕಳೆಯುತ್ತಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಆರಂಭಿಕ ಬ್ಯಾಟ್ಸ್ ಮೆನ್ ರೋಹಿತ್ ಶರ್ಮಾ ಸೇರಿದಂತೆ ಕೆಲ ಆಟಗಾರರು ಸ್ನೇಹಿತರ ಜೊತೆ ಕಾಲ ಕಳೆದು ರಿಲ್ಯಾಕ್ಸ್ ಆಗುತ್ತಿದ್ದಾರೆ, ಆ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿವೆ.

ಹೌದು ಅಷ್ಟಕ್ಕೂ ಕೊಹ್ಲಿ, ಧೋನಿ, ಶರ್ಮಾ ಒತ್ತಡ ಕಡಿಮೆ ಮಾಡ್ತಿರುವ ಸ್ನೇಹಿತರು ಮತ್ತ್ಯಾರೂ ಅಲ್ಲ. ಅವರ ಸಾಕು ನಾಯಿಗಳು. ಧೋನಿ ಹಾಗೂ ಕೊಹ್ಲಿ ಇನ್ಸ್ಟ್ರಾಗ್ರಾಮ್‌ನಲ್ಲಿ ಸಾಕು ನಾಯಿ ಜೊತೆಗಿರುವ ಪೋಟೋವನ್ನೂ ಹಾಕಿದ್ದಾರೆ. ಸದ್ಯ ಇಂಗ್ಲೆಂಡ್ ನಲ್ಲಿರುವ ಕೊಹ್ಲಿ, ಪತ್ನಿ ಅನುಷ್ಕಾ ಜೊತೆ ಸಮಯ ಕಳೆಯುತ್ತಿದ್ದಾರೆ. ಕೊಹ್ಲಿ, ಅನುಷ್ಕಾ ಜೊತೆ ನಾಯಿಯಿರುವ ಫೋಟೋವನ್ನು ಇನ್ಸ್ಟ್ರಾಗ್ರಾಮ್‌ಗೆ ಹಾಕಿರುವ ಕೊಹ್ಲಿ, ನೋಡಿ ಸುಂದರ ಹುಡುಗ. ನಮ್ಮ ಜೊತೆ ಫೋಟೋ ಕ್ಲಿಕ್ಕಿಸುವಾಗ ತಾಳ್ಮೆಯಿಂದಿದ್ದ ಎಂದು ಶೀರ್ಷಿಕೆ ಹಾಕಿದ್ದಾರೆ. ಇನ್ನು ರಾಂಚಿಯಲ್ಲಿರುವ ಧೋನಿ ಕೂಡ ವಿಡಿಯೋ ಹಂಚಿಕೊಂಡಿದ್ದಾರೆ. ಐದು ನಾಯಿಗಳಿಗೆ ತರಬೇತಿ ನೀಡುತ್ತ ರಿಲ್ಯಾಕ್ಸ್ ಆಗ್ತಿದ್ದಾರೆ ಧೋನಿ. ಇನ್ನು ರೋಹಿತ್ ಶರ್ಮಾ ಕೂಡ ನಾಯಿ ಫೋಟೋವನ್ನು ಹಾಕಿ ಹ್ಯಾಪಿ ಬರ್ತ್ ಡೇ ಮೇನ್ ಮ್ಯಾನ್ ಎಂದು ಶೀರ್ಷಿಕೆ ಹಾಕಿದ್ದಾರೆ.

ಪ್ರಾಣಿಗಳ ನೆರವಿಗೂ ನಿಂತ ವಿರುಷ್ಕಾ

ಪ್ರವಾಹದಿಂದಾಗಿ ಕೇರಳಿಗರ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಪ್ರವಾಹ ಸಂತ್ರಸ್ತರ ನೆರವಿಗೆ ಇಡೀ ದೇಶವೇ ಮುಂದೆ ಬಂದಿದೆ. ಅನೇಕ ಖ್ಯಾತನಾಮರು ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಇದರ ಜೊತೆ ಪ್ರವಾಹದಿಂದ ತತ್ತರಿಸಿರುವ ಪ್ರಾಣಿಗಳ ಬಗ್ಗೆಯೂ ಕೆಲ ಸೆಲೆಬ್ರಿಟಿಗಳು ಕಾಳಜಿ ವಹಿಸುತ್ತಿದ್ದಾರೆ.

ಪ್ರಾಣಿಗಳ ಸಹಾಯಕ್ಕೆ ನಿಂತ ಸೆಲೆಬ್ರಿಟಿಗಳಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೂಡ ಹಿಂದೆ ಬಿದ್ದಿಲ್ಲ. ವಿರುಷ್ಕಾ ಟ್ರಕ್ ಒಂದನ್ನು ಸ್ಪಾನ್ಸರ್ ಮಾಡಿದ್ದಾರಂತೆ. ಪ್ರಾಣಿಗಳಿಗೆ ಆಹಾರ ಹಾಗೂ ಔಷಧಿ ನೀಡಲು ಇದನ್ನು ಬಳಸಿಕೊಳ್ಳಲಾಗ್ತಿದೆಯಂತೆ. ಕೇರಳದ ಸ್ಥಳೀಯ ಎನ್‌ಜಿಓ ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಎನ್‌ಜಿಒ ೮ ರಕ್ಷಣಾ ಜನರ ತಂಡವನ್ನು ಪ್ರಾಣಿಗಳ ರಕ್ಷಣೆಗೆ ಕಳುಹಿಸಿದೆಯಂತೆ.

ಕೇರಳದ ಪ್ರವಾಹದಲ್ಲಿ ಸಿಲುಕಿರುವ ಪ್ರಾಣಿಗಳಿಗೆ ಆದಷ್ಟು ಬೇಗ ಸಹಾಯ ಸಿಗಲಿ ಎನ್ನವುದು ವಿರುಷ್ಕಾ ಬಯಕೆಯಂತೆ. ಈಗಾಗಲೇ ಕೆಲ ಪ್ರಾಣಿಗಳ ರಕ್ಷಣೆ ಕಾರ್ಯ ನಡೆದಿದೆ ಎಂದು ಮೂಲಗಳು ಹೇಳಿವೆ.

Leave a Comment