ಸ್ಕ್ರಿಪ್ಟ್ ಇಲ್ಲದ ಬೆಂಕಿಯಬಲೆ

ಈ  ಹಿಂದೆ ತೆರೆಗೆ ಬಂದಿದ್ದ ಬೆಂಕಿಯ ಬಲೆ ಮತ್ತೊಮ್ಮೆ ಅದೇ ಹೆಸರಿನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಬಾರಿ ಹೊಸ ಪ್ರತಿಭೆಗಳೇ ಚಿತ್ರ ಮಾಡುತ್ತಿರುವುದು ವಿಶೇಷ.

ನಟನೆ,ನಿರ್ಮಾಣ ಮತ್ತು ನಿರ್ದೇಶನದೊಂದಿಗೆ ಶಿವಾಜಿ ಸಾಮಾಜಿಕ ಕಳಕಳಿಯ ಚಿತ್ರವನ್ನು ತೆರೆಗೆ ತರಲು ಸಜ್ಜಾಗಿದ್ದು ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ ಅಕ್ಟೋಬರ್ ಮತ್ತು ನವಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ.ಕಳೆದವಾರ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಇತ್ತು.ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡ ಸೇರಿದಂತೆ ಮತ್ತಿತರರು ಭಾಗವಹಿಸಿ ಚಿತ್ರಕ್ಕೆ ಮತ್ತು ತಂಡಕ್ಕೆ ಶುಭವಾಗಲಿ ಎಂದು ಹಾರೈಸಿದರು.

benkiya-bale_166

ಈ ವೇಳೆ ಮಾತಿಗಿಳಿದ ನಟ, ನಿರ್ದೇಶಕ,ನಿರ್ಮಾಪಕ ಶಿವಾಜಿ, ಸಿನಿಮಾದ ನಿರ್ದೇಶನದ ಗಂಧಗಾಳಿ ಗೊತ್ತಿಲ್ಲ.ಸ್ಕಿಪ್ಟ್ ಗೊತ್ತಿಲ್ಲದ ಚಿತ್ರ ಮಾಡುತ್ತಾರೆ ಎಂದು ನಂಬುವುದೇ ಕಷ್ಟ. ಆದರೂ ಅಂತಹ ಕೆಲಸ ಮಾಡಿದ್ದೇನೆ. ನೀವು ಮೆಂಟಲ್ ಶಿವಾಜಿ ಅಂತ ಕರೆದರೂ ಅಡ್ಡಿಯಿಲ್ಲ. ಸಾಮಾಜಿಕ ಕಳಕಳಿಯೇ ನ್ನ ಮೂಲ ಉದ್ದೇಶ.

ಚಿತ್ರಕ್ಕೆ ಕಥೆ, ಚಿತ್ರಕತೆ ಯಾವುದನ್ನು ಸಿದ್ದ ಮಾಡಿಕೊಳ್ಳದೆ ನಿಜ ಜೀವನದಲ್ಲಿ ನಡೆದ ಘಟನೆಗಳನ್ನೇ ಆಧರಿಸಿ ಚಿತ್ರೀಕರಣದ ಸ್ಥಳದಲ್ಲಿಯೇ ಕಲಾವಿದರಿಂದ ಸಂಭಾಷಣೆ ಹೇಳಿಸಿ ಚಿತ್ರ ಮಾಡಲಾಗಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ.

benkiya-bale_128

ಚಿತ್ರದಲ್ಲಿ ಮನುಷ್ಯನ ದುರಾಸೆ, ತಪ್ಪು ಎನ್ನುವುದೂ ಗೊತ್ತಿತ್ತದೂ ತಪ್ಪು ಮಾಡಿ ಸಮಸ್ಯೆ ಎದುರಿಸುವುದು, ದುಷ್ಟಚಟಗಳಿಗೆ ದಾಸನಾಗಿ ಎದುರಿಸುವ ಸಮಸ್ಯೆಗಳ ಕುರಿತಾದ ಚಿತ್ರವನ್ನು ಮಾಡಲಾಗಿದೆ.ಅಲ್ಲದೆ ಧೂಮಪಾನ , ಮಧ್ಯಪಾನ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ ಎಂದರು. ಚಿತ್ರದಲ್ಲಿ ನಿರಂಜನ್, ದೇಶಪ್ರೇಮಿ, ಸಲ್ಮಾನ್, ಮಡಿಕೇರಿ ಪ್ರೀತಿ, ಸುಮಾಗೌಡ,ಪವಿತ್ರಾ, ಪ್ರಿಯಾ ಪಾಂಡೆ ಮತ್ತಿತರಿದ್ದಾರೆ. ಚಿತ್ರದಲ್ಲಿ ಬರುವ ಆದಾಯವನ್ನು ಸಾಮಜಿಕ ಕಳಕಳಿಗೆ ಮೀಸಲಿಡಲಾಗುವುದು, ಚಿತ್ರರಂಗದಿಂದ ಹಣ ಮಾಡಲು ಬಂದಿಲ್ಲ. ಜನರಿಗೆ ಸಹಾಯವಾದರೆ ಅದೇ ಜೀವನದ ಪುಣ್ಯ ಎಂದು ಹೇಳಿಕೊಂಡರು.

Leave a Comment