ಸ್ಕ್ವಾಷ್ ವಿಭಾಗದಲ್ಲಿ ಫೈನಲ್‌ಗೆ ಭಾರತೀಯ ವನಿತೆಯರು

ಜಕಾರ್ತ, ಆ ೩೧- ಏಷ್ಯನ್ ಕ್ರೀಡಾಕೂಟದಲ್ಲಿನ ಸ್ಕ್ವಾಷ್ ವಿಭಾಗದಲ್ಲಿ ಭಾರತದ ಮಹಿಳೆಯರ ತಂಡ ಅತ್ಯುತ್ತಮ ಪದ್ರರ್ಶನ ಮುಂದುವರೆಸಿದ್ದು, ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚಾಂಪಿಯನ್ ಮಲೇಷ್ಯಾ ತಂಡವನ್ನು ಮಣಿಸಿ ಭಾರತದ ವನಿತೆಯರು ಫೈನಲ್ ಪ್ರವೇಶಿಸಿದ್ದಾರೆ.

ಭಾರತ ತಂಡ ಮಲೇಷ್ಯಾವನ್ನು ೨-೦ ಅಂತರದಲ್ಲಿ ಸೋಲಿಸಿತು. ಇದರೊಂದಿಗೆ ಭಾರತಕ್ಕೆ ಮತ್ತೊಂದು ಬೆಳ್ಳಿ ಪಡಕವನ್ನು ಖಚಿತಪಡಿಸಿದೆ.

ಭಾರತ ತಂಡದಲ್ಲಿ ಜೋಷ್ನ ಚಿನ್ನಪ್ಪ, ದೀಪಿಕಾ ಪಲಿಕಲ್ ಕಾರ್ತಿಕ್, ಸುನೈನಾ ಕುರುವಿಲ್ಲಾ ಮತ್ತು ತನ್ವಿ ಖನ್ನಾ ಅವರನ್ನೊಳಗೊಂಡ ತಂಡವು ಮಲೇಷ್ಯಾ ತಂಡವನ್ನು ಮಣಿಸಿ ಗೆಲುವಿನ ನಗೆ ಬೀರಿದೆ. ಭಾರತ ಪುರುಷತಂಡ ಸೆಮಿಫೈನಲ್‌ನಲ್ಲಿ ಹಾಂಕಾಂಗ್ ವಿರುದ್ಧ ಸೆಣಸಲಿದೆ.

Leave a Comment